Underwater metro tunnel : ದೇಶದ ಮೊದಲ ನೀರೊಳಗಿನ ಮೆಟ್ರೋ ಸುರಂಗ ಮಾರ್ಚ್‌ 6ರಂದು ಉದ್ಘಾಟನೆ

Underwater metro tunnel :  ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗವನ್ನು  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್‌ 6ರಂದು ಉದ್ಘಾಟನೆ ಮಾಡಲಿದ್ದಾರೆ.

Written by - Zee Kannada News Desk | Last Updated : Mar 4, 2024, 06:45 PM IST
  • ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್‌ 6 ಉದ್ಘಾಟನೆ ಮಾಡಲಿದ್ದಾರೆ.
  • ದೇಶದಲ್ಲಿ ಸಾರಿಗೆ ವಿಭಾಗಗಳಾದ, ಮೆಟ್ರೋ, ರೈಲುಗಳ ವಿಭಾಗಗಳಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಆಗುತ್ತಲಿವೆ.
  • ಹೋಗ್ಲಿ ನದಿಯಡಿಯಲ್ಲಿ ನಿರ್ಮಿಸಿರುವ ಸುರಂಗವು ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಮೊಟ್ರೋ ಕಾರಿಡಾರ್‌ನ ಭಾಗ ಆಗಿದೆ.
Underwater metro tunnel : ದೇಶದ ಮೊದಲ ನೀರೊಳಗಿನ ಮೆಟ್ರೋ ಸುರಂಗ ಮಾರ್ಚ್‌ 6ರಂದು ಉದ್ಘಾಟನೆ title=

first underwater metro tunnel will be inaugurated on March 6 :  ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್‌ 6 ಉದ್ಘಾಟನೆ ಮಾಡಲಿದ್ದಾರೆ. ದೇಶದಲ್ಲಿ ಸಾರಿಗೆ ವಿಭಾಗಗಳಾದ, ಮೆಟ್ರೋ, ರೈಲುಗಳ ವಿಭಾಗಗಳಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಆಗುತ್ತಲಿವೆ. ಇದನ್ನು  ಕೋಲ್ಕತ್ತಾದಲ್ಲಿ ನಿರ್ಮಿಸಲಾಗಿದ್ದು, ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗವನ್ನು ಬುಧವಾರ ಉದ್ಘಾಟನೆ ಮಾಡಲಿದ್ದಾರೆ. 

ಇದು ಹೌರಾ ಮೈದಾನದಿಂದ ಎಸ್‌ಪ್ಲೇನೇಡ್‌ಗೆ ಸಂಪರ್ಕಿಸುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಹೋಗ್ಲಿ ನದಿಯಡಿಯಲ್ಲಿ ನಿರ್ಮಿಸಿರುವ ಸುರಂಗವು ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಮೊಟ್ರೋ ಕಾರಿಡಾರ್‌ನ ಭಾಗ ಆಗಿದೆ.

ಇದನ್ನು ಓದಿ :ಶನಿ ಶುಕ್ರ ಯುತಿ: 3 ರಾಶಿಯವರಿಗೆ ಧನ-ಸಂಪತ್ತು ಪ್ರಾಪ್ತಿ, ರಾಜಯೋಗ 

ಹೌರಾ ಮೈದಾನ್‌-ಲಸ್ಪ್ಲಾನೇಡ್‌ ಮೆಟ್ರೋ ಮಾರ್ಗವು ಭಾರತದ ಯಾವುದೇ ಪ್ರಬಲ ನದಿಯ ಅಡಿಯಲ್ಲಿ ಮೊದಲ ಸಾರಿಗೆ ಸುರಂಗವನ್ನು ಹೊಂದಿದೆ. ಅದೇ ದಿನ ಕೋಲ್ಕತ್ತಾ ಮೆಟ್ರೋದ ಕವಿ ಸುಭಾಷ್‌-ಹೇಮಂತ ಉಖ್ಯೋಪಾಧ್ಯಾಯ ಮತ್ತು ತಾರಾತಲಾ-ಮಜೆರ್ಹತ್‌ ವಿಭಾಗಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ವಿಭಾಗಗಳನ್ನು ರಸ್ತೆ ದಟ್ಟಣೆಯನ್ನು ನಿವಾರಿಸಲು ಮತ್ತು ತಡೆರಹಿತ, ಸುಲಭ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿವೆ. 

ಕೋಲ್ಕತ್ತಾ ಮೆಟ್ರೋ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೌಸಿಕ್‌ ಮಿತ್ರಾ ಮಾತಮಾಡಿ, "ಪ್ರಧಾನಿ ಮೋದಿ ಅವರು ಕೋಲ್ಕತ್ತಾದ ಜನರಿಗೆ ನೀಡಿದ ಉಡುಗೊರೆ ಇದು. ಈ ಉದ್ಘಾಟನೆಯೊಂದಿಗೆ ಬಹುಕಾಲದ ಕನಸು ನನಸಾಗಲಿದೆ," ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ :Celebrity Cricket League 2024: ಚೆನ್ನೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬುಲ್ಡೋಜರ್ಸ್..!

ಆದರೆ ಹೌರಾ ಮೆಟ್ರೋ ನಿಲ್ದಾಣವು ದೇಶದಲ್ಲೇ ಅತ್ಯಂತ ಆಳವಾದದ್ದು (33-ಮೀಟರ್‌ ಮೇಲ್ಮೈ ಕೆಳಗೆ) ಎಂದು ತಿಳಿದುಬಂದಿದ್ದು, ಮೆಟ್ರೋ 45 ಸೆಕೆಂಡುಗಳಲ್ಲಿ ಹೂಗ್ಲಿ ನದಿಯಡಿಯಲ್ಲಿ 520 ಮೀಟರ್‌ ವ್ಯಾಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಮಜೆರ್ಹತ್‌ ಮೆಟ್ರೋ ನಿಲ್ದಾಣವು ವಿಶಿಷ್ಟವಾಗಿ ಎತ್ತರಿಸಿದ ಮೆಟ್ರೋ ನಿಲ್ದಾಣ ಇದಾಗಿದೆ. ಇದು ಕಾಲುವೆಯನ್ನು ಸಹ ಒಳಗೊಂಡಿರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News