J&K Encounter:ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಶ್ರೀನಗರ ಪೊಲೀಸರು

J&K Encounter: ಇತ್ತೀಚೆಗೆ ಹಾಸನ್‌ಪೋರಾ ಅನಂತನಾಗ್‌ನಲ್ಲಿ ಹೆಚ್‌ಸಿ ಅಲಿ ಮೊಹದ್ ಹತ್ಯೆಯಲ್ಲಿ ಭಾಗಿಯಾಗಿದ್ದ ಇಖ್ಲಾಕ್ ಹಜಾಮ್ ಇಂದು ಎನ್‌ಕೌಂಟರ್‌ನಲ್ಲಿ ಹತರಾದ ಭಯೋತ್ಪಾದಕರಲ್ಲಿ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ.

Edited by - Chetana Devarmani | Last Updated : Feb 5, 2022, 08:52 AM IST
  • ಶ್ರೀನಗರದ ಜಕುರಾ ಪ್ರದೇಶದಲ್ಲಿ ಎನ್‌ಕೌಂಟರ್‌
  • ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಶ್ರೀನಗರ ಪೊಲೀಸರು
  • ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ಮಾಹಿತಿ
J&K Encounter:ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಶ್ರೀನಗರ ಪೊಲೀಸರು  title=
ಎನ್‌ಕೌಂಟರ್‌

ನವದೆಹಲಿ: ಶ್ರೀನಗರದ ಜಕುರಾ ಪ್ರದೇಶದಲ್ಲಿ ಶ್ರೀನಗರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (Lashkar-e-Taiba) ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (The Resistance Front) ಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Hijab Row: ಹಿಜಾಬ್ ಪರ ಸಿದ್ದರಾಮಯ್ಯ ಬ್ಯಾಟಿಂಗ್, ಬಿಜೆಪಿ ಮತ್ತು RSS ವಿರುದ್ಧ ಆಕ್ರೋಶ

ಕಾಶ್ಮೀರ ವಲಯ ಪೊಲೀಸರ ಪ್ರಕಾರ, ಇತ್ತೀಚೆಗೆ ಹಾಸನ್‌ಪೋರಾ ಅನಂತನಾಗ್‌ನಲ್ಲಿ ಹೆಚ್‌ಸಿ ಅಲಿ ಮೊಹದ್ ಹತ್ಯೆಯಲ್ಲಿ (HC Ali Mohd) ಭಾಗಿಯಾಗಿದ್ದ ಇಖ್ಲಾಕ್ ಹಜಾಮ್ ಇಂದು ಎನ್‌ಕೌಂಟರ್‌ನಲ್ಲಿ (J&K Encounter) ಹತರಾಗಿದ್ದಾರೆ.

#SrinagarEncounterUpdate: 02 #terrorists of terror outfit LeT/TRF #neutralised by Srinagar Police. One of the killed terrorists Ikhlaq Hajam was involved in recent killing of HC Ali Mohd at Hassanpora Anantnag. Incriminating materials including 02 pistols recovered: IGP Kashmir https://t.co/9vktIRpcJM

— Kashmir Zone Police (@KashmirPolice) February 5, 2022

ಭಯೋತ್ಪಾದಕ ಸಂಘಟನೆ ಎಲ್‌ಇಟಿ/ಟಿಆರ್‌ಎಫ್‌ನ ಭಯೋತ್ಪಾದಕರನ್ನು ಶ್ರೀನಗರ ಪೊಲೀಸರು (Srinagar Police) ಹತ್ಯೆ ಮಾಡಿದ್ದಾರೆ. ಇತ್ತೀಚೆಗೆ ಹಸನ್‌ಪೋರಾ ಅನಂತನಾಗ್‌ನಲ್ಲಿ ನಡೆದ ಹೆಚ್‌ಸಿ ಅಲಿ ಮೊಹದ್ ಅವರ ಹತ್ಯೆಯಲ್ಲಿ ಇಖ್ಲಾಕ್ ಹಜಾಮ್ ಭಾಗಿಯಾಗಿದ್ದ. 2 ಪಿಸ್ತೂಲ್ ಸೇರಿದಂತೆ ದೋಷಾರೋಪಣೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಕಾಶ್ಮೀರ ಐಜಿಪಿ ಹೇಳಿದ್ದಾರೆ.

ಶ್ರೀನಗರ ನಗರದ ಜಕುರಾ ಪ್ರದೇಶದಲ್ಲಿ ಶನಿವಾರ (ಫೆಬ್ರವರಿ 5) ಮುಂಜಾನೆ ಎನ್‌ಕೌಂಟರ್ ಪ್ರಾರಂಭವಾಯಿತು. 

ಇದನ್ನೂ ಓದಿ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಗುಲಾಂ ನಬಿ ಆಜಾದ್ ಮತ್ತು ಮನೀಶ್ ತಿವಾರಿಗಿಲ್ಲ ಸ್ಥಾನ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News