ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಅಡ್ಡಿಪಡಿಸುವವರನ್ನು ಜೈಲಿಗೆ ಹಾಕಲಾಗುವುದು-ರಾಮ್ ಮಾಧವ್

ಶಾಂತಿ ಮತ್ತು ಅಭಿವೃದ್ಧಿ ಪ್ರಕ್ರಿಯೆಗೆ ಹಾನಿ ಮಾಡಲು ಯತ್ನಿಸಿದವರನ್ನು ಜೈಲಿಗೆ ಹಾಕಲಾಗುವುದು ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಎಚ್ಚರಿಸಿದ್ದಾರೆ.

Last Updated : Oct 20, 2019, 07:12 PM IST
ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಅಡ್ಡಿಪಡಿಸುವವರನ್ನು ಜೈಲಿಗೆ ಹಾಕಲಾಗುವುದು-ರಾಮ್ ಮಾಧವ್ title=
Photo courtesy: Facebook(file photo)

ನವದೆಹಲಿ: ಶಾಂತಿ ಮತ್ತು ಅಭಿವೃದ್ಧಿ ಪ್ರಕ್ರಿಯೆಗೆ ಹಾನಿ ಮಾಡಲು ಯತ್ನಿಸಿದವರನ್ನು ಜೈಲಿಗೆ ಹಾಕಲಾಗುವುದು ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಎಚ್ಚರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಇದೇ ಮೊದಲ ಬಾರಿಗೆ ಶ್ರೀನಗರದ ಟ್ಯಾಗೋರ್ ಹಾಲ್‌ನಲ್ಲಿ ಪಕ್ಷದ ಯುವ ವಿಭಾಗದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಾಧವ್, “ಇಲ್ಲಿಯವರೆಗೆ ಕಾಶ್ಮೀರದ ಕೆಲವು ಕುಟುಂಬಗಳಿಗೆ ಅಥವಾ ಕೆಲವು ನಾಯಕರಿಗೆ ಎಲ್ಲವನ್ನೂ ಮಾಡಲಾಗುತ್ತಿತ್ತು, ಆದರೆ ಈಗ ಏನಾಗುತ್ತಿದೆ, ಈ ಲಕ್ಷಾಂತರ ಕುಟುಂಬಗಳಿಗಾಗಿ ಮತ್ತು ಸಾಮಾನ್ಯ ಕಾಶ್ಮಿರಿಗಳಿಗಾಗಿ ರಾಜ್ಯ ನಡೆಯುತ್ತಿದೆ' ಎಂದರು.

'ಜೆ & ಕೆ- ಶಾಂತಿ ಮತ್ತು ಅಭಿವೃದ್ಧಿಗೆ ಈಗ ಕೇವಲ ಎರಡು ಮಾರ್ಗಗಳಿವೆ ಅದಕ್ಕೆ ಯಾರೇ ಅಡ್ಡ ಬಂದರು ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು, ಇದಕ್ಕೆ ಭಾರತದಲ್ಲಿ ಅನೇಕ ಜೈಲುಗಳಿವೆ ' ರಾಮ್ ಮಾಧವ್ ಹೇಳಿದರು. ಇನ್ನು ಮುಂದುವರೆದು 'ಶಾಂತಿ ಮತ್ತು ಸೌಹಾರ್ದತೆಗಾಗಿ 200-300 ಜನರನ್ನು ಜೈಲುಗಳಲ್ಲಿ ಇರಿಸಬೇಕಾಗಿ ಬಂದಲ್ಲಿ ನಾವು ಅವರನ್ನು ಜೈಲಿನಲ್ಲಿ ಇರಿಸಲು ಬಯಸುತ್ತೇವೆ ಎಂದು ಅವರು ಹೇಳಿದರು.

'ನೀವು ಶಾಂತಿಗೆ ಭಂಗವಾಗದೆ ನಿಮ್ಮ ರಾಜಕೀಯವನ್ನು ಮಾಡಬಹುದು. ಜೈಲಿನೊಳಗೆ ಕುಳಿತ ಕೆಲವು ನಾಯಕರು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ, ಜನರಿಗೆ ಗನ್ ತೆಗೆದುಕೊಂಡು ತಮ್ಮನ್ನು ತ್ಯಾಗ ಮಾಡಲು ಸೂಚಿಸುತ್ತಾರೆ. ಆದರೆ ಆ ನಾಯಕರು ಮೊದಲು ಮುಂದೆ ಬಂದು ತಮ್ಮನ್ನು ತ್ಯಾಗ ಮಾಡುವಂತೆ ನಾನು ಅವರನ್ನು ಕೇಳಿಕೊಳ್ಳುತ್ತೇನೆ' ಎಂದು ರಾಮ್ ಮಾಧವ್ ತಿಳಿಸಿದರು.

ಇದೇ ವೇಳೆ ಅವರಿಗೆ ಕಾಶ್ಮೀರದಲ್ಲಿನ ಪ್ರವಾಸದ ಬಗ್ಗೆ ಕೇಳಿದಾಗ ಇದಕ್ಕೆ ಉತ್ತರಿಸಿದ ಮಾಧವ್ ' ಶಾಂತಿ ಇದ್ದಾಗ ಇಲ್ಲಿ ಪ್ರವಾಸೋದ್ಯಮ ಹೆಚ್ಚಾಗುತ್ತದೆ. ನಾನು ಇದನ್ನು ಎಲ್ಲೆಡೆ ಜನರಿಗೆ ಹೇಳುತ್ತೇನೆ, ನೀವು ರಜಾದಿನಕ್ಕೆ ಹೋಗಬೇಕಾದರೆ ಕಾಶ್ಮೀರಕ್ಕೆ ಭೇಟಿ ನೀಡಿ. ಇಡೀ ದೇಶವು ಕಾಶ್ಮೀರವನ್ನು ಸ್ವೀಕರಿಸಲು ಸಿದ್ಧವಾಗಿದೆ' ಎಂದು ತಿಳಿಸಿದರು.

ಕಾಶ್ಮೀರದಲ್ಲಿ ಹಲವು ರಾಜಕೀಯ ನಾಯಕರನ್ನು ಬಿಡುಗಡೆ ಮಾಡಿದರು ಕೂಡ ಮೂವರು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮತ್ತು ಮೆಹಬೂಬಾ ಮುಫ್ತಿ ಅವರನ್ನು ಇನ್ನೂ ಬಂಧನದಲ್ಲಿಡಲಾಗಿದೆ.

 

Trending News