8 ಗಂಟೆಗಳಲ್ಲಿ 66 ಸಾವಿರ ಸಸಿಗಳನ್ನು ವಿತರಿಸಿ ಹೊಸ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಉತ್ತರ ಪ್ರದೇಶ

ಈ ವಿಶೇಷ ಸಂದರ್ಭದಲ್ಲಿ, ಸ್ಥಳದಲ್ಲಿ ಹಾಜರಿದ್ದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ಸ್ವಪ್ನಿಲ್ ದಾಮ್ರೆಕರ್ ಇದನ್ನು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರಮಾಣಪತ್ರ ನೀಡಿದರು.

Last Updated : Aug 10, 2019, 11:31 AM IST
8 ಗಂಟೆಗಳಲ್ಲಿ 66 ಸಾವಿರ ಸಸಿಗಳನ್ನು ವಿತರಿಸಿ ಹೊಸ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಉತ್ತರ ಪ್ರದೇಶ title=
Pic Courtesy: ANI

ಲಕ್ನೋ / ಪ್ರಯಾಗರಾಜ್: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯ ನಾಥ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತನ್ನ ಹೆಸರು ದಾಖಲಿಸಿದೆ. ವಾಸ್ತವವಾಗಿ, ವೃಕ್ಷ ಮಹಾಕುಂಭವನ್ನು ಸಂಗಮ್ ನಗರದ ಪ್ರಯಾಗರಾಜ್‌ನ ಪೆರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವೃಕ್ಷ ಮಹಾಕುಂಭದಲ್ಲಿ ಎಂಟು ಗಂಟೆಗಳಲ್ಲಿ 66 ಸಾವಿರ ಉಚಿತವಾಗಿ ಸಸಿ ವಿತರಿಸಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದರು.

ಅತಿ ಹೆಚ್ಚು ಸಸ್ಯಗಳ ವಿತರಣೆಯ ವಿಶ್ವ ದಾಖಲೆ ಇದಾಗಿದೆ.ಈ ವಿಶೇಷ ಸಂದರ್ಭದಲ್ಲಿ, ಸ್ಥಳದಲ್ಲಿ ಹಾಜರಿದ್ದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ಸ್ವಪ್ನಿಲ್ ದಾಮ್ರೆಕರ್ ಇದನ್ನು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರಮಾಣಪತ್ರ ನೀಡಿದರು.

ಈ ಸಂದರ್ಭದಲ್ಲಿ, 100 ವರ್ಷಕ್ಕಿಂತ ಮೇಲ್ಪಟ್ಟ ಮರಗಳನ್ನು  ಗುರುತಿಸಲಾಗುತ್ತಿದೆ. ಅಂತಹ ಮರಗಳನ್ನು ಪಾರಂಪರಿಕ ಮರಗಳಾಗಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೇಳಿದರು. ವೃಕ್ಷ ಕುಂಭ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ರಾಜ್ಯದಲ್ಲಿ ನೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮರಗಳನ್ನು ಪರಂಪರೆಯಾಗಿ ಸಂರಕ್ಷಿಸಬೇಕು ಎಂದು ಹೇಳಿದರು. ಇದಕ್ಕಾಗಿ ಅರಣ್ಯ ಇಲಾಖೆ ಸ್ಮಾರಕವನ್ನು ಪ್ರಕಟಿಸುತ್ತದೆ. ಅಂತಹ ಮರಗಳನ್ನು ಪಾರಂಪರಿಕ ಮರಗಳೆಂದು ಘೋಷಿಸಲಾಗುವುದು ಎಂದು ಅವರು ಹೇಳಿದರು. 

ದೇಶೀಯ ಮಾವಿನ ಮರಗಳನ್ನು ಇನ್ನು ಮುಂದೆ ಕತ್ತರಿಸಲಾಗುವುದಿಲ್ಲ. 'ಕಾಡು ಇದ್ದರೆ ನೀರು' ಇರುತ್ತದೆ. ಪ್ರಯಾಗರಾಜ್‌ನ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು ಕಾಡುಗಳನ್ನೂ ಸಿದ್ಧಪಡಿಸಬೇಕು. ಜಗತ್ತಿನಲ್ಲಿ ಎಷ್ಟು ದೊಡ್ಡ ಘಟನೆಗಳು ಸಂಭವಿಸಬಹುದು ಎಂಬುದನ್ನು ಪ್ರಯಾಗರಾಜ್ ಸಾಬೀತುಪಡಿಸಲಿದೆ. ಅದಕ್ಕಾಗಿಯೇ ವೃಕ್ಷ ಕುಂಭಕ್ಕೆ ಪ್ರಯಾಗರಾಜ್ ಅನ್ನು ಆಯ್ಕೆ ಮಾಡಲಾಯಿತು. ಕುಂಭಕ್ಕೆ ಬಂದ 24 ಕೋಟಿ ಭಕ್ತರ ಹೆಸರಲ್ಲಿ ಸಸಿ ನೆಡಲಾಗುತ್ತಿದೆ. 75 ಜಿಲ್ಲೆಗಳಲ್ಲಿ 24 ಕೋಟಿ ಸಸಿ ನೆಡುವ ಗುರಿ ತಲುಪಲಾಗುವುದು  ಎಂದು ಸಿಎಂ ಯೋಗಿ ತಿಳಿಸಿದರು.
 

Trending News