ಉತ್ತರ ಪ್ರದೇಶ: ಸಿನಿಮಾ ಹಾಲ್ ನಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

    

Last Updated : Dec 6, 2017, 06:32 PM IST
ಉತ್ತರ ಪ್ರದೇಶ: ಸಿನಿಮಾ ಹಾಲ್ ನಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ title=

ಮೀರತ್:  ಸಿನಿಮಾ ಮಂದಿರದಲ್ಲಿ 16 ವರ್ಷದ ಅಪ್ರಾಪ್ತ  ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಉತ್ತರ ಮಂಗಳವಾರದಂದು ಪ್ರದೇಶದ ಮೀರತ್ ನಗರದಲ್ಲಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದ ಇಬ್ಬರು ಯುವಕರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ ಇಬ್ಬರಲ್ಲಿ ಒಬ್ಬ ಯುವಕ ಅತ್ಯಾಚಾರಕ್ಕೆ ಒಳಪಟ್ಟ ಬಾಲಕಿಗೆ ಎರಡು ತಿಂಗಳ ಹಿಂದೆಯೇ ಪರಿಚಿತವಾಗಿದ್ದನು ಎಂದು ಹೇಳಲಾಗಿದೆ.

ಬಾಲಕಿಗೆ ಮೊದಲೇ ಪರಿಚಿತವಾಗಿದ್ದ ಆ ವ್ಯಕ್ತಿ ಮಂಗಳವಾರದಂದು ಶಾಪಿಂಗ್ ಗೆ ಬಾಲಕಿಯನ್ನು ಅಲ್ಲಿರುವ ಮಾವಾನಾ ಮಾಲ್ ಗೆ ಬರಲು ಹೇಳಿದ್ದನು. ಆದಾದ ನಂತರ ಬಾಲಕಿಯ ಜೊತೆ ಸಿನೆಮಾ ನೋಡಲು ತೆರಳಿದ ಸಂದರ್ಭದಲ್ಲಿ ಈ ಘಟನೆಯು ನಡೆದಿದೆ ಎಂದು ತಿಳಿದುಬಂದಿದೆ.

ಸಿನಿಮಾ ಹಾಲ್ ಗೆ ಬರುವ ಮುಂಚೆಯೆ ಅವನು ತನ್ನ ಸ್ನೇಹಿತನಿಗೆ ಅಲ್ಲಿಗೆ ಬರಲು ತಿಳಿಸಿದ್ದನು. ಅದರಂತೆ ಆಗಲೇ ಸಿನೆಮಾ ಹಾಲ್ ನಲ್ಲಿ ಹಾಜರಾಗಿದ್ದ ಅವನ ಸ್ನೇಹಿತ ಇಬ್ಬರು ಸೇರಿ ಬಲವಂತವಾಗಿ ಆ ಬಾಲಕಿಯನ್ನು ಅತ್ಯಾಚಾರ ಗೈದು ಆಕೆಯನ್ನು ನಂತರ ತಮ್ಮ ಬೈಕ್ ಮೂಲಕ ಮುಜಾಫರ್ ನಗರಕ್ಕೆ ಕರೆದೊಯ್ದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ  ಈ ಬೈಕನ್ನು ಅವರು ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Trending News