UPI Transaction: 'UPI ವ್ಯವಹಾರಕ್ಕೆ ಶುಲ್ಕ...' ಸುದ್ದಿ ಸುಳ್ಳು ಎಂದ NPCI

UPI Transaction: ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ, ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಸ್ಪಷ್ಟಪಡಿಸಿದೆ. ಹೊಸ ವರ್ಷದಿಂದ ಯುಪಿಐ ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗುತ್ತದೆ ಎಂದು ಹಲವು ಮಾಧ್ಯಮಗಳು ವರದಿ ಪ್ರಕಟಿಸಿದ್ದವು.

Written by - Nitin Tabib | Last Updated : Jan 2, 2021, 03:51 PM IST
  • UPI ವಹಿವಾಟುಗಳಿಗೆ ಸಮಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ NPCI
  • ಹೊಸ ವರ್ಷದಲ್ಲಿ ಯಾವುದೇ UPI ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ಇಲ್ಲ,
  • ಈ ಕುರಿತಾದ ವರದಿಗಳು ಸುಳ್ಳು ಎಂದ NPCI
UPI Transaction: 'UPI ವ್ಯವಹಾರಕ್ಕೆ ಶುಲ್ಕ...' ಸುದ್ದಿ ಸುಳ್ಳು ಎಂದ NPCI title=
UPI Transaction (File Image)

ನವದೆಹಲಿ: UPI Transaction - UPI ವಹಿವಾಟಿನ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಹೊಸ ವರ್ಷದಲ್ಲಿ ಯುಪಿಐ ವಹಿವಾಟಿನ ಮೇಲೆ ಯಾವುದೇ ರೀತಿಯ ಹೊಸ ಶುಲ್ಕ ವಿಧಿಸಲಾಗುತ್ತಿಲ್ಲ. ಹೀಗಾಗಿ ಗ್ರಾಹಕರು Amazon Pay, Google Pay ಹಾಗೂ PhonePe ಮೇಲೆ ಎಂದಿನಂತೆ ತಮ್ಮ ಹಣ ವಿನಿಮಯ ಪ್ರಕ್ರಿಯೆ ಮುಂದುವರೆಸಬಹುದಾಗಿದ್ದು. ಇದಕ್ಕಾಗಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

ಇದನ್ನು ಓದಿ- Paytm ಪಾವತಿಯಲ್ಲಿ ಪಡೆಯಿರಿ ಇನ್ನಷ್ಟು ಲಾಭ, ಕಂಪನಿ ನೀಡಿದೆ ಈ ಆಫರ್

UPI ಪೇಮೆಂಟ್ ಮೇಲೆ ಯಾವುದೇ ಶುಲ್ಕ ಇಲ್ಲ
ಈ ಕುರಿತು ಹೇಳಿಕೆ ನೀಡಿರುವ NPCI, ಕೆಲ ಮಾಧ್ಯಮಗಳಲ್ಲಿ ನೂತನ ವರ್ಷದಲ್ಲಿ UPI ವ್ಯವಹಾರಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎನ್ನಲಾಗುತ್ತಿದ್ದು, ಈ ಕುರಿತಾದ ಸುದ್ದಿಗಳು ಸುಳ್ಳು ಸುದ್ದಿಗಳಾಗಿವೆ ಎಂದಿದೆ. ಈ ಕುರಿತಾದ ಗ್ರಾಹಕರ ಕನ್ಫ್ಯೂಶನ್ ಗಮನದಲ್ಲಿಟ್ಟುಕೊಂಡು, ಎಲ್ಲ ಬಳಕೆದಾರರು ಮೊದಲಿನಂತೆಯೇ UPI ವಹಿವಾಟುಗಳನ್ನು ಜಾರಿಯಲ್ಲಿಡಬಹುದು ಎಂದು National Payments Corporation of India (NPCI) ಹೇಳಿದೆ.

ಇದನ್ನು ಓದಿ- UPI ಪೇಮೆಂಟ್ ವೇಳೆ ವಹಿವಾಟು ವಿಫಲವಾದರೂ ಹಣ ಕಡಿತಗೊಂಡರೆ ತಕ್ಷಣವೇ ಮಾಡಿ ಈ ಕೆಲಸ

ಮೊದಲಿನಂತೆಯೇ ವಹಿವಾಟು ನಡೆಸಬಹುದು
ಅಮೆಜಾನ್ ಪೇ, ಗೂಗಲ್ ಪೇ ಮತ್ತು ಫೋನ್ ಪೇ ಯುಪಿಐ ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು ಎಂದು ಮೊದಲು ಕೆಲ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿದ್ದವು. ಏಕೆಂದರೆ ಎನ್‌ಪಿಸಿಐ ಜನವರಿ 1, 2021 ರಿಂದ ಥರ್ಡ್ ಪಾರ್ಟಿ  ಅಪ್ಲಿಕೇಶನ್ ಸೇವಾ ಕಂಪನಿಗಳ ಪಾವತಿಗೆ ಶೇ. ಕ್ಯಾಪ್ ವಿಧಿಸಲು ನಿರ್ಧರಿಸಿದೆ. ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಈಗ ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಯುಪಿಐ ಅನ್ನು ವ್ಯವಹಾರಗಳಿಗೆ ಬಳಸುವ ಎಲ್ಲ ಗ್ರಾಹಕರಿಗೆ ಇದೊಂದು ನೆಮ್ಮದಿಯ ಸುದ್ದಿ ಎಂದೇ ಹೇಳಬಹುದು.

ಇದನ್ನು ಓದಿ-Google ವಿರುದ್ದ ತಾರತಮ್ಯದ ಆರೋಪ ಎಸಗಿದ Paytm

ಏನಿದು UPI?
ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಒಂದು ರಿಯಲ್ ಟೈಮ್ ಹಣ ಪಾವತಿ ವ್ಯವಸ್ಥೆಯಾಗಿದೆ. ಇದು ಮೊಬೈಲ್ ಪ್ಲಾಟ್ ಫಾರ್ಮ್ ಅನ್ನು ಬಳಸಿ ಬ್ಯಾಂಕ್ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಕೇವಲ ಮೊಬೈಲ್ ಸಂಖ್ಯೆಯನ್ನು ಬಳಸಿ ನೀವು ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹದು. ಈ ಮಾಧ್ಯಮದ ಮೂಲಕ ನೀವು ಒಂದೇ ಬ್ಯಾಂಕ್ ಖಾತೆಯನ್ನು ಹಲವು UPI ಆಪ್ ಗಳಿಗೆ ಸಂಪರ್ಕಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News