ಗುಜರಾತ್ ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಸಿಎಂ ರುಪಾನಿಯ ಮೂರು ಸೂತ್ರಗಳು

ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು ರಾಜ್ಯದ ಮುಖ್ಯಮಂತ್ರಿದ ನಂತರವೂ ಅವರ ಸರ್ಕಾರ ನರೇಂದ್ರ ಮೋದಿಯವರ ಸಾಧನೆಗಳನ್ನು ಮುಂದುವರೆಸಿದೆ. ಗುಜರಾತ್ ನಲ್ಲಿ ಕಾಂಗ್ರೇಸ್ ರಾಜಕೀಯವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಸುವರ್ಣ ಅವಕಾಶವನ್ನು ಹೊಂದಿದ್ದಾರೆ ಎಂದು ರುಪಾನಿ ಹೇಳಿದರು.

Last Updated : Nov 28, 2017, 03:43 PM IST
ಗುಜರಾತ್ ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಸಿಎಂ ರುಪಾನಿಯ ಮೂರು ಸೂತ್ರಗಳು title=

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳ ಭರ್ಜರಿ ಜಯ ಸಾಧಿಸಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಹೇಳಿದ್ದಾರೆ. ಪಕ್ಷದ ನಾಯಕತ್ವ, ಅದರ ನೀತಿಗಳು ಮತ್ತು ಉದ್ದೇಶವು ದಾಖಲೆಯ ಅಂತರದಿಂದ ಗೆಲ್ಲುವಲ್ಲಿ ಸಹಾಯ ಮಾಡುತ್ತದೆ ಎಂದು ತಿಳಿಸಿರುವ ರುಪಾನಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಈ ಮೂರು ಸೂತ್ರಗಳು ನೆರವಾಗುವುದಾಗಿ ತಿಳಿಸಿದ್ದಾರೆ.

ಝೀ ನ್ಯೂಸ್ ಆಯೋಜನೆಯ ಗೇಮ್ ಆಫ್ ಗುಜರಾತ್ ಕಾನ್ಕ್ಲೇವ್ನಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ಸಾಧನೆ ಮತ್ತು ಅವರ ನಾಯಕತ್ವವನ್ನು ಪ್ರಶಂಸಿಸಿದ್ದಾರೆ. "ನಮ್ಮ ರೀತಿಯ ನಾಯಕರು ಮತ್ತು ಕಾಂಗ್ರೆಸ್ ಶಿಬಿರದಲ್ಲಿರುವವರ ನಡುವೆ ಯಾವುದೇ ಹೋಲಿಕೆ ಇಲ್ಲ. ನೀವು ನಿಜವಾಗಿಯೂ ಮೋದಿ ಅವರನ್ನು ಕಾಂಗ್ರೆಸ್ನಲ್ಲಿ ಯಾರೊಂದಿಗೂ ಹೋಲಿಸಬಹುದೇ?" ಎಂದು ಅವರು ಪ್ರಶ್ನಿಸಿದರು. "ನಮ್ಮ ದೃಷ್ಟಿ, ನಾಯಕತ್ವ - ನಮ್ಮ ಪ್ರಬಲ ನೀತಿಗಳು ಮತ್ತು ಸ್ವಚ್ಛ ಉದ್ದೇಶಗಳೊಂದಿಗೆ ಸೇರಿಕೊಂಡು ಬಿಜೆಪಿಯು ಹಿಂದೆಂದೂ ಕಂಡರೆಯದಂತೆ 150 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಜಯ ಸಾಧಿಸಲಿದೆ" ಎಂದು ಇದೇ ಸಂದರ್ಭದಲ್ಲಿ ತಮ್ಮ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಡಿಸೆಂಬರ್ 9 ಮತ್ತು 14ರಂದು ನಡೆಯಲಿರುವ ಗುಜರಾತ್ ಚುನಾವಣೆಯು ಒಂದು ಸುವರ್ಣಾವಕಾಶ ಎಂದು ಹೇಳಿರುವ ರುಪಾನಿ, ಈ ಚುನಾವಣೆಯ ಮೂಲಕ ಕಾಂಗ್ರೇಸ್ ಪಕ್ಷವನ್ನು ಸಂಪೂರ್ಣವಾಗಿ ರಾಜ್ಯದಿಂದ ಕಿತ್ತೋಗೆದ ರಾಜ್ಯ ನಮ್ಮದಾಗುತ್ತದೆ ಎಂದು ತಿಳಿಸಿದ್ದಾರೆ. "ಇಡೀ ದೇಶದಲ್ಲಿ ಒಟ್ಟು 18 ರಾಜ್ಯಗಳಲ್ಲಿ ಬಿಜೆಪಿ ತನ್ನ ಸರ್ಕಾರಗಳನ್ನು ರಚಿಸಿದೆ. ಇದು ನಮ್ಮ ಜನತೆಗೆ ನಮ್ಮ ಪಕ್ಷದ ಮೇಲಿನ ನಂಬಿಕೆ ತೋರಿಸುವುದರ ಜೊತೆಗೆ ಕಾಂಗ್ರೇಸ್ ಎಲ್ಲಿದೆ ಎಂಬುದನ್ನು ತೋರಿಸುತ್ತದೆ. ಕಾಂಗ್ರೇಸ್ ನ ಈ ಸ್ಥಿತಿ ನೋಡಿ ನನಗೆ ದುಃಖವಾಗುತ್ತದೆ ಎಂದು ತಿಳಿಸಿದರು".

Trending News