ಸದ್ಯದ ಕಾಲಘಟ್ಟವು ಕೆಲವರಿಂದಾಗಿ ಯುದ್ಧೋನ್ಮಾದಕ್ಕೆ ಸಾಕ್ಷಿಯಾಗುತ್ತಿದೆ -ಸಿಜೆಐ

ಪ್ರಸ್ತುತ ಕಾಲಘಟ್ಟವು ಕೆಲವು ವ್ಯಕ್ತಿ ಮತ್ತು ಗುಂಪುಗಳಿಂದಾಗಿ ಯುದ್ಧೋನ್ಮಾದಕ್ಕೆ ಸಾಕ್ಷಿಯಾಗುತ್ತಿದೆ ಎಂದು ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕಳವಳ ವ್ಯಕ್ತ ಪಡಿಸಿದರು. ಆದರೆ ಇಂತಹ ಬೆಳವಣಿಗೆಗಳು ದೇಶದ ಕಾನೂನು ಸಂಸ್ಥೆಗಳ ಶಕ್ತಿಯುತ ಸಂಪ್ರದಾಯಗಳಿಂದ ಸೋಲಿಸಲ್ಪಡುತ್ತವೆ ಎನ್ನುವ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.

Last Updated : Aug 4, 2019, 06:19 PM IST
ಸದ್ಯದ ಕಾಲಘಟ್ಟವು ಕೆಲವರಿಂದಾಗಿ ಯುದ್ಧೋನ್ಮಾದಕ್ಕೆ ಸಾಕ್ಷಿಯಾಗುತ್ತಿದೆ -ಸಿಜೆಐ title=
file photo

ನವದೆಹಲಿ: ಪ್ರಸ್ತುತ ಕಾಲಘಟ್ಟವು ಕೆಲವು ವ್ಯಕ್ತಿ ಮತ್ತು ಗುಂಪುಗಳಿಂದಾಗಿ ಯುದ್ಧೋನ್ಮಾದಕ್ಕೆ ಸಾಕ್ಷಿಯಾಗುತ್ತಿದೆ ಎಂದು ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕಳವಳ ವ್ಯಕ್ತ ಪಡಿಸಿದರು. ಆದರೆ ಇಂತಹ ಬೆಳವಣಿಗೆಗಳು ದೇಶದ ಕಾನೂನು ಸಂಸ್ಥೆಗಳ ಶಕ್ತಿಯುತ ಸಂಪ್ರದಾಯಗಳಿಂದ ಸೋಲಿಸಲ್ಪಡುತ್ತವೆ ಎನ್ನುವ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.

ಗೌಹಾಟಿ ಹೈಕೋರ್ಟ್ ಸಭಾಂಗಣದ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ' ಅಂತಹ ಘಟನೆಗಳು ಅಪವಾದಗಳಾಗಿ ಪರಿಣಮಿಸುತ್ತವೆ ಮತ್ತು ನಮ್ಮ ಸಂಸ್ಥೆಯ ಶಕ್ತಿಯುತ ಸಂಪ್ರದಾಯಗಳು ಮತ್ತು ನೀತಿಗಳು ಯಾವಾಗಲೂ ಅಂತಹ ಯುದ್ಧೋನ್ಮಾದ ಸ್ಥಿತಿಯಿಂದ ಹೊರ ಬರಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಗೊಗೊಯ್ ಹೇಳಿದರು.

ನಾಯ್ಯಾಲಯಗಳು ಸರ್ಕಾರದ ಕಚೇರಿಗಳು ಅಥವಾ ಸಂಸ್ಥೆಗಳಂತೆ ಅಲ್ಲ, ನ್ಯಾಯಾಲಯವು ನ್ಯಾಯದ ಚಕ್ರಗಳನ್ನು ಸುಗಮಗೊಳಿಸಲು ಮತ್ತು ಮುಂದೆ ಸಾಗುವಂತೆ ಮಾಡಲು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವುಗಳ ವಿಶಿಷ್ಟತೆ ಏನೆಂದರೆ ಶ್ರೇಣಿಕೃತ ಆಜ್ಞೆಗೆ ಬದ್ದವಾಗಿಲ್ಲದಿದ್ದರೂ ಕೂಡ ಇಂತಹ ಕಾರ್ಯವನ್ನು ಮಾಡುತ್ತವೆ. 'ಇಂದು, ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳು ನಮ್ಮ ಸಂಸ್ಥೆ ಉಳಿದುಕೊಂಡಿರುವುದು ಸಾರ್ವಜನಿಕ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಾಗಿ ನಾವು ಅಂಗೀಕರಿಸಿದ ಆದೇಶಗಳು ಮತ್ತು ತೀರ್ಪುಗಳ ಆಧಾರದ ಮೇಲೆ ನಿರ್ಮಿಸಲಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಸಿಜೆಐ ಹೇಳಿದರು.

 

Trending News