VIDEO: ಮೇಕ್ ಇನ್ ಇಂಡಿಯಾದ ಮತ್ತೊಂದು ಸಾಧನೆ; ಆಸ್ಟ್ರೇಲಿಯಾದಲ್ಲಿ ಚಲಿಸಲಿದೆ ಮೇಡ್ ಇನ್ ಇಂಡಿಯಾ ಮೆಟ್ರೋ!

ಭಾರತದಲ್ಲಿ ತಯಾರಾದ ಅತ್ಯಾಧುನಿಕ ಮೆಟ್ರೋ ರೈಲು ಇದೀಗ ಆಸ್ಟ್ರೇಲಿಯಾದಲ್ಲಿ ಚಲಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪೀಯುಷ್ ಗೋಯಲ್ ಹೇಳಿದ್ದಾರೆ.

Last Updated : Jun 11, 2019, 07:11 PM IST
VIDEO: ಮೇಕ್ ಇನ್ ಇಂಡಿಯಾದ ಮತ್ತೊಂದು ಸಾಧನೆ; ಆಸ್ಟ್ರೇಲಿಯಾದಲ್ಲಿ ಚಲಿಸಲಿದೆ ಮೇಡ್ ಇನ್ ಇಂಡಿಯಾ ಮೆಟ್ರೋ! title=

ನವದೆಹಲಿ: ಕೇಂದ್ರ ಸರ್ಕಾರದ ಕನಸಿನ ಯೋಜನೆ 'ಮೇಕ್ ಇನ್ ಇಂಡಿಯಾ'ದ ಯಶಸ್ಸುಗಳ ಪಟ್ಟಿಗೆ ಮತ್ತೊಂದು ಸಾಧನೆ ಸೇರಲಿದೆ. ಈ ಯೋಜನೆಯಡಿಯಲ್ಲಿ ಭಾರತದಲ್ಲಿ ತಯಾರಾದ ಅತ್ಯಾಧುನಿಕ ಮೆಟ್ರೋ ರೈಲು ಇದೀಗ ಆಸ್ಟ್ರೇಲಿಯಾದಲ್ಲಿ ಚಲಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪೀಯುಷ್ ಗೋಯಲ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇನ್ಮುಂದೆ ಭಾರತದಲ್ಲಿ ಸಿದ್ಧಪಡಿಸಲಾದ ಮೆಟ್ರೋ ರೈಲು ಚಲಿಸಲಿದೆ. ಭಾರತದ ಉದ್ಯಮಶೀಲತಾ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಆರಂಭವಾದ 'ಮೇಕ್ ಇನ್ ಇಂಡಿಯಾ' ಅಭಿಯಾನದಿಂದ ದೇಶದ ವಿಶ್ವ ಮಟ್ಟದ ತಂತ್ರಜ್ಞಾನದಲ್ಲಿ ಸ್ಟಾರ್ ಆಗಿ ಹೊರಹೊಮ್ಮುತ್ತಿದೆ" ಎಂದಿದ್ದಾರೆ. ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಚಲಿಸಲಿರುವ ಮೇಡ್ ಇನ್ ಇಂಡಿಯಾ ರೈಲಿನ ವೀಡಿಯೋವನ್ನೂ ಸಹ ಗೋಯಲ್ ಶೇರ್ ಮಾಡಿದ್ದಾರೆ.

ಕೇಂದ್ರ ಸಚಿವ ಪೀಯುಷ್ ಗೋಯಲ್ ಟ್ವೀಟ್ ಮಾಡಿರುವ ವೀಡಿಯೋದಲ್ಲಿ ವಿಶ್ವದ ತಂತ್ರಜ್ಞಾನದಲ್ಲಿ ಭಾರತ ರೈಸಿಂಗ್ ಸ್ಟಾರ್ ಆಗಿದೆ. ದೇಶಿಯ ಮತ್ತು ವಿದೇಶಿ ಕಂಪನಿಗಳಿಗೆ ಉತ್ಪನ್ನಗಳನ್ನು ತಯಾರಿಸಲು ಪ್ರೋತ್ಸಾಹ ನೀಡಲು 'ಮೇಕ್ ಇನ್ ಇಂಡಿಯಾ' ಯೋಜನೆ ಆರಂಭಿಸಲಾಗಿದೆ ಎನ್ನಲಾಗಿದೆ. ವೀಡಿಯೋದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಮೆಟ್ರೋ ಲೈನಿನಲ್ಲಿ ಸಂಚರಿಸಲಿರುವ ಭಾರತದಲ್ಲಿ ಸಿದ್ಧವಾದ ಮೆಟ್ರೋ ರೈಲನ್ನು ತೋರಿಸಲಾಗಿದ್ದು, ಇದೇ ಮೊದಲ ಬಾರಿಗೆ ಸಿಡ್ನಿಯಲ್ಲಿ ಡ್ರೈವರ್ ರಹಿತ ಮೆಟ್ರೋ ರೈಲು ಸಂಚರಿಸಲಿದೆ. ಆರು ಬೋಗಿಗಳ 22 ಆಲ್ಸ್ಟಮ್ ರೈಲುಗಳು ಚಾಟ್ವುಡ್ ನಿಲ್ದಾಣದಿಂದ ತಲ್ಲಾವಂಗ್ ನಿಲ್ದಾಣದ ನಡುವಿನ 13 ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸಲಿದೆ ಎಂದು ವಿವರಣೆ ನೀಡಲಾಗಿದೆ.

Trending News