ಈ ಕಂಪನಿಯ SIM ಬಳಕೆ ನಿಮ್ಮ ಜೇಬಿಗೆ ದುಬಾರಿಯಾಗಿ ಪರಿಣಮಿಸಲಿದೆ

ನಿತ್ಯ ಹೊರ ಬರುತ್ತಿರುವ ಅಗ್ಗದ ದರದ ಕಾಲಿಂಗ್ ಹಾಗೂ ಡೇಟಾ ಕೊಡುಗೆಗಳ ಮಧ್ಯೆ ಒಂದು ವಿಶೇಷ ಸುದ್ದಿ ಹೊರಬಂದಿದೆ.

Last Updated : Feb 28, 2020, 01:56 PM IST
ಈ ಕಂಪನಿಯ SIM ಬಳಕೆ ನಿಮ್ಮ ಜೇಬಿಗೆ ದುಬಾರಿಯಾಗಿ ಪರಿಣಮಿಸಲಿದೆ title=

ನವದೆಹಲಿ: ನಿತ್ಯ ಹೊರ ಬರುತ್ತಿರುವ ಅಗ್ಗದ ದರದ ಕಾಲಿಂಗ್ ಹಾಗೂ ಡೇಟಾ ಕೊಡುಗೆಗಳ ಮಧ್ಯೆ ಒಂದು ವಿಶೇಷ ಸುದ್ದಿ ಹೊರಬಂದಿದೆ. ವೊಡಾಫೋನ್-ಐಡಿಯಾ ಕಂಪನಿಗಳು ತಮ್ಮ ಟ್ಯಾರಿಫ್ ನಲ್ಲಿ ಭಾರಿ ಹೆಚ್ಚಳ ಮಾಡಲು ನಿರ್ಧರಿಸಿವೆ. ಕಂಪನಿ ಇದೀಗ ತಮ್ಮ ಬಳಕೆದಾರರಿಂದ ಪ್ರತಿ GB ಮೊಬೈಲ್ ಡೇಟಾ ಶುಲ್ಕವನ್ನು ಹೆಚ್ಚಿಸಿ ಕನಿಷ್ಠ ರೂ.35ಕ್ಕೆ ನಿಗದಿಪಡಿಸಲು ಚಿಂತನೆ ನಡೆಸುತ್ತಿದೆ. ಇದು ಸದ್ಯ ಚಾಲ್ತಿಯಲ್ಲಿರುವ ಕಂಪನಿಯ ಕನಿಷ್ಠ ಟ್ಯಾರಿಫ್ ಗಿಂತ 7 ರಿಂದ 8 ಪಟ್ಟು ಹೆಚ್ಚಾಗಿದೆ. ಈ ಕುರಿತು ಕಂಪನಿ ಶೀಘ್ರವೇ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಈ ಹೊಸ ಟ್ಯಾರಿಫ್ ಅನ್ನು ಜಾರಿಗೊಳಿಸಲು ಕಂಪನಿ ಸರ್ಕಾರಕ್ಕೆ ಅನುಮತಿ ಕೂಡ ಕೇಳಿದೆ ಎಂದು ಹೇಳಲಾಗಿದೆ. ವೊಡಾಫೋನ್-ಐಡಿಯಾ ಕಂಪನಿ ಸುಮಾರು 53 ಸಾವಿರ ಕೋಟಿ ರೂ.ಗಳ AGR ಬಾಕಿ ಉಳಿಸಿಕೊಂಡಿರುವುದು ಇಲ್ಲಿ ಗಮನಾರ್ಹ. ಇದನ್ನು ತೀರಿಸಲು ಕಂಪನಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ.

ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಸಾಧ್ಯತೆ
ಮೂಲಗಳ ಪ್ರಕಾರ ಸಾಲದ ಹೊರೆಗೆ ಸಿಲುಕಿರುವ VODAFONE IDEA ಕಂಪನಿಗಳು ಪ್ರತಿ ವರ್ಷ 53 ಸಾವಿರ ಕೋಟಿ ರೂ.ಗಳ ಸಾಲ ತೀರಿಸಬೇಕು. ಇದೆ ನಿಟ್ಟಿನಲ್ಲಿ ಕಂಪನಿ ಇದೀಗ ಯೋಚನೆ ನಡೆಸುತ್ತಿದ್ದು, ಮುಂಬರುವ ಏಪ್ರಿಲ್ ತಿಂಗಳಿನಿಂದ ಮೊಬೈಲ್ ಟ್ಯಾರಿಫ್ ಹೆಚ್ಚಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿ ತನ್ನ ಮೊಬೈಲ್ ಡೇಟಾ ಕನಿಷ್ಠ ಶುಲ್ಕವನ್ನು ಪ್ರತಿ GBಗೆ ರೂ.35 ನಿಗದಿಪಡಿಸಲು ವಿಚಾರ ನಡೆಸುತ್ತಿದೆ. ಇದೆ ರೀತಿ ಕಾಲ್ ರೇಟ್ ಕೂಡ 6 ಪೈಸೆಗಳಷ್ಟು ಹೆಚ್ಚಿಸಲು ಯೋಚನೆ ನಡೆಸುತ್ತಿದೆ. ಕಾಲ್ ಸೇವೆ ಒದಗಿಸಲೂ ಕೂಡ ಕಂಪನಿ ಕನಿಷ್ಠ 6 ಪೈಸೆ ಪ್ರತಿ ಮಿನಿಟ್ ಇರ್ಧರಿಸುವ ಸಾಧ್ಯತೆ ಇದೆ. ಈ ನೂತನ ಟ್ಯಾರಿಫ್ ಜಾರಿಗೊಳಿಸಲು ಕಂಪನಿ ಕೇಂದ್ರ ಸರ್ಕಾರದ ಅನುಮತಿ ಕೇಳಿದೆ.

ಟೆಲಿಕಾಂ ವಿಭಾಗ ಕೂಡ ಸಾಲದಲ್ಲಿ ರಿಯಾಯಿತಿ ನೀಡಲು ಯೋಚಿಸುತ್ತಿದೆ
ಈ ಕುರಿತು ಹೇಳಿಕೆ ನೀಡಿರುವ ಟೆಲಿಕಾಂ ವಿಭಾಗದ ಅಧಿಕಾರಿಗಳು ಟೆಲಿಕಾಂ ಸಚಿವಾಲಯ ವೊಡಾಫೋನ್ ಐಡಿಯಾ ಮೇಲೆ ಸದ್ಯ ಇರುವ AGR ಬಾಕಿಯಲ್ಲಿ ರಿಯಾಯಿತಿ ನೀಡುವ ಕುರಿತು ಯೋಚನೆ ನಡೆಸುತ್ತಿದ್ದು, ಈ ಬಾಕಿ ಪಾವತಿಗೆ ನೀಡಲಾಗಿರುವ ಸಮಯಯನ್ನು ಟೆಲಿಕಾಂ ವಿಭಾಗ ಹೆಚ್ಚಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಕಂಪನಿಗಳು ಈ ಹಣವನ್ನು ಕಂತುಗಳಲ್ಲಿಯೂ ಕೂಡ ಪಾವತಿಸುವ ಪಕ್ಷದಲ್ಲಿ ಸರ್ಕಾರ ಯೋಚನೆ ನಡೆಸುತ್ತಿದೆ.

Trending News