RITESನಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ವಿವರ

ಕೆಲವು ದಿನಗಳ ಹಿಂದೆ, ಜೀ ನ್ಯೂಸ್ ತನ್ನ ವೀಕ್ಷಕರನ್ನು ನೀವು ಚಾನಲ್‌ನಲ್ಲಿ ಯಾವ ಬದಲಾವಣೆಗಳನ್ನು ನೋಡಲು ಬಯಸುತ್ತೀರಿ ಮತ್ತು ಸುದ್ದಿಯಲ್ಲಿ ಯಾವ ವಿಷಯಗಳಿಗೆ ಆದ್ಯತೆ ನೀಡಲು ಬಯಸುತ್ತೀರಿ ಎಂದು ಕೇಳಿದೆ.

Last Updated : Nov 7, 2020, 10:40 AM IST
  • RITESನಲ್ಲಿ ಉದ್ಯೋಗಾವಕಾಶ
  • ಮೂಲಸೌಕರ್ಯ ಸಂಬಂಧಿತ ಸರ್ಕಾರದ ಈ ಇಲಾಖೆಯಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 26 ನವೆಂಬರ್
RITESನಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ವಿವರ title=

ನವದೆಹಲಿ: ಜೀ ನ್ಯೂಸ್ ನಿಮಗಾಗಿ ಜೀ ರೋಜ್ಗಾರ್ ಸಮಾಚಾರ್ ಎಂದರೆ ಜೀ ಉದ್ಯೋಗ ಸಮಾಚಾರ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಕೆಲವು ದಿನಗಳ ಹಿಂದೆ, ಜೀ ನ್ಯೂಸ್ ತನ್ನ ವೀಕ್ಷಕರನ್ನು ನೀವು ಚಾನಲ್‌ನಲ್ಲಿ ಯಾವ ಬದಲಾವಣೆಗಳನ್ನು ನೋಡಲು ಬಯಸುತ್ತೀರಿ ಮತ್ತು ಸುದ್ದಿಯಲ್ಲಿ ಯಾವ ವಿಷಯಗಳಿಗೆ ಆದ್ಯತೆ ನೀಡಲು ಬಯಸುತ್ತೀರಿ ಎಂದು ಕೇಳಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಪ್ರೇಕ್ಷಕರು ಉದ್ಯೋಗ ಸಂಬಂಧಿತ ವಿಷಯದ ಬಗ್ಗೆ ಹೆಚ್ಚು ವರದಿ ಮಾಡುವಂತೆ ಸಲಹೆ ನೀಡಿದ್ದರು. ಈ ಹಿನ್ನಲೆಯಲ್ಲಿ ಜೀ ವಾಹಿನಿಯಲ್ಲಿ ಜೀ ಉದ್ಯೋಗ (Job) ಸಮಾಚಾರ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಎಲ್ಲೆಲ್ಲಿ ಉದ್ಯೋಗಾವಕಾಶ ಲಭ್ಯವಿದೆ, ಹುದ್ದೆಯ ವಿವರ ಹೀಗೆ ಪೂರ್ಣ ಮಾಹಿತಿ ಲಭ್ಯವಾಗಲಿದೆ.

RITESನಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ :-
ಜೀ ನ್ಯೂಸ್ ತನ್ನ ವೀಕ್ಷಕರ ಸಲಹೆಯ ಮೇರೆಗೆ ಉದ್ಯೋಗ ಸುದ್ದಿಗಳನ್ನು ತಂದಿದೆ. ಕೋವಿಡ್ ಅವಧಿಯಲ್ಲಿ ನೀವು ಕೆಲಸದ ಬಗ್ಗೆ ಚಿಂತೆ ಮಾಡುತ್ತಿದ್ದರೆ ZEE ಉದ್ಯೋಗ ಸುದ್ದಿ ನಿಮಗೆ ಉಪಯುಕ್ತವೆಂದು ಸಾಬೀತುಪಡಿಸಬಹುದು. ಜೀ ಇಂದು RITESನಲ್ಲಿ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡುತ್ತಿದೆ. ಮೂಲಸೌಕರ್ಯ ಸಂಬಂಧಿತ ಸರ್ಕಾರದ ಈ ಇಲಾಖೆಯಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹತೆ ಎಂಜಿನಿಯರಿಂಗ್ ಮತ್ತು ವೇತನ ತಿಂಗಳಿಗೆ 35,152 ರೂ.

BEL Recruitment 2020: ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿದಾರರ ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು:
ಈ ಹುದ್ದೆಗೆ (Vacancy) ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ 40 ವರ್ಷಕ್ಕಿಂತ ಹೆಚ್ಚಿರಬಾರದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 26 ಆಗಿದೆ. RITES ಎಂಬುದು ಭಾರತ ಸರ್ಕಾರದೊಂದಿಗೆ ಸಂಬಂಧಿಸಿದ ಸರ್ಕಾರಿ ಇಲಾಖೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ https://rites.com ಗೆ ಭೇಟಿ ನೀಡುವ ಮೂಲಕ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಇದರೊಂದಿಗೆ ನೀವು ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

JOB: ಆರೋಗ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ನೇರ ಸಂದರ್ಶನ

ಪೋಸ್ಟ್‌ಗಳ ವಿವರ :-

  • ಇಲಾಖೆ - RITES 
  • ಒಟ್ಟು ಪೋಸ್ಟ್‌ಗಳು - 170
  • ಅರ್ಹತೆ - ಎಂಜಿನಿಯರಿಂಗ್
  • ಸಂಬಳ- ತಿಂಗಳಿಗೆ ರೂ .35152
  • ವಯಸ್ಸಿನ ಮಿತಿ - ಗರಿಷ್ಠ 40 ವರ್ಷಗಳು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 26 ನವೆಂಬರ್
  • ಮಾಹಿತಿ - ಭಾರತ ಸರ್ಕಾರದೊಂದಿಗೆ ಸಂಬಂಧಿಸಿದ ಸಂಸ್ಥೆ
  • ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:  https://rites.com

Trending News