Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!

ಈ ವಿಡಿಯೋದಲ್ಲಿ ಆ ಮಹಿಳೆ ತನ್ನ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಇಬ್ಬರಿಗೂ ಚಪ್ಪಲಿಯಲ್ಲಿ ಭಾರಿಸಿ ಬುದ್ದಿ ಕಲಿಸಿದ್ದಾಳೆ.

Written by - Puttaraj K Alur | Last Updated : Oct 19, 2021, 01:23 PM IST
  • ಜಿಮ್‌ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ವರ್ಕೌಟ್ ಮಾಡುತ್ತಿದ್ದ ಪತಿ
  • ರೆಡ್ ಹ್ಯಾಂಡ್ ಹಿಡಿದ ಪತ್ನಿ ಇಬ್ಬರಿಗೂ ಸರಿಯಾಗಿ ಪಾಠ ಕಲಿಸಿದ್ದಾಳೆ
  • ಪತಿ ಮತ್ತು ಆತನ ಗೆಳತಿಗೆ ಚಪ್ಪಲಿಯಲ್ಲಿ ಭಾರಿಸಿರುವ ವಿಡಿಯೋ ವೈರಲ್
Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..! title=
ಪತಿ ಮತ್ತು ಗೆಳಿತಿಗೆ ಚಪ್ಪಲಿಯಲ್ಲಿ ಭಾರಿಸಿದ ಪತ್ನಿ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಾಲಿವುಡ್ ನ ‘ಪತಿ, ಪತ್ನಿ ಔರ್ ವೋಹ್’(Pati Patni Aur Woh) ಸಿನಿಮಾದ ರೀತಿ ನೈಜ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿಯನ್ನು ಜಿಮ್‌(Gym)ನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಅವರಿಬ್ಬರಿಗೂ ಸರಿಯಾಗಿ ಪಾಠ ಕಲಿಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆ ಮಹಿಳೆ ತನ್ನ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಇಬ್ಬರಿಗೂ ಚಪ್ಪಲಿಯಲ್ಲಿ ಭಾರಿಸಿ ಬುದ್ದಿ ಕಲಿಸಿದ್ದಾಳೆ.

ವೈರಲ್ ಆದ ಈ ವಿಡಿಯೋ(Viral Video)ದಲ್ಲಿ 30 ವರ್ಷದ ಮಹಿಳೆ ತನ್ನ ಸಹೋದರಿಯೊಂದಿಗೆ ಜಿಮ್ ಗೆ ಬಂದಿದ್ದಾಳೆ. ಈ ವೇಳೆ ಆಕೆಯ ಪತಿ ತನ್ನ ಗೆಳತಿ ಮತ್ತು ಇತರರ ಸಮ್ಮುಖದಲ್ಲಿ ವ್ಯಾಯಾಮ ಮಾಡುತ್ತಿದ್ದ. ತನ್ನ ಗಂಡ ಬೇರೊಬ್ಬ ಮಹಿಳೆ ಜೊತೆ ಸಂಬಂಧ ಹೊಂದಿದ್ದಾನೆಂದು ಬಹಳ ಸಮಯದಿಂದ ಅನುಮಾನಿಸುತ್ತಿದ್ದ ಕಾರಣ ಅದನ್ನು ಪತ್ತೆ ಹಚ್ಚಲು ಆಕೆ ನಿರ್ಧರಿಸಿದ್ದಳು. ಹೀಗಾಗಿ ಆಕೆ ಜಿಮ್(Gym) ತಲುಪಿದಾಗ ಪತಿಯು ಬೇರೊಂದು ಹುಡುಗಿಯ ಜೊತೆ ವ್ಯಾಯಾಮ ಮಾಡುತ್ತಿರುವುದನ್ನು ಕಂಡಿದ್ದಾಳೆ. ಕೂಡಲೇ ಅವರ ಬಳಿ ಹೋದ ಆಕೆ ನೀನು ಈ ಯುವತಿಯ ಜೊತೆ ಸಂಬಂಧ ಹೊಂದಿದ್ದೀಯಾ ಎಂದು ರೇಗಾಡಿದ್ದಾಳೆ.

ಇದನ್ನೂ ಓದಿ: Facebook: ಫೇಸ್‌ಬುಕ್ ನಿಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿದೆಯೇ? ಈ ರೀತಿ ಪತ್ತೆ ಹಚ್ಚಿ

ಇದ್ದಕ್ಕಿದ್ದಂತೆ ತನ್ನ ಪತ್ನಿ ಜಿಮ್ ಗೆ ಬಂದಿದ್ದನ್ನು ಕಂಡು ಪತಿ ಹೌಹಾರಿ ಹೋಗಿದ್ದಾನೆ. ಕೋಪದಲ್ಲಿದ್ದ ಪತ್ನಿಯನ್ನು ಸಮಾಧಾನಪಡಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಿಲ್ಲ. ತನ್ನ ಪತ್ನಿಯ ಆರೋಪವನ್ನು ನಿರಾಕರಿಸಿದ ಆತ ಆಕೆಗೆ ಬೈಯಲು ಶುರುವಿಟ್ಟುಕೊಂಡಿದ್ದಾನೆ.  ಇದರಿಂದ ಕೋಪ ನೆತ್ತಿಗೇರಿಸಿಕೊಂಡ ಆಕೆ ಮೊದಲು ಪತಿಯ ಜೊತೆಗಿದ್ದ ಮಹಿಳೆ ಮೇಲೆ ಚಪ್ಪಲಿಯಿಂದ ಹೊಡೆಯಲು ಆರಂಭಿಸಿದ್ದಾಳೆ. ಈ ವೇಳೆ ಆಕೆಯನ್ನು ಬಿಡಿಸಲು ಬಂದ ಪತಿಗೂ ಚಪ್ಪಲಿಯಿಂದ ಭಾರಿಸಿದ್ದಾಳೆ.

ರಾಜಧಾನಿಯ ಕೊಹ್-ಇ-ಫಿಜಾ ಪ್ರದೇಶದಲ್ಲಿ ಅ.15ರಂದು ಈ ಘಟನೆ ನಡೆದಿದ್ದು, ವಿಡಿಯೋ ವೈರಲ್(Video Viral) ಆದ ನಂತರ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಹಿಳೆ ಮತ್ತು ಆಕೆಯ ಪತಿ ಪರಸ್ಪರ ದೂರುಗಳನ್ನು ದಾಖಲಿಸಿದ್ದಾರೆ ಎಂದು ಕೊಹ್-ಇ-ಫಿಜಾ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಬಾಜಪೇಯಿ ಹೇಳಿದ್ದಾರೆ. ವ್ಯಕ್ತಿ ತನ್ನ ಪತ್ನಿಯ ಆರೋಪಗಳನ್ನು ನಿರಾಕರಿಸಿದ್ದಾನೆ ಮತ್ತು ನನ್ನ ಜೊತೆ ಸಂಬಂಧವಿದೆ ಎಂದು ಆಕೆ ಆರೋಪಿಸುತ್ತಿರುವ ಯುವತಿ ನನಗೆ ಗೊತ್ತೇ ಇಲ್ಲವೆಂದು ಹೇಳಿದ್ದಾನೆ.

ಇದನ್ನೂ ಓದಿ: PM Kisan: 2000 ರೂ. ಇನ್ನೂ ಕೂಡ ನಿಮ್ಮ ಖಾತೆ ಸೇರಿಲ್ಲವೇ? ಕೂಡಲೇ ಈ ಕೆಲಸ ಮಾಡಿ

ಈ ಹಿಂದೆ ಮಹಿಳೆ ತನ್ನ ಗಂಡನ ವಿರುದ್ಧ ಶಹಜಹಾನಾಬಾದ್ ಪೊಲೀಸ್ ಠಾಣೆ(Police Station Shahjahanabad)ಯಲ್ಲಿ ಕಿರುಕುಳ ಮತ್ತು ವರದಕ್ಷಿಣೆ ಪ್ರಕರಣ ದಾಖಲಿಸಿದ್ದರು. ಅಂದಿನಿಂದ ಮಹಿಳೆ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಈ ಬಗ್ಗೆ ವಿಚಾರಣೆಗಾಗಿ ದಂಪತಿಗೆ ನೋಟಿಸ್ ಕೂಡ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News