ನ.17ಕ್ಕೆ 'ಮಹಾ' ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕಾರ ?

 ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗಿನ ಸಮರದೊಂದಿಗೆ ಎನ್ಡಿ ಮೈತ್ರಿಕೂಟದಿಂದ ಹೊರ ಬಂದಿರುವ ಶಿವಸೇನಾ ಈಗ ಕಾಂಗ್ರೆಸ್ ಹಾಗೂ ಎನ್ಸಿಪಿ ನೆರವಿನೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ. ಈಗ ಶಿವಸೇನಾ ಬಿಜೆಪಿ ಸಖ್ಯದಿಂದ ಹೊರಬಂದಿರುವುದು ಎನ್ಡಿಎ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ.

Last Updated : Nov 11, 2019, 08:01 PM IST
 ನ.17ಕ್ಕೆ 'ಮಹಾ' ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕಾರ ? title=
file photo

ನವದೆಹಲಿ:  ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗಿನ ಸಮರದೊಂದಿಗೆ ಎನ್ಡಿ ಮೈತ್ರಿಕೂಟದಿಂದ ಹೊರ ಬಂದಿರುವ ಶಿವಸೇನಾ ಈಗ ಕಾಂಗ್ರೆಸ್ ಹಾಗೂ ಎನ್ಸಿಪಿ ನೆರವಿನೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ. ಈಗ ಶಿವಸೇನಾ ಬಿಜೆಪಿ ಸಖ್ಯದಿಂದ ಹೊರಬಂದಿರುವುದು ಎನ್ಡಿಎ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ.

ನವೆಂಬರ್ 17 ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಏಳನೇ ವರ್ಷದ ಸ್ಮರಣಾರ್ಥ ದಿನವಾಗಿರುವ ಹಿನ್ನಲೆಯಲ್ಲಿ ಆ ದಿನ  ಉದ್ಧವ್ ಠಾಕ್ರೆ ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬಹುದು ಎನ್ನಲಾಗಿದೆ. ಅವರ ಪ್ರಮಾಣವಚನ ಸಮಾರಂಭವು ಶಿವಾಜಿ ಉದ್ಯಾನವನದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಶಿವಸೇನೆ-ಎನ್‌ಸಿಪಿ ಸರ್ಕಾರ ಮತ್ತು ಕೆಲವು ಸ್ವತಂತ್ರ ಶಾಸಕರು ಮತ್ತು ಕಾಂಗ್ರೆಸ್ಸಿನ ಬಾಹ್ಯ ಬೆಂಬಲದಿಂದಾಗಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ 145 ರ ಬಹುಮತವನ್ನು ಸುಲಭವಾಗಿ ದಾಟಲಿದೆ. ಶಿವಸೇನೆ 56 ಶಾಸಕರನ್ನು ಹೊಂದಿದ್ದರೆ, 54 ಎನ್‌ಸಿಪಿ ಮತ್ತು 44 ಕಾಂಗ್ರೆಸ್ ಶಾಸಕರ ಬಲವನ್ನು ಹೊಂದಿದೆ.

ಜೀ ನ್ಯೂಸ್ ಮೂಲಗಳ ಪ್ರಕಾರ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ನಡುವೆ ನಡೆದ ಮಾತುಕತೆಯ ಸಂದರ್ಭದಲ್ಲಿ ಶಿವಸೇನಾ ಮತ್ತು ಎನ್‌ಸಿಪಿ ನಡುವೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ರಾಜ್ಯದ ಎರಡನೇ ಅತಿದೊಡ್ಡ ಪಕ್ಷವಾದ ಶಿವಸೇನೆಗೆ ಆಹ್ವಾನಿಸಿದ ನಂತರ ಈಗ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ.

Trending News