Viral News: ಹೆಂಡತಿಯ ಮಾತು ಕೇಳಿ ಗಂಡನ ಮನ ಕರಗಿತು, ಆಮೇಲೆ ಏನಾಯ್ತು..?

ಮದುವೆಯಾದಾಗಿನಿಂದ ಪತ್ನಿ ಕೋಮಲ್ ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಳು ಎಂದು ಪಂಕಜ್ ಶರ್ಮಾ ಹೇಳಿಕೊಂಡಿದ್ದಾರೆ.

Written by - Puttaraj K Alur | Last Updated : Nov 1, 2021, 04:03 PM IST
  • ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ರಿಯಲ್ ‘ಹಮ್ ದಿಲ್ ದೇ ಚುಕೇ ಸನಮ್’
  • ವ್ಯಕ್ತಿಯೊಬ್ಬ ಪ್ರೇಮಿ ಜೊತೆಗೆ ಮತ್ತೆ ಒಂದಾಗಲು ತನ್ನ ಹೆಂಡತಿಗೆ ಸಹಾಯ ಮಾಡಿದ್ದಾನೆ
  • ಯಾವುದೇ ಬಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲ ಈ ವಿಚಿತ್ರ ಪ್ರೇಮ ಕಹಾನಿ
Viral News: ಹೆಂಡತಿಯ ಮಾತು ಕೇಳಿ ಗಂಡನ ಮನ ಕರಗಿತು, ಆಮೇಲೆ ಏನಾಯ್ತು..? title=
ಪ್ರೇಮಿ ಜೊತೆ ಒಂದಾಗಲು ಹೆಂಡತಿಗೆ ಸಹಾಯ

ಕಾನ್ಪುರ: ಬಾಲಿವುಡ್‌ನ 1999ರ ಬ್ಲಾಕ್‌ಬಸ್ಟರ್ ಚಿತ್ರ ‘ಹಮ್ ದಿಲ್ ದೇ ಚುಕೇ ಸನಮ್’ (Ham Dil De Chuke Sanam) ಅನ್ನು ನೀವು ನೋಡಿರಬೇಕು. ಇದೇ ರೀತಿಯ ವಿಚಿತ್ರ ಪ್ರೇಮ ಕಹಾನಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ. ಕಾನ್ಪುರದ ವ್ಯಕ್ತಿಯೊಬ್ಬ 5 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ. ನಂತರ ಆತ ತನ್ನ ಹೆಂಡತಿಯನ್ನು ಅವಳ ಪ್ರೇಮಿ ಜೊತೆ ಮತ್ತೆ ಒಂದಾಗಲು ಸಹಾಯ ಮಾಡಿದ್ದಾನೆ.

 5 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು

ಈ ಘಟನೆ ಯಾವುದೇ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ. ಈ ಜಗತ್ತಿನಲ್ಲಿ ಎಂತೆಂಥವರು ಇರುತ್ತಾರೆಂಬುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಪ್ರೇಮಿ ಜೊತೆ ಮತ್ತೆ ಒಂದಾಗಲು ಹೆಂಡತಿಗೆ ಸಹಾಯ ಮಾಡಿದ ವ್ಯಕ್ತಿಯ ಹೆಸರು ಪಂಕಜ್ ಶರ್ಮಾ(Pankaja Sharma). ಇವರು ಹರಿಯಾಣದ ಗುರುಗ್ರಾಮ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಪಂಕಜ್ ಶರ್ಮಾ ಅವರು ಕೋಮಲ್ ಎಂಬುವರನ್ನು ವಿವಾಹವಾಗಿದ್ದರು.

ಇದನ್ನೂ ಓದಿ: ದೀಪಾವಳಿಗೆ ಬಿಡುಗಡೆಯಾಗಲಿದೆ JioPhone Next, ಕೇವಲ 10% ಪಾವತಿಸಿ ಖರೀದಿಸಿ ಅಗ್ಗದ 4G ಸ್ಮಾರ್ಟ್‌ ಪೋನ್‌

ಪತಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಪತ್ನಿ..!

ಮದುವೆಯಾದಾಗಿನಿಂದ ಪತ್ನಿ ಕೋಮಲ್ ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಳು ಎಂದು ಪಂಕಜ್ ಶರ್ಮಾ ಹೇಳಿಕೊಂಡಿದ್ದಾರೆ. ಈ ಸಮಯದಲ್ಲಿ ಅವಳು ಯಾರೊಂದಿಗೋ ನಿರಂತರವಾಗಿ ಮಾತನಾಡುತ್ತಿದ್ದಳು. ಪತ್ನಿ ಏಕೆ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾಳೆಂಬುದು ನನಗೆ ಅರ್ಥವಾಗಿರಲಿಲ್ಲ. ನನ್ನ ಜೊತೆ ಸರಿಯಾಗಿ ಮಾತನಾಡದ ಆಕೆ ಗಂಟೆಗಟ್ಟಲೇ ಫೋನಿನಲ್ಲಿ ಯಾರೊಂದಿಗೂ ಮಾತನಾಡುತ್ತಿದ್ದಳು. ಈ ಬಗ್ಗೆ ಪ್ರಶ್ನಿಸಿದಾಗ ನನಗೆ ನೀನು ಇಷ್ಟವಿಲ್ಲ, ನಾನು ಈಗಾಗಲೇ ಒಬ್ಬನನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿದ್ದಾಳಂತೆ. ‘ಅವಳು ನನ್ನನ್ನು ಮದುವೆ(Marriage)ಯಾಗಲು ನಿರಾಕರಿಸಲಿಲ್ಲ. ಆದರೆ ಆಕೆಯ ಪ್ರಿಯಕರ ಪಿಂಟುವನ್ನು ಮತ್ತೆ ಮದುವೆಯಾಗಲು ಬಯಸಿದ್ದಾಗಿ ಹೇಳಿದಳು’ ಅಂತಾ ಪಂಕಜ್ ಶರ್ಮಾ ಹೇಳಿದ್ದಾರೆ.

ಕೋಮಲ್ ದೃಢ ನಿರ್ಧಾರಕ್ಕೆ ತೆಲೆಬಾಗಿದ ಕುಟುಂಬಸ್ಥರು

ಇದಾದ ನಂತರ ಪಂಕಜ್ ಶರ್ಮಾ ಈ ವಿಷಯದ ಬಗ್ಗೆ ತನ್ನ ಅತ್ತೆಯ ಬಳಿ ಮಾತನಾಡಿದ್ದಾರೆ. ನಂತರ ಹುಡುಗಿಯ ಕುಟುಂಬ ಸದಸ್ಯರು ಕೋಮಲ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಪಿಂಟು(Boyfriend)ವನ್ನು ಮದುವೆಯಾಗಲು ಕೋಮಲ್ ದೃಢ ನಿರ್ಧಾರ ಮಾಡಿಬಿಟ್ಟಿದ್ದಳು. ನಂತರ ಈ ವಿಷಯವು ಕೌಟುಂಬಿಕ ದೌರ್ಜನ್ಯ ವಿರೋಧಿ ಘಟಕ ಮತ್ತು ಆಶಾಜ್ಯೋತಿ ಕೇಂದ್ರಕ್ಕೆ ತಲುಪಿತು. ಅಲ್ಲಿ ಕೋಮಲ್, ಆಕೆಯ ಪತಿ ಪಂಕಜ್ ಶರ್ಮಾ, ಆಕೆಯ ಪ್ರಿಯಕರ ಪಿಂಟು ಮತ್ತು ಅವರ ಸಂಬಂಧಿಕರು ಒಟ್ಟಿಗೆ ಕುಳಿತು ಮಾತನಾಡುವಂತೆ ಹೇಳಲಾಯಿತು. ಮನೆಯವರಿಗೆ ಏನೂ ಮಾಡಬೇಕೆಂಬುದು ಗೊತ್ತಾಗದೇ ಆಕೆಯ ದೃಢ ನಿರ್ಧಾರಕ್ಕೆ ಕೊನೆಗೂ ತಲೆಬಾಗಿದ್ದಾರೆ.

ಇದನ್ನೂ ಓದಿ: PhonePe ಬಳಕೆದಾರರೇ ಗಮನಿಸಿ, UPI ಪೇಮೆಂಟ್‌ ಮಾಡಿದರೆ ಖಾತೆಯಿಂದ ಕಡಿತಗೊಳ್ಳುತ್ತದೆ ಇಷ್ಟು ಹಣ

ಪ್ರೇಮಿ ಜೊತೆ ಹೆಂಡತಿಯ ಮದುವೆ ಮಾಡಿಸಿದ ಗಂಡ..!

ಕೋಮಲ್ ತಾನು ಪಿಂಟುವನ್ನೇ ಮದುವೆ(Marriage News)ಯಾಗುವುದಾಗಿ ಹಠ ಹಿಡಿದಿದ್ದಳು. ಆಕೆಯ ದೃಢ ನಿರ್ಧಾರವನ್ನು ಕಂಡ ಪಂಕಜ್ ಶರ್ಮಾ ತನ್ನ ಹೆಂಡತಿಯನ್ನು ಮತ್ತೆ ಆಕೆಯ ಪ್ರೇಮಿ ಜೊತೆಗೆ ಒಂದು ಮಾಡಲು ನಿರ್ಧರಿಸಿದ್ದಾನೆ. ಕೋಮಲ್ ಪ್ರೀತಿಸಿದ ಪಿಂಟು ಜೊತೆಗೆ ಮದುವೆ ಮಾಡಲು ಪಂಕಜ್ ಪ್ಲಾನ್ ಮಾಡಿದ. ಬಳಿಕ ಅವರೇ ವಕೀಲರ ಜೊತೆ ಮಾತನಾಡಿ ಇಬ್ಬರಿಗೂ ಮದುವೆ ಮಾಡಿಸಿದ್ದಾನೆ. ಕೋಮಲ್ ಮತ್ತು ಪಿಂಟು ಮದುವೆಯಲ್ಲಿ ಎರಡೂ ಕಡೆಯ ಸಂಬಂಧಿಕರು ಭಾಗವಹಿಸಿದ್ದರು.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News