ವಿದೇಶ ಪ್ರವಾಸ ರದ್ದುಗೊಳಿಸದಿರಲು ಪ್ರಧಾನಿ ಮೋದಿಗೆ ಜೈಟ್ಲಿ ಕುಟುಂಬ ಮನವಿ

ಮಾಜಿ ಹಣಕಾಸು ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಅರುಣ್ ಜೈಟ್ಲಿ ಶನಿವಾರದಂದು ಮೃತಪಟ್ಟಿರುವುದರಿಂದ ಸದ್ಯ ವಿದೇಶದಲ್ಲಿರುವ ಪ್ರಧಾನಿ ಮೋದಿಗೆ ಪ್ರವಾಸವನ್ನು ರದ್ದುಗೊಳಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Last Updated : Aug 24, 2019, 04:48 PM IST
ವಿದೇಶ ಪ್ರವಾಸ ರದ್ದುಗೊಳಿಸದಿರಲು ಪ್ರಧಾನಿ ಮೋದಿಗೆ ಜೈಟ್ಲಿ ಕುಟುಂಬ ಮನವಿ  title=

ನವದೆಹಲಿ: ಮಾಜಿ ಹಣಕಾಸು ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಅರುಣ್ ಜೈಟ್ಲಿ ಶನಿವಾರದಂದು ಮೃತಪಟ್ಟಿರುವುದರಿಂದ ಸದ್ಯ ವಿದೇಶದಲ್ಲಿರುವ ಪ್ರಧಾನಿ ಮೋದಿಗೆ ಪ್ರವಾಸವನ್ನು ರದ್ದುಗೊಳಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸದ್ಯ ಅಬುಧಾಬಿಯಲ್ಲಿರುವ ಪ್ರಧಾನಿ ಮೋದಿ ಜೈಟ್ಲಿಯವರ ಪತ್ನಿ ಸಂಗೀತಾ ಮತ್ತು ಪುತ್ರ ರೋಹನ್ ಅವರೊಂದಿಗೆ ಮಾತನಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇಬ್ಬರು ಪ್ರಧಾನಿ ಮೋದಿಯವರಿಗೆ ತಮ್ಮ ಅಧಿಕೃತ ಪ್ರವಾಸವನ್ನು ರದ್ದುಗೋಳಿಸಕೂಡದು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪ್ರಧಾನಿ ಈಗ ಫ್ರಾನ್ಸ್, ಯುಎಇ, ಬಹರೇನ್ ಪ್ರವಾಸದಲ್ಲಿದ್ದಾರೆ. ಇದಾದ ನಂತರ ಅವರು ಮಂಗಳವಾರದಂದು ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಅವರು ಜಿ-7  ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಜೈಟ್ಲಿ ನಿಧನದ ನಂತರ ಟ್ವೀಟ್ ಮಾಡಿದ ಪ್ರಧಾನಿ ಮೋದಿ ' ಅರುಣ್ ಜೇಟ್ಲಿ ಜಿ ಅವರ ನಿಧನದೊಂದಿಗೆ, ನಾನು ಮೌಲ್ಯಯುತ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ, ಅವರಲ್ಲಿ ನಾನು ದಶಕಗಳಿಂದಲೂಅವರ ಬಗ್ಗೆ  ಗೌರವವನ್ನು ಹೊಂದಿದ್ದೇನೆ. ಸಮಸ್ಯೆಗಳ ಬಗೆಗಿನ ಅವರ ಒಳನೋಟ ಮತ್ತು ವಿಷಯಗಳ ಸೂಕ್ಷ್ಮ ತಿಳುವಳಿಕೆ ಬಹಳ ಕಡಿಮೆ ಸಾಮ್ಯತ್ಯೆಯನ್ನು ಹೊಂದಿದೆ. ಅವರು ಉತ್ತಮವಾಗಿ ಬದುಕಿದರು, ನಮ್ಮೆಲ್ಲರ ನಡುವೆ ಅನಂತ್ ಸಂತಸದ ನೆನಪುಗಳನ್ನು ಬಿಟ್ಟುಹೋಗಿದ್ದಾರೆ" ಎಂದು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದರು.

Trending News