Viral Video: ಕರ್ವಾಚೌಥ್ ದಿನ ಗರ್ಲ್ ಫ್ರೆಂಡ್ ಜೊತೆ ಶಾಪಿಂಗ್ ಮಾಡುತ್ತಿದ್ದ ಪತಿ ಮಹಾಶಯ, ಪತ್ನಿ ಮಾಡಿದ್ದೇನು ನೀವೇ ನೋಡಿ

Trending Video: ಪತಿಯೊಬ್ಬ ತನ್ನ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಳಿಕ ಪತ್ನಿ ತನ್ನ ಪತಿ ಮತ್ತು ಇತರ ಮಹಿಳೆಯನ್ನು ಪಬ್ಲಿಕಲ್ಲೇ ಥಲಿಸಿದ್ದಾಳೆ.  

Written by - Nitin Tabib | Last Updated : Oct 14, 2022, 11:25 AM IST
  • ಈ ಆಘಾತಕಾರಿ ವಿಡಿಯೋ ಉತ್ತರ ಪ್ರದೇಶದ ಗಾಜಿಯಾಬಾದ್‌ ನಿಂದ ಹೊರಹೊಮ್ಮಿದೆ ಎಂದು ಹೇಳಲಾಗುತ್ತಿದೆ.
  • ಕರ್ವಾಚೌತ್ ದಿನದಂದು ಓರ್ವ ವ್ಯಕ್ತಿ ತನ್ನ ಗೆಳತಿಯ ಜೊತೆಗೆ ಮಾಡುತ್ತಿದ್ದ.
  • ಇದ್ದಕ್ಕಿದ್ದಂತೆ ಅಲ್ಲಿಗೆ ಬರುವ ಆತನ ಪತ್ನಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಾಳೆ.
Viral Video: ಕರ್ವಾಚೌಥ್ ದಿನ ಗರ್ಲ್ ಫ್ರೆಂಡ್ ಜೊತೆ ಶಾಪಿಂಗ್ ಮಾಡುತ್ತಿದ್ದ ಪತಿ ಮಹಾಶಯ, ಪತ್ನಿ ಮಾಡಿದ್ದೇನು ನೀವೇ ನೋಡಿ title=
Viral Video

Viral Content: ಸಾಮಾಜಿಕ ಮಾಧ್ಯಮದಲ್ಲಿ ಯಾವಾಗ ಯಾವ ವಿಷಯ ವೈರಲ್ ಆಗುತ್ತದೆ ಎಂಬುದನ್ನು ಹೇಳುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ವಿಷಯಗಳು ತುಂಬಾ ತಮಾಷೆಯಿಂದ ಕೂಡಿರುತ್ತವೆ ಮತ್ತು ಪದೇ ಪದೇ ನೋಡಲು ಒತ್ತಾಯಿಸುತ್ತವೆ. ಆದರೆ, ಕೆಲವು ವಿಷಯಗಳನ್ನು ನೋಡಿ, ಜನರು ನಿಬ್ಬೇರಗುತ್ತಾರೆ. ಪ್ರಸ್ತುತ  ಇಂತಹುದ್ದೆ ಒಂದು ಟ್ರೆಂಡಿಂಗ್ ವಿಡಿಯೋ ಮುನ್ನೆಲೆಗೆ ಬಂದಿದ್ದು, ನೋಡಿ ನೀವು ಬೆಚ್ಚಿ ಬೀಳುವಿರಿ. ಏಕೆಂದರೆ, ಮಹಿಳೆಯೊಬ್ಬರು ಸಾರ್ವಜನಿಕವಾಗಿ ತನ್ನ ಪತಿ ಮತ್ತು ಆತನ ಗೆಳತಿಗೆ ಥಳಿಸಿದ್ದಾಳೆ. ಈ ದೃಶ್ಯವನ್ನು ನೋಡಿದ ಜನರೂ ಕೂಡ ಆವಾಕ್ಕಾಗಿದ್ದಾರೆ. ಪ್ರಸ್ತುತ ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ-Bride Groom Video: ವರನ ಮುಂದೆ ಅಳುತ್ತಾ ಮಾಜಿ ಲವರ್‌ಗೆ ಹಾಡು ಹೇಳಿದ ವಧು

ಈ ಆಘಾತಕಾರಿ ವಿಡಿಯೋ ಉತ್ತರ ಪ್ರದೇಶದ ಗಾಜಿಯಾಬಾದ್‌ ನಿಂದ ಹೊರಹೊಮ್ಮಿದೆ ಎಂದು ಹೇಳಲಾಗುತ್ತಿದೆ. ಕರ್ವಾಚೌತ್ ದಿನದಂದು ಓರ್ವ ವ್ಯಕ್ತಿ ತನ್ನ ಗೆಳತಿಯ ಜೊತೆಗೆ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಅಲ್ಲಿಗೆ ಬರುವ ಆತನ ಪತ್ನಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಾಳೆ. ಇದಾದ ಬಳಿಕ ಕೆಲವರ ಜತೆ ಸೇರಿ ಪತ್ನಿ ಇಬ್ಬರಿಗೂ ಭಾರಿ ಶಿಕ್ಷೆ ನೀಡಿದ್ದಾಳೆ. ಕೆಲ ಮಹಿಳೆಯರೊಂದಿಗೆ ಮಹಿಳೆ ಇಬ್ಬರಿಗೂ ಹೇಗೆ ಥಳಿಸುತ್ತಿದ್ದಾಳೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಅಲ್ಲಿ ನೆರೆದಿದ್ದರು ಮತ್ತು ಈ ದೃಶ್ಯವನ್ನು ವಿಕ್ಷೀಸಿದ್ದಾರೆ. ಅಷ್ಟೇ ಅಲ್ಲ ಈ ವಿಷಯವನ್ನು ಕೆಲವರು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ-Viral News: ಮಗಳ ಮದುವೆಯಾಗಿದ್ದೇ ತಡ: ಅದೇ ಮಂಟಪದಲ್ಲಿ ಮತ್ತೊಂದು ವಿವಾಹವಾದ 11 ಮಕ್ಕಳ ತಂದೆ!

ಸಂಪೂರ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಲೋಕಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆ ತನ್ನ ಪತಿಯೊಂದಿಗೆ ಜಗಳವಾಡಿ ತನ್ನ ತಂದೆ-ತಾಯಿಯರ ಜೊತೆಗೆ ವಾಸಿಸುತ್ತಿದ್ದಳು ಎಂದೂ ಕೂಡ ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯೂ ಕೂಡ ತನ್ನ ತಾಯಿಯೊಂದಿಗೆ ಶಾಪಿಂಗ್ ಗೆ ಬಂದಿದ್ದಳು ಮತ್ತು ಈ ವೇಳೆ ಆಕೆ ತನ್ನ ಪತಿಯನ್ನು ಬೇರೆ ಮಹಿಳೆಯೊಂದಿಗೆ ನೋಡಿದ್ದಾಳೆ. ಬಳಿಕ ಪರಿಸ್ಥಿತಿ ಕೈಮೀರಿ ಹೋಗಿದೆ ಎನ್ನಲಾಗಿದೆ. ಅದೇನೇ ಇದ್ದರೂ, ಇದೀಗ ಈ ವಿಷಯ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಭಾರಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದು, ವಿಡಿಯೋ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News