Uttarakhand Exit Poll 2022: ಉತ್ತರಾಖಂಡ್ ನಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆಯಾ BJP? Exit Poll ಏನ್ ಹೇಳುತ್ತಿದೆ?

Uttarakhand Exit Poll: ಉತ್ತರಾಖಂಡ ವಿಧಾನಸಭೆಯ 70 ಸ್ಥಾನಗಳಿಗೆ ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ. ಎಕ್ಸಿಟ್ ಪೋಲ್ ಪ್ರಕಾರ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡುವ ಲಕ್ಷಣ ಕಾಣುತ್ತಿದೆ.

Written by - Nitin Tabib | Last Updated : Mar 7, 2022, 08:57 PM IST
  • ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ
  • ಕಾಂಗ್ರೆಸ್ ಸರ್ಕಾರ ರಚಿಸಬಹುದು
  • AAP ಶೇ 9ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ
Uttarakhand Exit Poll 2022: ಉತ್ತರಾಖಂಡ್ ನಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆಯಾ BJP? Exit Poll ಏನ್ ಹೇಳುತ್ತಿದೆ? title=
Uttarakhand Exit Poll (File Photo)

Uttarakhand Exit Poll: ಉತ್ತರಾಖಂಡ ವಿಧಾನಸಭೆಯ 70 ಸ್ಥಾನಗಳಿಗೆ (Uttarakhand Assembly Election 2022) ಫೆಬ್ರವರಿ 14 ರಂದು ಮತದಾನ ನಡೆದಿತ್ತು. ಈ ಚುನಾವಣೆಗಳ ಫಲಿತಾಂಶ ಮಾರ್ಚ್ 10 ರಂದು ಪ್ರಕಟವಾಗಲಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದೇ ವೇಳೆ, ಆಮ್ ಆದ್ಮಿ ಪಕ್ಷ (AAP) ಈ ಈ ಚುನಾವಣೆಯನ್ನು ತ್ರಿಕೋನ ಸ್ಪರ್ಧೆಯನ್ನಾಗಿಸಿದೆ. Zee News ಎಕ್ಸಿಟ್ ಪೋಲ್ (Zee Exit Poll) ಫಲಿತಾಂಶಗಳು ಏನು ಹೇಳುತ್ತಿವೆ ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ-Punjab Exit Poll Update 2022: ಪಂಜಾಬ್ ನಲ್ಲಿ AAP ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ!

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ (Uttarakhand Exit Poll Result)
Zee News-Disign Boxed ನ ಎಕ್ಸಿಟ್ ಪೋಲ್ ಪ್ರಕಾರ ಉತ್ತರಾಖಂಡದಲ್ಲಿ ಬಿಜೆಪಿ (BJP) 26-30 ಸ್ಥಾನಗಳನ್ನು ಪಡೆಯಬಹುದು. ಮತ್ತೊಂದೆಡೆ, ಕಾಂಗ್ರೆಸ್ (Congress) 35-40 ಸ್ಥಾನಗಳನ್ನು ಪಡೆಯಬಹುದು. ಬಹುಜನ ಸಮಾಜ ಪಕ್ಷವು (BSP) 2-3 ಸ್ಥಾನಗಳನ್ನು ಮತ್ತು ಇತರರು 1 ರಿಂದ 3 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಎಕ್ಸಿಟ್ ಪೋಲ್ ಪ್ರಕಾರ ಈ ಬಾರಿ ಉತ್ತರಾಖಂಡ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (AAP) ಖಾತೆ ತೆರೆಯುವ ನಿರೀಕ್ಷೆ ಇಲ್ಲ ಎನ್ನಲಾಗಿದೆ. 

ಇದನ್ನೂ ಓದಿ-Goa Exit Poll 2022 : ಗೋವಾದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ಜಿದ್ದಾಜಿದ್ದಿನ ಫೈಟ್! ಯಾರಿಗೆ ಸಿಎಂ ಕುರ್ಚಿ?

ಕಾಂಗ್ರೆಸ್ ಸರ್ಕಾರ ರಚಿಸಬಹುದು (Uttarakhand Exit Poll 2022)
Zee News Exit Polls ಪ್ರಕಾರ ಉತ್ತರಾಖಂಡದಲ್ಲಿ ಕಾಂಗ್ರೆಸ್ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ ಮತ್ತು ಹರೀಶ್ ರಾವತ್ ಸಿಎಂ ಆಗುವ ಕನಸು ನನಸಾಗಬಹುದು. ಅಂದರೆ ಉತ್ತರಾಖಂಡದಲ್ಲಿ ಬಿಜೆಪಿ ನೇರವಾಗಿ ಸೋಲುತ್ತಿದ್ದು, ಕಾಂಗ್ರೆಸ್ ಗೆ ಲಾಭವಾಗುತ್ತಿದೆ.

ಇದನ್ನೂ ಓದಿ-ಪಂಚರಾಜ್ಯಗಳ ಚುನಾವಣೆ ನಂತರ ಹೊಸ ಕಾರ್ಯತಂತ್ರ ರೂಪಿಸಲು ಬಿಜೆಪಿ ಸಜ್ಜು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News