ಕಾಶ್ಮೀರದ ಕಣಿವೆಯಲ್ಲಿ ಟೀನಾ ದಾಬಿ ಮಾಜಿ ಪತಿಯ ರೋಮ್ಯಾಂಟಿಕ್ ಮೂಡ್!

2021ರ ಆಗಸ್ಟ್ ತಿಂಗಳಿನಲ್ಲಿ ಟೀನಾ ಡಾಬಿ ಮತ್ತು ಅಥರ್ ಖಾನ್ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು.

Written by - Puttaraj K Alur | Last Updated : Jul 29, 2022, 04:11 PM IST
  • ಕಾಶ್ಮೀರ ಕಣಿವೆಯಲ್ಲಿ ಭಾವಿ ಪತ್ನಿ ಜೊತೆಗೆ ರೋಮ್ಯಾಂಟಿಕ್ ಮೂಡ್‍ನಲ್ಲಿ ಅಥರ್ ಖಾನ್
  • ಡಾ.ಮೆಹ್ರೀನ್ ಖಾಜಿ ಶೀಘ್ರವೇ 2ನೇ ಮದುವೆಯಾಗಲಿರುವ ಟೀನಾ ದಾಬಿ ಮಾಜಿ ಪತಿ
  • ಐಎಎಸ್ ಅಧಿಕಾರಿ ಡಾ.ಪ್ರದೀಪ್ ಗಾವಂಡೆ ಜೊತೆಗೆ 2ನೇ ಮದುವೆಯಾಗಿರುವ ಟೀನಾ ದಾಬಿ
ಕಾಶ್ಮೀರದ ಕಣಿವೆಯಲ್ಲಿ ಟೀನಾ ದಾಬಿ ಮಾಜಿ ಪತಿಯ ರೋಮ್ಯಾಂಟಿಕ್ ಮೂಡ್! title=
ಟೀನಾ ದಾಬಿ ಮಾಜಿ ಪತಿಯ ರೋಮ್ಯಾಂಟಿಕ್ ಮೂಡ್!

ನವದೆಹಲಿ: ಐಎಎಸ್ ಅಧಿಕಾರಿ ಟೀನಾ ದಾಬಿ 3 ತಿಂಗಳ ಹಿಂದಷ್ಟೇ 2ನೇ ಮದುವೆಯಾದರು. 2013ರ ಬ್ಯಾಚ್‌ನ ಐಎಎಸ್‌ ಆಗಿದ್ದ ಡಾ.ಪ್ರದೀಪ್‌ ಗಾವಂಡೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಾಗಿದ್ದರು. ಅದೇ ವೇಳೆ ದಾಬಿಯವರ ಮಾಜಿ ಪತಿ ಅಥರ್ ಅಮೀರ್ ಖಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಥರ್ ಅವರು ಇದೇ ತಿಂಗಳ ಆರಂಭದಲ್ಲಿ ಡಾ.ಮೆಹ್ರೀನ್ ಖಾಜಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಥರ್ ಮತ್ತು ದಾಬಿಯವರ 2ನೇ ಮದುವೆ ವಿಚಾರ ಸಖತ್ ಸುದ್ದಿಯಾಗಿದೆ.

ಇದೀಗ ಮೆಹ್ರೀನ್ ತಮ್ಮ Instagram ಖಾತೆಯಲ್ಲಿ ಪ್ರತಿದಿನ ಅಪ್‍ಡೇಟ್ ನೀಡುತ್ತಿದ್ದಾರೆ. ಗುರುವಾರದ ಪೋಸ್ಟ್ ನಲ್ಲಿ ತಮ್ಮ ಭಾವಿ ಪತಿ ಅಥರ್ ಜೊತೆಗಿನ ಫೋಟೋಗಳನ್ನು ಅವರು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: viral video : ರಸಗುಲ್ಲಾ ತಿನ್ನಿಸುವ ಭರದಲ್ಲಿ ವರನಿಗೆ ಮುತ್ತಿಟ್ಟ ನಾದಿನಿ..! ವಧು ಕಕ್ಕಾಬಿಕ್ಕಿ ..!

ರೊಮ್ಯಾಂಟಿಕ್ ಮೂಡ್‍ನಲ್ಲಿರುವ ಜೋಡಿ

ಟೀನಾ ದಾಬಿಯವರ ಮಾಜಿ ಪತಿ ಅಥರ್ ಅಮೀರ್ ಖಾನ್ ತಮ್ಮ ಭಾವಿ ಪತ್ನಿ ಡಾ.ಮೆಹ್ರೀನ್ ಖಾಜಿಯೊಂದಿರುವ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕಾಶ್ಮೀರದ ಕಣಿವೆಗಳಲ್ಲಿ ರೊಮ್ಯಾಂಟಿಕ್ ಆಗಿ ಈ ಜೋಡಿ ಫೋಟೋಶೂಟ್‌ ಮಾಡಿಸಿದೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಇಷ್ಟಪಟ್ಟಿದ್ದಾರೆ. ಕೆಲವರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಜೋಡಿಗೆ ಹಾರೈಸಿದ್ದಾರೆ.  ಕ್ಯೂಟ್ ಕ್ಯೂಟ್ ಜೋಡಿಗೆ ಶುಭವಾಗಲಿ ಎಂದು ಅನೇಕರು ಮೆಚ್ಚಿಕೊಂಡಿದ್ದಾರೆ.

2015ರಲ್ಲಿ ಟೀನಾ ಡಾಬಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದರೆ, ಅಥರ್ ಖಾನ್ 2ನೇ ಸ್ಥಾನ ಪಡೆದುಕೊಂಡಿದ್ದರು. ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರು ಪ್ರೀತಿಸಲು ಶುರು ಮಾಡಿದ್ದರು. ಬಳಿಕ ಅವರು ಪರಸ್ಪರ ಎರಡೂ ಕಡೆಯ ಕುಟುಂಬಸ್ಥರನ್ನು ಒಪ್ಪಿಸಿ  ಮದುವೆಯಾಗಲು ನಿರ್ಧರಿಸಿದ್ದರು. 2018ರಲ್ಲಿ ನಡೆದಿದ್ದ ಈ ಜೋಡಿಯ ವಿವಾಹವು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. 

ಇದನ್ನೂ ಓದಿ: ಇಡಿ ತನಿಖೆಯ ಮಧ್ಯೆಯೇ ಅರ್ಪಿತಾ ಮುಖರ್ಜಿ ಅವರ 4 ಐಷಾರಾಮಿ ವಾಹನಗಳು ನಾಪತ್ತೆ

2021ರ ಆಗಸ್ಟ್ ತಿಂಗಳಿನಲ್ಲಿ ಟೀನಾ ಡಾಬಿ ಮತ್ತು ಅಥರ್ ಖಾನ್ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಮದುವೆಯಾದ ಕೇವಲ 2 ವರ್ಷಕ್ಕೇ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿತ್ತು. ಜೈಪುರದ ಕೌಟುಂಬಿಕ ನ್ಯಾಯಾಲಯವು ಐಎಎಸ್ ಅಧಿಕಾರಿಗಳ ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿತ್ತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News