Toll Plaza: ಮುಂದಿನ ವರ್ಷದಿಂದ 'ಬಂದ್'‌ ಆಗಲಿದೆ ಟೋಲ್ ಪ್ಲಾಜಾಗಳು..!

ಮುಂದಿನ ದಿನಗಳಲ್ಲಿ ಟೆಕ್ನಾಲಜಿ ಮೂಲಕವೇ ಟೋಲ್​​ ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನ ಜಾರಿ

Last Updated : Mar 18, 2021, 01:48 PM IST
  • ಕೇಂದ್ರ ಸರ್ಕಾರ ಮುಂದಿನ ಒಂದು ವರ್ಷದಲ್ಲಿ ದೇಶದಲ್ಲಿ ಎಲ್ಲಾ ಟೋಲ್​ ಪ್ಲಾಜಾಗಳನ್ನ ರದ್ದು ಮಾಡುವ ಯೋಜನೆಯ ಮೇಲೆ ಕೆಲಸ
  • ಮುಂದಿನ ದಿನಗಳಲ್ಲಿ ಟೆಕ್ನಾಲಜಿ ಮೂಲಕವೇ ಟೋಲ್​​ ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನ ಜಾರಿ
  • ಟೋಲ್ ಕೊನೆಗೊಳಿಸುವುದು ಎಂದರೆ ಟೋಲ್ ಪ್ಲಾಜಾವನ್ನು ಕೊನೆಗೊಳಿಸುವುದು ಎಂದು ಹೇಳಿದ್ದಾರೆ.
Toll Plaza: ಮುಂದಿನ ವರ್ಷದಿಂದ 'ಬಂದ್'‌ ಆಗಲಿದೆ ಟೋಲ್ ಪ್ಲಾಜಾಗಳು..! title=

ನವದೆಹಲಿ: ಕೇಂದ್ರ ಸಚಿವ ನಿತಿನ್​ ಗಡ್ಕರಿ ಲೋಕಸಭೆಯಲ್ಲಿ ಬಹುದೊಡ್ಡ ಘೋಷಣೆಯನ್ನ ಮಾಡಿದ್ದಾರೆ. ಕೇಂದ್ರ ಸರ್ಕಾರ ಮುಂದಿನ ಒಂದು ವರ್ಷದಲ್ಲಿ ದೇಶದಲ್ಲಿ ಎಲ್ಲಾ ಟೋಲ್​ ಪ್ಲಾಜಾಗಳನ್ನ ರದ್ದು ಮಾಡುವ ಯೋಜನೆಯ ಮೇಲೆ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಟೆಕ್ನಾಲಜಿ ಮೂಲಕವೇ ಟೋಲ್​​ ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನ ಜಾರಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಅಮರೋಹಾದ ಬಿಎಸ್​ಪಿ ಸಂಸದ ಕುಂವರ್​ ದಾನಿಶ್​​ ಅಲಿ ಮುಕ್ತೇಶ್ವರ ಬಳಿ ರಸ್ತೆಯಲ್ಲಿರುವ ಟೋಲ್​ ಪ್ಲಾಜಾ(Toll Plaza) ವಿಚಾರವನ್ನ ಪ್ರಸ್ತಾಪಿಸಿದ ವೇಳೆ ಉತ್ತರಿಸಿದ ನಿತಿನ್‌ ಗಡ್ಕರಿ, ಟೋಲ್ ಕೊನೆಗೊಳಿಸುವುದು ಎಂದರೆ ಟೋಲ್ ಪ್ಲಾಜಾವನ್ನು ಕೊನೆಗೊಳಿಸುವುದು ಎಂದು ಹೇಳಿದ್ದಾರೆ. ಈಗ ಸರ್ಕಾರವು ಅಂತಹ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಜಿಪಿಎಸ್ ಸಹಾಯದಿಂದ ವಾಹನ ಟೋಲ್‌ ಶುಲ್ಕವಿರುವ ರಸ್ತೆಯನ್ನು ಏರುವ ಹಾಗೂ ಹೊರ ಹೋಗುವ ಫೋಟೋ ತೆಗೆದುಕೊಳ್ಳುತ್ತದೆ. ಇದರ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂದರು.

Corona Pandemic: 70 ಜಿಲ್ಲೆಗಳಲ್ಲಿ 70 ಜಿಲ್ಲೆಗಳಲ್ಲಿ ಕರೋನಾ ರೋಗಿಗಳಲ್ಲಿ 150% ಹೆಚ್ಚಳ

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇಂತಹ ಟೋಲ್​ ಪ್ಲಾಜಾಗಳನ್ನ ನಿರ್ಮಿಸಲಾಗಿದೆ. ಫಾಸ್ಟ್​ಟ್ಯಾಗ್​ ವ್ಯವಸ್ಥೆ ದೇಶದಲ್ಲಿ ಸಂಪೂರ್ಣವಾಗಿ ಜಾರಿಗೆ ಬಂದ ಬಳಿಕ ಟೋಲ್​ ತೆಗೆದುಕೊಳ್ಳುವ ಈಗಿನ ವ್ಯವಸ್ಥೆಯನ್ನ ಸಂಪೂರ್ಣವಾಗಿ ಬಂದ್​ ಮಾಡುತ್ತೇವೆ. ಟೋಲ್​ ಪ್ಲಾಜಾಗಳ ಬದಲಾಗಿ ಟೆಕ್ನಾಲಜಿಯನ್ನ ಬಳಸೋಕೆ ನಾವು ಸಿದ್ಧತೆ ಮಾಡುತ್ತಿದ್ದೇವೆ. ಜಿಪಿಎಸ್(GPS)​ ಸಹಾಯದಿಂದ ಕ್ಯಾಮರಾ ಎಲ್ಲಿಂದ ನೀವು ಹೆದ್ದಾರಿ ಬಳಕೆ ಆರಂಭಿಸಿದ್ದೀರಿ ಅನ್ನೋದನ್ನ ಫೋಟೋ ತೆಗೆದುಕೊಳ್ಳುತ್ತೆ ಹಾಗೂ ನೀವು ಯಾವ ಸ್ಥಳದಿಂದ ಹೆದ್ದಾರಿಯಿಂದ ನಿರ್ಗಮಿಸಿದ್ದೀರಿ ಎಂಬ ಫೋಟೋ ಕೂಡ ಕ್ಲಿಕ್ಕಿಸಲಾಗುತ್ತೆ. ಇದನ್ನೆ ಆಧರಿಸಿ ಜಿಪಿಎಸ್​ ಸಹಾಯದಿಂದ ನಿಮ್ಮ ಟೋಲ್​ ಶುಲ್ಕ ಡಿಜಿಟಲ್​ ವಿಧಾನದಲ್ಲಿ ಪಾವತಿಯಾಗಲಿದೆ ಎಂದು ಹೇಳಿದ್ರು.

"ನಾಯಿ ಸತ್ತಾಗ ಸಂತಾಪ ಸೂಚಿಸುವವರು 250 ರೈತರು ಸತ್ತಾಗ ಸೂಚಿಸುತ್ತಿಲ್ಲ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News