ಒಡಿಶಾ: ಮನೆಗೆ ಗುದ್ದಿದ ಟ್ರಕ್, ಒಂದೇ ಕುಟುಂಬದ ಮೂವರು ಸಾವು

ಒಡಿಶಾದ ಕೋರಾಪುಟ್ ಜಿಲ್ಲೆಯ ಸುನಾಬೆಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಭೆಜಿತ್‌ಪುಟ್‌ನಲ್ಲಿ ಈ ಘಟನೆ ನಡೆದಿದೆ.

Last Updated : Jun 15, 2019, 02:54 PM IST
ಒಡಿಶಾ: ಮನೆಗೆ ಗುದ್ದಿದ ಟ್ರಕ್, ಒಂದೇ ಕುಟುಂಬದ ಮೂವರು ಸಾವು title=

ಕೋರಾಪುಟ್: ಒಡಿಶಾದ ಕೋರಾಪುಟ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಮರಳು ತುಂಬಿದ ಲಾರಿಯೊಂದು ಮನೆಗೆ ಗುದ್ದಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಸುನಾಬೆಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಭೆಜಿತ್‌ಪುಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ದಂಪತಿ ಮತ್ತು ಅವರ ಎಂಟು ವರ್ಷದ ಪುತ್ರಿ ನಿದ್ರಿಸುತ್ತಿದ್ದರು. ಟ್ರಕ್ ಗುದ್ದಿದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 

ಮರಳು ತುಂಬಿದ ಟ್ರಕ್ ಸೆಮಿಲಿಗುಡದಿಂದ ದಮನ್ ಜೋಡಿಗೆ ಚಲಿಸುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿ ಚಾಲಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Trending News