ಇಂದಿನಿಂದ ಬದಲಾಗಲಿದೆ ಚಿನ್ನ ಖರೀದಿ ಮತ್ತು ಮಾರಾಟದ ವಿಧಾನ!

ಕಾನೂನಿನ ಅನುಷ್ಠಾನದ ನಂತರ, ಆಭರಣ ವ್ಯಾಪಾರಿಗಳು ಹಾಲ್ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ.

Last Updated : Jan 15, 2020, 09:29 AM IST
ಇಂದಿನಿಂದ ಬದಲಾಗಲಿದೆ ಚಿನ್ನ ಖರೀದಿ ಮತ್ತು ಮಾರಾಟದ ವಿಧಾನ! title=

ನವದೆಹಲಿ: ಚಿನ್ನದ ಆಭರಣಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವಿಧಾನಗಳಲ್ಲಿ ಬುಧವಾರದಿಂದ ದೊಡ್ಡ ಬದಲಾವಣೆಯಾಗಿದೆ. ಈಗ ನೀವು ಮೊದಲಿನಂತೆ ಚಿನ್ನವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರವು ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸುವ ಪ್ರಕ್ರಿಯೆ ಬುಧವಾರದಿಂದ ಪ್ರಾರಂಭಿಸಿದೆ. ಈ ಕಾನೂನು ಒಂದು ವರ್ಷದ ನಂತರ 2021 ರ ಜನವರಿ 15 ರಂದು ಜಾರಿಗೆ ಬರಲಿದೆ. ಕಾನೂನಿನ ಅನುಷ್ಠಾನದ ನಂತರ, ಆಭರಣ ವ್ಯಾಪಾರಿಗಳು ಹಾಲ್ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಬಹುದು.

ಆಭರಣಗಳಲ್ಲಿನ ಚಿನ್ನದ ಗುಣಮಟ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಳೆದ ಹಲವು ವರ್ಷಗಳಿಂದ ದೂರುಗಳು ಬರುತ್ತಿವೆ. ಗ್ರಾಹಕರು ಗುಣಮಟ್ಟದ ಬಗ್ಗೆ ಮಾತನಾಡುವಾಗಲೆಲ್ಲಾ, ಅಂಗಡಿಯವರು 'ನಾವು ಇಲ್ಲಿಯೇ ಇರುತ್ತೇವೆ' ಎಂದು ಹೇಳುವ ಮೂಲಕ ಈ ಪ್ರಶ್ನೆಯನ್ನು ತಪ್ಪಿಸುತ್ತಾರೆ. ಗ್ರಾಹಕರು ಈ ಆಭರಣವನ್ನು ಮತ್ತೊಂದು ಅಂಗಡಿಗೆ ತೆಗೆದುಕೊಂಡಾಗ, ಚಿನ್ನದ ಗುಣಮಟ್ಟವು ಬಹಿರಂಗಗೊಳ್ಳುತ್ತದೆ ಎಂಬ ಬಗ್ಗೆ ಆಗಾಗ್ಗೆ ದೂರು ಬರುತ್ತಲೇ ಇರುತ್ತದೆ. ಹೀಗಾಗಿ ಇಂತಹ ಅವ್ಯವಹಾರವನ್ನು ತಪ್ಪಿಸಲು ಈಗ ಎಲ್ಲಾ ಆಭರಣಗಳ ಮೇಲೆ ಹಾಲ್ಮಾರ್ಕ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಗುಣಮಟ್ಟ ತಿಳಿದ ನಂತರ, ಗ್ರಾಹಕರಿಂದ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗುವುದಿಲ್ಲ. ಅಲ್ಲದೆ ಗ್ರಾಹಕರು ಆಭರಣಗಳ ಬಗ್ಗೆ ವಿಶ್ವಾಸ ಹೊಂದುತ್ತಾರೆ.

ಹಾಲ್ಮಾರ್ಕ್ ಇಲ್ಲದ ಚಿನ್ನ ಮಾರಾಟ ಶಿಕ್ಷಾರ್ಹ:
ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಚಿನ್ನಾಭರಣಗಳ ಹಾಲ್ಮಾರ್ಕಿಂಗ್ಗಾಗಿ ದೇಶಾದ್ಯಂತ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗುವುದು ಮತ್ತು ಆಭರಣ ವ್ಯಾಪಾರಿಗಳು ಬಿಐಎಸ್ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಹಾಲ್‌ಮಾರ್ಕ್‌ಗಳು ಇಲ್ಲದೆ ಚಿನ್ನ ಮಾರಾಟ ಮಾಡಲಾಗುವ ಆಭರಣ ಮಾರಾಟಗಾರರು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಜೊತೆಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ಸಹ ಎದುರಿಸಬೇಕಾಗುತ್ತದೆ. ಆದಾಗ್ಯೂ, ಈ ಕಾನೂನು 15 ಜನವರಿ 2021 ರಿಂದ ಅನ್ವಯಿಸುತ್ತದೆ ಎಂದು ತಿಳಿಸಿದರು.

ಬಿಐಎಸ್ ಉಪ ಕಾರ್ಯದರ್ಶಿ (ಡಿಡಿಜಿ) ಎಚ್.ಎಸ್. ಪಾಸ್ರಿಚಾ ಮಾತನಾಡಿ, 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಶುದ್ಧತೆಯ ಚಿನ್ನದ ಆಭರಣಗಳ ಮೇಲೆ ಬಿಎಸ್ಐ ಚಿನ್ನದ ಆಭರಣಗಳ ಹಾಲ್ಮಾರ್ಕಿಂಗ್ ಮಾಡಲಾಗುವುದು ಎಂದು ಹೇಳಿದರು. ಹಾಲ್ಮಾರ್ಕಿಂಗ್ನಲ್ಲಿ ಬಿಐಎಸ್ನ ಗುರುತು, 22 ಕ್ಯಾರೆಟ್ ಮತ್ತು 916 ನಂತಹ ಶುದ್ಧತೆ, ಪ್ರವೇಶ ಕೇಂದ್ರವನ್ನು ಗುರುತಿಸುವುದು, ಆಭರಣ ಉದ್ಯಮಿಗಳ ಗುರುತಿನ ಗುರುತು ಸೇರಿದಂತೆ ನಾಲ್ಕು ವಿಷಯಗಳನ್ನು ಒಳಗೊಂಡಿರುತ್ತದೆ ಎಂದವರು ತಿಳಿಸಿದರು.

14 ಜೂನ್ 2018 ರಂದು ಬಿಐಎಸ್ (ಹಾಲ್ಮಾರ್ಕಿಂಗ್) ರೆಗ್ಯುಲೇಷನ್ಸ್ 2018 ರ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂಬುದು ಗಮನಾರ್ಹ, ನಂತರ 2019 ರ ಡಿಸೆಂಬರ್ 31 ರವರೆಗೆ ದೇಶದ 234 ಜಿಲ್ಲೆಗಳಲ್ಲಿ 892 ಅಸೆಸ್ಸಿಂಗ್ ಮತ್ತು ಹಾಲ್ಮಾರ್ಕಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ಈವರೆಗೆ 28,849 ಆಭರಣ ವ್ಯಾಪಾರಿಗಳು ಬಿಎಸ್‌ಐನಲ್ಲಿ ನೋಂದಾಯಿಸಿಕೊಂಡಿದ್ದಾರೆ.

Trending News