ವಿದ್ಯುತ್ ಬಿಲ್ ತಂದ ದುರಂತ; ವ್ಯಕ್ತಿ ಆತ್ಮಹತ್ಯೆಗೆ ಶರಣು

ಮೃತ ವ್ಯಕ್ತಿಯು ವಿದ್ಯುತ್ ಬಿಲ್ ನಿಂದಾಗಿ ಚಿಂತೆಗೀಡಾಗಿದ್ದರು. ಈ ಸಲುವಾಗಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿ(MSEDCL)ಗೆ ಹಲವು ಬಾರಿ ತೆರಳಿ ಬಿಲ್ ಪರಿಶೀಲಿಸುವಂತೆ ಮನವಿ ಮಾಡಿದ್ದರು.

Last Updated : May 11, 2018, 08:16 AM IST
ವಿದ್ಯುತ್ ಬಿಲ್ ತಂದ ದುರಂತ;  ವ್ಯಕ್ತಿ ಆತ್ಮಹತ್ಯೆಗೆ ಶರಣು title=

ಔರಂಗಾಬಾದ್: ಜಿಲ್ಲೆಯ ತರಕಾರಿ ವ್ಯಾಪಾರಿ ಓರ್ವ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ನೋಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರ್ಚ್ ತಿಂಗಳಲ್ಲಿ ಈ ವ್ಯಕ್ತಿಗೆ 8 ಲಕ್ಷ 64 ಸಾವಿರ ವಿದ್ಯುತ್ ಬಿಲ್ ಬಂದಿತ್ತು. ಜಗ್ಜಿತ್ ನಹಾಝಿ ಶೆಲೆಕ್ (36) ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬ ತಿಳಿಸಿದೆ. ನಂತರದಲ್ಲಿ ಈ ಬಿಲ್ ತಪ್ಪಾಗಿದೆ ಎಂದು ವಿದ್ಯುತ್ ವಿತರಕ ಕಂಪನಿ ತಿಳಿಸಿದೆ. 

ಮೃತ ವ್ಯಕ್ತಿಯು ವಿದ್ಯುತ್ ಬಿಲ್ ನಿಂದಾಗಿ ಚಿಂತೆಗೀಡಾಗಿದ್ದರು. ಈ ಸಲುವಾಗಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿ(MSEDCL)ಗೆ ಹಲವು ಬಾರಿ ತೆರಳಿ ಬಿಲ್ ಪರಿಶೀಲಿಸುವಂತೆ ಮನವಿ ಮಾಡಿದ್ದರು. ಈ ಘಟನೆಯು ಪುಂಡಲೀಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಭಾರತ್ ನಗರ ಪ್ರದೇಶದಲ್ಲಿ ನಡೆದಿದೆ. ನಿನ್ನೆ ಕರ್ತವ್ಯದಲ್ಲಿ ಅಲಕ್ಷ್ಯವನ್ನು ಕೈಗೊಳ್ಳುವ ಸಲುವಾಗಿ ವಿದ್ಯುತ್ ಕಂಪನಿಯಲ್ಲಿ ಅಕೌಂಟಿಂಗ್ ಸಹಾಯಕ ಸುಶೀಲ್ ಕಾಶಿನಾಥ್ ಎಂಬುವರನ್ನು ಅಮಾನತ್ತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Trending News