Dinesh Karthik: ಮುಂಬರುವ ಐಪಿಎಲ್ ಋತುವಿನಲ್ಲಿ ದಿನೇಶ್ ಕಾರ್ತಿಕ್(Dinesh Karthik) ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡವನ್ನು ಪ್ರತಿನಿಧಿಸಲಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ, ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೋಮವಾರ, ಜುಲೈ 01 ರಂದು ಪ್ರಕಟಿಸಿದೆ.
ಐಪಿಎಲ್ 2024 ಸೀಸನ್‌ನಲ್ಲಿ ಆರ್‌ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದು ಗೊತ್ತೇ ಇದೆ. ಈ ಪಂದ್ಯದ ನಂತರ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ವಿದಾಯ ಹೇಳಿದರು. ಲೀಗ್‌ಗೆ ವಿದಾಯ ಹೇಳಿದ ನೋವಿನಿಂದ ಕಾರ್ತಿಕ್ ಕಣ್ಣೀರನ್ನು ಬಚ್ಚಿಟ್ಟು ಮೈದಾನದಿಂದ ನಿರ್ಗಮಿಸಿದರು. ಆದರೆ ಜೂನ್ 1 ರಂದು ತಮ್ಮ ಜನ್ಮದಿನದಂದು ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಡಿಕೆ ಅಧಿಕೃತವಾಗಿ ವಿದಾಯ ಹೇಳಿದರು. ಎರಡು ದಶಕಗಳ ಸುದೀರ್ಘ ವೃತ್ತಿಜೀವನಕ್ಕೆ ದಿನೇಶ್ ಕಾರ್ತಿಕ್ ವಿದಾಯ ಹೇಳಿದ ವಿಷಯ ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದರು. ಆದರೆ ಇದೀಗ ಆರ್ ಸಿ ಬಿ ಫ್ರಾಂಚೈಸಿ ದಿನೇಶ್ ಕಾರ್ತಿಕ್ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದೆ.
“ನಮ್ಮ ವಿಕೆಟ್‌ಕೀಪರ್‌ಗೆ ಸುಸ್ವಾಗತ. ದಿನೇಶ್ ಕಾರ್ತಿಕ್ ಹೊಸ ಅವತಾರದೊಂದಿಗೆ ಆರ್ ಸಿ ಬಿಗೆ ಮರಳಲಿದ್ದಾರೆ.ಆರ್ ಸಿ ಬಿ( RCB) ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ಕಾರ್ಯ ನಿರ್ವಹಿಸಲಿದ್ದಾರೆ. ಅವರನ್ನು ಕ್ರಿಕೆಟ್ ನಿಂದ ಬೇರ್ಪಡಿಸಬಹುದು. ಆದರೆ ಕ್ರಿಕೆಟ್ ಅವರಿಂದ ದೂರವಾಗಲು ಸಾಧ್ಯವಿಲ್ಲ ಎಂದು ಆರ್‌ಸಿಬಿ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದೆ.
ಎಬಿ ಡಿವಿಲಿಯರ್ಸ್ ಅವರಂತಹ ದಿಗ್ಗಜ ಕ್ರಿಕೆಟಿಗರು ಈ ಹಿಂದೆ ಹಲವು ಬಾರಿ ಕೋಚಿಂಗ್ ಸಿಬ್ಬಂದಿಯಾಗಿ ಆರ್‌ಸಿಬಿಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಆದರೆ ಫ್ರಾಂಚೈಸಿ ಅದನ್ನು ನಿರ್ಲಕ್ಷಿಸಿ. ಭಾರತದ ಯುವ ಆಟಗಾರರ ಅರಿವು ಮತ್ತು ದೇಶದ ಎಲ್ಲಾ ಸ್ಥಳಗಳಲ್ಲಿನ ಪಿಚ್‌ನಲ್ಲಿ ಅವರ ಅನುಭವದಿಂದಾಗಿ, ಆರ್ ಸಿ ಬಿ( RCB) ಫ್ರಾಂಚೈಸಿ ದಿನೇಶ್ ಕಾರ್ತಿಕ್‌ಗೆ ಒಲವು ತೋರಿದೆ.
ಐಪಿಎಲ್ ಮೊದಲ ಸೀಸನ್‌ನಿಂದ ಲೀಗ್‌ನಲ್ಲಿ ಮುಂದುವರಿದ ಕೆಲವೇ ಆಟಗಾರರಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರು. ಕಾರ್ತಿಕ್ ಡೆಲ್ಲಿ ಕ್ಯಾಪಿಟಲ್ಸ್ ನೊಂದಿಗೆ ಲೀಗ್‌ನಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು. ಆರ್ ಸಿ ಬಿ( RCB) ಅಲ್ಲದೆ, ಡಿ ಕೆ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಕೂಡ ಪ್ರತಿನಿಧಿಸಿದ್ದಾರೆ.
Welcome our keeper in every sense, 𝗗𝗶𝗻𝗲𝘀𝗵 𝗞𝗮𝗿𝘁𝗵𝗶𝗸, back into RCB in an all new avatar. DK will be the 𝗕𝗮𝘁𝘁𝗶𝗻𝗴 𝗖𝗼𝗮𝗰𝗵 𝗮𝗻𝗱 𝗠𝗲𝗻𝘁𝗼𝗿 of RCB Men’s team! 🤩🫡
You can take the man out of cricket but not cricket out of the man! 🙌 Shower him with all the… pic.twitter.com/Cw5IcjhI0v
— Royal Challengers Bengaluru (@RCBTweets) July 1, 2024
Our new 𝗕𝗮𝘁𝘁𝗶𝗻𝗴 𝗖𝗼𝗮𝗰𝗵 𝗮𝗻𝗱 𝗠𝗲𝗻𝘁𝗼𝗿 𝘋𝘪𝘯𝘦𝘴𝘩 𝘒𝘢𝘳𝘵𝘩𝘪𝘬 loves RCB as much as our 12th Man Army loves him! ❤️
He has a special message and an even more special promise for fans ahead of his new innings with us! 🎥#PlayBold #ನಮ್ಮRCB pic.twitter.com/1E27Qwbatt
— Royal Challengers Bengaluru (@RCBTweets) July 1, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.