UP School Reopen: ನಾಳೆಯಿಂದ 6 ನೇ ತರಗತಿಯಿಂದ ಶಾಲೆ ಆರಂಭ ; ಹಾಜರಾತಿ ಅನಿವಾರ್ಯವಲ್ಲ

ಸರ್ಕಾರ (UP Government) ಹೊರಡಿಸಿದ ಈ ಆದೇಶದಲ್ಲಿ, ಮೊದಲನೇ ಶಿಫ್ಟ್ ಸಮಯದಲ್ಲಿ ಕೇವಲ 50% ವಿದ್ಯಾರ್ಥಿಗಳಿಗೆ ಮಾತ್ರ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವಂತೆ ಹೇಳಲಾಗಿದೆ. 

Written by - Ranjitha R K | Last Updated : Aug 23, 2021, 08:43 PM IST
  • ಮಂಗಳವಾರದಿಂದ ಯುಪಿಯಲ್ಲಿ 6 ರಿಂದ 8 ರವರೆಗಿನ ಶಾಲೆಗಳು ಪುನರಾರಂಭ
  • ತಲಾ 4 ಗಂಟೆಗಳ 2 ಪಾಳಿಯಲ್ಲಿ ಪಾಠ
  • ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾಧ್ಯಮಗಳಲ್ಲಿ ಕ್ಲಾಸ್
UP School Reopen: ನಾಳೆಯಿಂದ 6 ನೇ ತರಗತಿಯಿಂದ ಶಾಲೆ ಆರಂಭ ; ಹಾಜರಾತಿ ಅನಿವಾರ್ಯವಲ್ಲ  title=
ಮಂಗಳವಾರದಿಂದ ಯುಪಿಯಲ್ಲಿ 6 ರಿಂದ 8 ರವರೆಗಿನ ಶಾಲೆಗಳು ಪುನರಾರಂಭ (file photo)

ಲಕ್ನೋ : ಕರೋನವೈರಸ್ (Coronavirus) ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಿದ್ದ 6, 7 ಮತ್ತು 8 ನೇ ತರಗತಿಯ ಶಾಲೆಗಳನ್ನು ಮಂಗಳವಾರದಿಂದ ಮತ್ತೆ ತೆರೆಯಲಾಗುವುದು. ಇತ್ತೀಚೆಗಷ್ಟೇ ಈ ಬಗ್ಗೆ ಉತ್ತರಪ್ರದೇಶ ಸರ್ಕಾರ (UP Government) ಘೋಷಣೆ ಮಾಡಿತ್ತು. ತಲಾ 4-4 ಗಂಟೆಗಳ 2 ಪಾಳಿಗಳಲ್ಲಿ ತರಗತಿಗಳನ್ನು ನಡೆಸುವಂತೆ ಸರ್ಕಾರ ಆದೇಶಿಸಿದೆ.

ಎರಡು ಪಾಳಿಯಲ್ಲಿ ನಡೆಯುತ್ತವೆ ತರಗತಿಗಳು  :
ಸರ್ಕಾರ (UP Government) ಹೊರಡಿಸಿದ ಈ ಆದೇಶದಲ್ಲಿ, ಮೊದಲನೇ ಶಿಫ್ಟ್ ಸಮಯದಲ್ಲಿ ಕೇವಲ 50% ವಿದ್ಯಾರ್ಥಿಗಳಿಗೆ ಮಾತ್ರ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವಂತೆ ಹೇಳಲಾಗಿದೆ. ಉಳಿದ ಶೇ .50 ರಷ್ಟು ವಿದ್ಯಾರ್ಥಿಗಳಿಗೆ ಎರಡನೇ ಪಾಳಿಯಲ್ಲಿ ಪಾಠ ನಡೆಸಲಾಗುತ್ತದೆ. ಪೋಷಕರಿಂದ ಅನುಮತಿ ಪತ್ರ ಪಡೆದ ನಂತರವೇ  ಶಾಲೆಗೆ ಪ್ರವೇಶಿಸಲು (School reopen) ಮಕ್ಕಳಿಗೆ ಅವಕಾಶ ನೀಡಲಾಗುವುದು . ಇದರೊಂದಿಗೆ, ತರಗತಿಯಲ್ಲಿ ಅಸೆಂಬ್ಲಿ ಕೂಡಾ ನಡೆಸಲಾಗುತ್ತದೆ.  ಇನ್ನು ಊಟವನ್ನು ಮಕ್ಕಳು ತರಗತಿಯಲ್ಲಿಯೇ ಮಾಡಬೇಕು. ಇದರ ಹೊರತಾಗಿಯೂ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು  ಪೋಷಕರು ಬಯಸದೆ ಇದ್ದಾರೆ, ಆ ಮಕ್ಕಳಿಗೆ ಆನ್‌ಲೈನ್ ತರಗತಿಗಳು ಮುಂದುವರಿಯುತ್ತವೆ. ಅಂದರೆ, ಮಂಗಳವಾರದಿಂದ, ಅಧ್ಯಯನಗಳನ್ನು ಆನ್‌ಲೈನ್ (Online class) ಮತ್ತು ಆಫ್‌ಲೈನ್ ಮೋಡ್‌ನಲ್ಲಿ ನಡೆಯಲಿದೆ. 

ಇದನ್ನೂ ಓದಿ :ಅಪ್ರಾಪ್ತ ಬಾಲಕರಿಂದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಮಗುವಿಗೆ ಜನ್ಮ

1 ರಿಂದ 5 ನೇ ವರೆಗಿನ ತರಗತಿಗಳು ಸೆಪ್ಟೆಂಬರ್ ನಿಂದ ಕಾರ್ಯಾರಂಭ : 
 ರಾಜ್ಯದಲ್ಲಿ ಕೊರೊನಾ ಸೋಂಕು (COVID-19) ಕಡಿಮೆಯಾದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶ ಸರ್ಕಾರವು ಶಾಲೆಗಳನ್ನು 1 ರಿಂದ 8 ನೇ ತರಗತಿಗೆ ಮತ್ತೆ ತೆರೆಯಲು ನಿರ್ಧರಿಸಿದೆ. 6 ರಿಂದ 8 ನೇ ತರಗತಿಗಳಿಗೆ ಆಫ್‌ಲೈನ್ ತರಗತಿಗಳು ಆಗಸ್ಟ್ 24 ರಿಂದ ರಾಜ್ಯದಲ್ಲಿ ಆರಂಭವಾಗಲಿದ್ದು, 1 ರಿಂದ 5 ನೇ ತರಗತಿಯ ಶಾಲೆಗಳು ಸೆಪ್ಟೆಂಬರ್ 1 ರಿಂದ ತೆರೆಯಲ್ಪಡುತ್ತವೆ. ಸೆಕೆಂಡರಿ, ಹೈಯರ್, ಟೆಕ್ನಿಕಲ್ ವೋಕೇಶನಲ್ ಎಜುಕೇಶನ್ ಇನ್‌ಸ್ಟಿಟ್ಯೂಟ್‌ನಲ್ಲಿ, ಶೇಕಡಾ 50 ರಷ್ಟು ಮಕ್ಕಳ ಸಾಮರ್ಥ್ಯದೊಂದಿಗೆ ಅಧ್ಯಯನಗಳನ್ನು ನಡೆಸಲಾಗುತ್ತದೆ. ಆದರೆ ಕಿರಿಯ ಮಕ್ಕಳಿಗಾಗಿ ತರಗತಿಗಳನ್ನು ಎರಡು ಪಾಳಿಯಲ್ಲಿ ನಡೆಸಲಾಗುತ್ತದೆ. ಆದರೂ  ಶಾಲೆಗಳಲ್ಲಿ ವಿದ್ಯಾರ್ಥಿಗಳ ಉಪಸ್ಥಿತಿ ಕಡ್ಡಾಯವಾಗಿರುವುದಿಲ್ಲ ಎಂದು ಯುಪಿ ಶಿಕ್ಷಣ ಸಚಿವ ದಿನೇಶ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ :Good News! ಕೊರೊನಾ ಕಾಲದಲ್ಲಿ ಆನ್ಲೈನ್ ಮೋಡ್ ನಲ್ಲಿ 123 ಹೊಸ ಕೋರ್ಸ್ ಆರಂಭಿಸಿದ UGC

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News