ಏಕತಾ ಪ್ರತಿಮೆಗಿಂತಲೂ ಎತ್ತರವಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ

ತೆಲಂಗಾಣ ಮತ್ತು ಆಂಧ್ರಪ್ರದೇಶ ವಿಭಜನೆಯಾದ ಬಳಿಕ ಆಂಧ್ರಪ್ರದೇಶ ತನಗೆ ಹೊಸ ರಾಜಧಾನಿ ಮತ್ತು ವಿಧಾನಸಭೆಗಳನ್ನು ನಿರ್ಮಿಸಿಕೊಳ್ಳುತ್ತಿದೆ.

Last Updated : Nov 23, 2018, 06:15 PM IST
ಏಕತಾ ಪ್ರತಿಮೆಗಿಂತಲೂ ಎತ್ತರವಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ title=

ಅಮರಾವತಿ: ಆಂಧ್ರ ಪ್ರದೇಶ ತನ್ನ ವಿಧಾನಸಭೆ ಕಟ್ಟಡ ನಿರ್ಮಿಸಲು ವಿನ್ಯಾಸ ರೂಪಿಸಿದ್ದು, ಆ ಕಟ್ಟಡ ಗುಜರಾತ್​ನಲ್ಲಿ ನಿರ್ಮಾಣವಾಗಿರುವ ಸರ್ದಾರ್​ ವಲ್ಲಭಭಾಯಿ ಪಟೇಲರ ಅತ್ಯಂತ ಎತ್ತರದ ಏಕತಾ ಪ್ರತಿಮೆಗಿಂತಲೂ ಎತ್ತರವಿರಲಿದೆ ಎನ್ನಲಾಗಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶ ವಿಭಜನೆಯಾದ ಬಳಿಕ ಆಂಧ್ರಪ್ರದೇಶ ತನಗೆ ಹೊಸ ರಾಜಧಾನಿ ಮತ್ತು ವಿಧಾನಸಭೆಗಳನ್ನು ನಿರ್ಮಿಸಿಕೊಳ್ಳುತ್ತಿದೆ. ಅದರಂತೆ ಏಕತಾ ಪ್ರತಿಮೆಗಿಂತಲೂ ಎತ್ತರವಾಗಿ ವಿಧಾನಸಭೆಯ ಕಟ್ಟಡವನ್ನು ನಿರ್ಮಿಸಲು ಸಿಎಂ ಚಂದ್ರಬಾಬು ನಾಯ್ಡು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದ್ದು, ಸರ್ದಾರ್​ ವಲ್ಲಭಭಾಯಿ ಪಟೇಲರ ಪ್ರತಿಮೆಗಿಂತಲೂ 68 ಮೀಟರ್​ ಎತ್ತರದ ಕಟ್ಟಡ ನಿರ್ಮಾಣದ ಕುರಿತು ನಾಯ್ಡು ಈಗಾಗಲೇ ಆಂಧ್ರದ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಇದಕ್ಕಾಗಿ ನಾಯ್ಡು ಈಗಾಗಲೇ ಕಟ್ಟಡದ ವಿನ್ಯಾಸ, ನೀಲ ನಕ್ಷೆ ಎಲ್ಲವನ್ನೂ ಅಂತಿಮಗೊಳಿಸಿದ್ದು ಯುಕೆ ಮೂಲದ ವಾಸ್ತುಶಿಲ್ಪಿ ನೋರ್ಮಾ ಫಾಸ್ಟರ್ಸ್ಈ ವಿನ್ಯಾಸವನ್ನು ರೂಪಿಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಕಟ್ಟಡವು ಮೂರು ಅಂತಸ್ತುಗಳನ್ನು ಹೊಂದಿರಲಿದೆ ಹಾಗೂ ಉಲ್ಟಾ ಲಿಲ್ಲಿ ಹೂವಿನ ಆಕಾರದಲ್ಲಿ ಇರಲಿದೆ ಎಂದು ಪೌರಾಡಳಿತ ಸಚಿವ ಪಿ.ನಾರಾಯಣ ಹೇಳಿದ್ದಾರೆ. ಸರ್ಕಾರ ಕಟ್ಟಡ ನಿರ್ಮಾಣ ಸಂಬಂಧ ಟೆಂಡರ್ ಪ್ರಕ್ರಿಯೆಯನ್ನು  ಅಂತಿಮಗೊಳಿಸಲು ಸುಮಾರು ಎರಡು ವರ್ಷ ಕಾಲ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
 

Trending News