ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ನಿಧನರಾಗಿದ್ದಾರೆ ಎಂದು ಗುರುವಾರ ಸಂಜೆ ತಮ್ಮ ಮಗ ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
पापा....अब आप इस दुनिया में नहीं हैं लेकिन मुझे पता है आप जहां भी हैं हमेशा मेरे साथ हैं।
Miss you Papa... pic.twitter.com/Qc9wF6Jl6Z— युवा बिहारी चिराग पासवान (@iChiragPaswan) October 8, 2020
“ಪಾಪಾ .... ಈಗ ನೀವು ಈ ಜಗತ್ತಿನಲ್ಲಿಲ್ಲ ಆದರೆ ನೀವು ಎಲ್ಲಿದ್ದರೂ ನೀವು ಯಾವಾಗಲೂ ನನ್ನೊಂದಿಗೆ ಇರುತ್ತೀರಿ ಎಂದು ನನಗೆ ತಿಳಿದಿದೆ. ಮಿಸ್ ಯು ಪಾಪಾ… ”ಎಂದು ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಕಳೆದ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ರಾಜಕೀಯದಲ್ಲಿದ್ದ ನಾಯಕರಲ್ಲಿ ಒಬ್ಬರಾದ್ದರು. ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.ಈಗ ಪಾಸ್ವಾನ್ ನಿಧನದಿಂದಾಗಿ ಕೇವಲ ಎರಡು ತಿಂಗಳ ಅಂತರದಲ್ಲಿ ಸಾವನ್ನಪ್ಪಿದ ಎರಡನೇ ಕೇಂದ್ರ ಸಚಿವರಾಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ಸುರೇಶ್ ಅಂಗಡಿ ಕರೋನವೈರಸ್‌ನಿಂದ ನಿಧನರಾದರು.
ಕಳೆದ ನವೆಂಬರ್‌ನಲ್ಲಿ, ಲೋಕ ಜನಶಕ್ತಿ ಪಕ್ಷಕ್ಕೆ 19 ವರ್ಷಗಳ ಕಾಲ ನೇತೃತ್ವ ವಹಿಸಿದ ನಂತರ, ರಾಮ್ ವಿಲಾಸ್ ಪಾಸ್ವಾನ್ ತಮ್ಮ ಮಗ ಮತ್ತು ಸಂಸದ ಚಿರಾಗ್ ಪಾಸ್ವಾನ್ ಅವರನ್ನು ಪಕ್ಷದ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲು ತಮ್ಮ ಹುದ್ದೆಯಿಂದ ಕೆಳಗಿಳಿದರು.