/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಅಗರ್ತಲಾ: ತ್ರಿಪುರ ಮೀನುಗಾರಿಕೆ ಮತ್ತು ಸಹಕಾರ ಸಚಿವ ಮತ್ತು ಸಿಪಿಐ (ಎಂ) ಅಭ್ಯರ್ಥಿ ಖಗೇಂದ್ರ ಜಮಾತ್ಯ ಶುಕ್ರವಾರ (ಮಾರ್ಚ್ 2) ನವದೆಹಲಿಯ AIIMS(ಏಮ್ಸ್) ಆಸ್ಪತ್ರೆಯಲ್ಲಿ ಮೃತಪಟ್ಟರು. ಖಗೇಂದ್ರ ಜಮಾತ್ಯ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣಪುರ ವಿಧಾನಸಭಾ ಕ್ಷೇತ್ರದಿಂದ ಸಿಪಿಐ (ಎಂ) ಅಭ್ಯರ್ಥಿಯಾಗಿದ್ದರು. ಫೆಬ್ರವರಿ 18 ರಂದು ರಾಜ್ಯದಲ್ಲಿ ಮತದಾನ ನಡೆಯಿತು. ಅವರು 64 ವರ್ಷ ವಯಸ್ಸಿನವರಾಗಿದ್ದ ಇವರು ಮಾರ್ಚ್ 2ರಂದು ಕೊನೆಯುಸಿರೆಳೆದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ. 

ಸಿಪಿಐ (ಎಂ) ವಕ್ತಾರ ಗೌತಮ್ ದಾಸ್ ಅವರು ಫೆಬ್ರವರಿ 19 ರಂದು ದೆಹಲಿಯ ಗೋವಿಂದ ಬಲ್ಲಭ್ ಪಂತ್ ಆಸ್ಪತ್ರೆಯಲ್ಲಿ ಖಗೇಂದ್ರ ಜಮಾತ್ಯ ದಾಖಲಾಗಿದ್ದರು ಎಂದು ಹೇಳಿದರು. ಅವರ ಅನಾರೋಗ್ಯದ ಕುಸಿತಕ್ಕೆ ಮುಂಚೆಯೇ ರಾಜ್ಯದಲ್ಲಿ ಮತದಾನ ನಡೆಯಿತು. ಫೆಬ್ರವರಿ 25ರಂದು ಗೋವಿಂದ ಬಲ್ಲಭ್ ಪಂತ್ ಆಸ್ಪತ್ರೆಯಿಂದ AIIMS(ಏಮ್ಸ್) ಆಸ್ಪತ್ರೆಗೆ  ಖಗೇಂದ್ರ ಜಮಾತ್ಯ ಅವರನ್ನು ಕರೆತರಲಾಯಿತು ಎಂದು ದಾಸ್ ತಿಳಿಸಿದ್ದಾರೆ. ಜಮಾತ್ಯ ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಅವರು 1983 ರಲ್ಲಿ ಸಿಪಿಐ (ಎಂ) ಗೆ ಸೇರಿದರು. 1988 ರಿಂದ ಸತತವಾಗಿ ಆರು ಬಾರಿ ಶಾಸಕರಾಗಿದ್ದಾರೆ. 2 ಬಾರಿ ಮಂತ್ರಿಯಾಗಿ ಆಯ್ಕೆಯಾಗಿದ್ದರು. ಅವರ ಮೃತ ದೇಹವನ್ನು ನವದೆಹಲಿಯಿಂದ ತ್ರಿಪುರಕ್ಕೆ ಅಂತ್ಯಕ್ರಿಯೆಗಾಗಿ ತರಲಾಗುವುದು ಎಂದು ಅವರು ಹೇಳಿದರು.

Section: 
English Title: 
Tripura Minister Khagendra Jamatia, who was 6 times elected MLA and 2 times minister from 1988
News Source: 
Home Title: 

6 ಬಾರಿ ಶಾಸಕ ಮತ್ತು 2 ಬಾರಿ ಮಂತ್ರಿಯಾಗಿದ್ದ ತ್ರಿಪುರಾ ಸಚಿವ ಇನ್ನಿಲ್ಲ

1988 ರಿಂದ 6 ಬಾರಿ ಶಾಸಕ ಮತ್ತು 2 ಬಾರಿ ಮಂತ್ರಿಯಾಗಿ ಆಯ್ಕೆಯಾಗಿದ್ದ ತ್ರಿಪುರಾ ಸಚಿವ ಖಗೇಂದ್ರ ಜಮಾತ್ಯ ಇನ್ನಿಲ್ಲ
Yes
Is Blog?: 
No
Tags: 
Facebook Instant Article: 
Yes
Mobile Title: 
6 ಬಾರಿ ಶಾಸಕ ಮತ್ತು 2 ಬಾರಿ ಮಂತ್ರಿಯಾಗಿದ್ದ ತ್ರಿಪುರಾ ಸಚಿವ ಇನ್ನಿಲ್ಲ