ಶ್ರೀನಗರ : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಶ್ವದೆಲ್ಲೆಡೆ ಜನರು ಯೋಗಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಇಲ್ಲಿ ಮಾತ್ರ ಕೇವಲ ಮನವರಷ್ಟೇ ಅಲ್ಲ, ಶ್ವಾನಗಳೂ ಸಹ ಯೋಗಾಭ್ಯಾಸ ಮಾಡಿ ವಿಶೇಷವಾಗಿ ಯೋಗ ದಿನ ಆಚರಿಸಿವೆ.
ಜಮ್ಮುವಿನ ಗಡಿ ಭದ್ರತಾ ಪಡೆಯ ಶ್ವಾನದಳ ಇಂದು ತಮ್ಮ ತರಬೇತುದಾರರೊಂದಿಗೆ ಯೋಗ ಪ್ರದರ್ಶಿನ ನೀಡಿವೆ. ಈ ಮೂಲಕ ಯೌಅ ಕೇವಲ ಮನುಷ್ಯರ ಆರೋಗ್ಯ ಕಾಪಾಡಲು ಅಷ್ಟೇ ಅಲ್ಲ, ಪ್ರಾಣಿಗಳ ಉತ್ತಮ ಆರೋಗ್ಯಕ್ಕೂ ಅನುಕೂಲ ಎಂಬುದನ್ನು ತಿಳಿಸಿಕೊಟ್ಟಿವೆ. ಸದ್ಯ ಶ್ವಾನಗಳು ಯೋಗ ಮಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ.
#WATCH Dog squad of Border Security Force performs yoga along with their trainers on #YogaDay2019 in Jammu. pic.twitter.com/TTN2vAgbeS
— ANI (@ANI) June 21, 2019