ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವುದು ಜನಸಾಮಾನ್ಯರಿಗೆ ಅಸಾಧ್ಯವೇ ಸರಿ. ಹಾಗಾಗಿ ಜನಸಾಮಾನ್ಯರಿಗೂ ವಿಮಾನ ಪ್ರಯಾಣ ಅವಕಾಶ ದೊರಕಿಸಿಕೊಡುವ ನಿಟ್ಟಿನಲ್ಲಿ ರೈಲು ಪ್ರಯಾಣ ಟಿಕೆಟ್ ದರಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಏರ್ ಇಂಡಿಯಾದ ಅಂಗಸಂಸ್ಥೆ ಅಲಯನ್ಸ್ ಏರ್ ಅವಕಾಶ ನೀಡಲಿದೆ.
ಇದಕ್ಕಾಗಿಯೇ ಅಲಯನ್ಸ್ ಏರ್ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದರಡಿ ನೀವು ಕೇವಲ 990 ರೂ.ಗಳಿಗೆ ವಿಮಾನ ಪ್ರಯಾಣಕ್ಕೆ ಟಿಕೆಟ್ ಗಳನ್ನು ಕಾಯ್ದಿರಿಸಬಹುದು. ಜುಲೈ 4 ರಿಂದ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಜುಲೈ 10 ರಿಂದ ಸೆಪ್ಟೆಂಬರ್ 30ರವರೆಗಿನ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಾಲು ಅವಕಾಶವಿದೆ ಎಂದು ಅಲಯನ್ಸ್ ಏರ್ ವಕ್ತಾರರು ತಿಳಿಸಿದ್ದಾರೆ.
ಅಲೈಯನ್ಸ್ ಏರ್ ಪ್ರಸ್ತುತ 56 ಸ್ಥಳಗಳಿಗೆ ವಾಯು ಸೇವೆಗಳನ್ನು ಒದಗಿಸುತ್ತಿದ್ದು, ಎಲ್ಲಾ 56 ತಾಣಗಳಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಪ್ರಸ್ತುತ ಈ ಏರ್ ಲೈನ್ಸ್ ನಲ್ಲಿ ಪ್ರತಿನಿತ್ಯ 114 ವಿಮಾನಗಳು ಮತ್ತು ಪ್ರತಿ ವಾರ 796 ವಿಮಾನಗಳು ಹಾರಾಟ ನಡೆಸುತ್ತಿವೆ.