ನವದೆಹಲಿ: ಮುಂಬರುವ ಹಬ್ಬದ ಋತುವಿನಲ್ಲಿ, ಇ-ಕಾಮರ್ಸ್ ಕಂಪನಿಗಳು ದೇಶದ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಲಿವೆ. ಅಮೆಜಾನ್ ಮತ್ತು ಇ-ಕಾಮ್ ಎಕ್ಸ್‌ಪ್ರೆಸ್ ನಂತರ, ಇದೀಗ ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ (Flipkart) ಕೂಡ ಇದನ್ನು ಘೋಷಿಸಿದೆ. ಕೊರೊನಾ ವೈರಸ್ ಅವಧಿಯಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹಬ್ಬದ ರುತುವಿಗೂ ಮುಂಚಿತವಾಗಿ ಜನರಿಗೆ ತಾತ್ಕಾಲಿಕ ಉದ್ಯೋಗ ಸಿಗುವ ನಿರೀಕ್ಷೆಯಿದೆ, ಇದರಿಂದ ನೌಕರಿ ಕಳೆದುಕೊಂಡವರಿಗೆ ಸ್ವಲ್ಪ ನೆಮ್ಮದಿ ಸಿಗಲಿದೆ.
70 ಸಾವಿರ ಜನರಿಗೆ ಸಿಗಲಿದೆ ಉದ್ಯೋಗಾವಕಾಶ
ಈ ಕುರಿತು ಹೇಳಿಕೆ ನೀಡಿರುವ ಫ್ಲಿಪ್ ಕಾರ್ಟ್ ಹಬ್ಬದ ರುತುವಿಗೂ ಮುಂಚಿತವಾಗಿ ಹಾಗೂ ಬಿಗ್ ಬಿಲಿಯನ್ ಡೇಜ್ ಸೇಲ್ಸ್ ಅವದ್ಧಿಯಲ್ಲಿ ದೇಶದ ಸುಮಾರು 70 ಸಾವಿರಕ್ಕೂ ಅಧಿಕ ಜನರು ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶ ಪಡೆದುಕೊಳ್ಳಲಿದ್ದಾರೆ. ಫ್ಲಿಪ್ಕಾರ್ಟ್ನ ಸಂಪೂರ್ಣ ಪೂರೈಕೆ ಸರಪಳಿಯು ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಆದರೆ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಮಾರಾಟ ಪಾಲುದಾರ ಕೇಂದ್ರಗಳು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಬೆಂಗಳೂರು ಮೂಲದ ಕಂಪನಿ ಹೇಳಿದೆ.
ಯಾರಿಗೆ ಸಿಗಲಿದೆ ಉದ್ಯೋಗಾವಕಾಶ?
ಹಬ್ಬದ, ಋತುವಿನಲ್ಲಿ ಮಾರಾಟ ಸ್ಥಳಗಳಿಂದ ಸರಕು ಸಾಗಣೆ ಪಾಲುದಾರರು ಸೇರಿದಂತೆ ಎಲ್ಲಾ ಪೂರಕ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳು ಸಿದ್ಧವಾಗುತ್ತವೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಬ್ಬದ ಮಾರಾಟದ ಸಮಯದಲ್ಲಿ, ವ್ಯವಹಾರದ ಹೆಚ್ಚಿನ ಭಾಗವು ಇ-ಕಾಮರ್ಸ್ ಕಂಪನಿಗಳ ಖಾತೆಗೆ ಹೋಗುತ್ತದೆ ಮತ್ತು ಈ ಅವಕಾಶದ ಲಾಭವನ್ನು ಪಡೆಯಲು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಅವು ಸಾಕಷ್ಟು ಹೂಡಿಕೆ ಮಾಡಲಿವೆ. ಕಳೆದ ವರ್ಷ, ಫ್ಲಿಪ್ಕಾರ್ಟ್ ಮತ್ತು ಅದರ ಪ್ರತಿಸ್ಪರ್ಧಿ ಅಮೆಜಾನ್ ಹಬ್ಬದ ಮಾರಾಟದ ಸಮಯದಲ್ಲಿ 1.4 ಲಕ್ಷಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಘೋಷಿಸಿದ್ದವು. ಹಬ್ಬದ ಮಾರಾಟದ ಸಮಯದಲ್ಲಿ ಸಾಮರ್ಥ್ಯ, ಸಂಗ್ರಹಣೆ, ವಿಂಗಡಣೆ, ಪ್ಯಾಕೇಜಿಂಗ್, ಮಾನವ ಸಂಪನ್ಮೂಲ, ತರಬೇತಿ ಮತ್ತು ವಿತರಣೆಗಾಗಿ ಹೆಚ್ಚಿನ ಹೂಡಿಕೆ ಮಾಡುವುದಾಗಿ ಫ್ಲಿಪ್‌ಕಾರ್ಟ್ ಹೇಳಿದೆ, ಇದು ಹಬ್ಬದ ಋತುವಿನಲ್ಲಿ ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸಲು ಸಹಕಾರಿಯಾಗಲಿದೆ ಎಂದು ಕಂಪನಿ ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ಫ್ಲಿಪ್ ಕಾರಟ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ, "ಒಂದು ಪ್ರಭಾವಶಾಲಿ ಪಾರ್ಟನರ್ ಶಿಪ್ ನಿರ್ಮಾಣದ ಮೇಲೆ ನಾವು ನಮ್ಮ ಗಮನ ಕೇಂದ್ರೀಕರಿಸಿದ್ದೇವೆ. ಇದು ಸಂಪೂರ್ಣ ಪರಿಸ್ಥಿತಿಯ ತಂತ್ರವನ್ನು ಮುಂದಕ್ಕೆ ಕೊಂಡೊಯ್ಯಲಿದೆ " ಎಂದಿದ್ದಾರೆ.