ಹಳ್ಳಿಯ ಮಕ್ಕಳಿಗೆ ವರದಾನವಾಯ್ತು ಈ ಎತ್ತಿನಗಾಡಿಯ ಗ್ರಂಥಾಲಯ!

ದರ್ಗನಹಳ್ಳಿ ಗ್ರಾಮದಲ್ಲಿ ಎತ್ತಿನ ಬಂಡಿಯಲ್ಲಿ ಚಲಿಸುವ ಗ್ರಂಥಾಲಯದಿಂದಾಗಿ ಹಳ್ಳಿಯ ಮಕ್ಕಳು ಈಗ ಮನೆಯಲ್ಲಿ ಕುಳಿತು ಪುಸ್ತಕಗಳನ್ನು ಉಚಿತವಾಗಿ ಓದುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ಕಾಶಿನಾಥ್ ಕೋಲಿ ಎಂಬ ಯುವಕ ಸೋಲಾಪುರದ ದರ್ಗನಹಳ್ಳಿ ಗ್ರಾಮದಲ್ಲಿ ಎತ್ತಿನ ಗಾಡಿಯಲ್ಲಿ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ.

Last Updated : Aug 23, 2019, 08:15 AM IST
ಹಳ್ಳಿಯ ಮಕ್ಕಳಿಗೆ ವರದಾನವಾಯ್ತು ಈ ಎತ್ತಿನಗಾಡಿಯ ಗ್ರಂಥಾಲಯ! title=

ಪುಣೆ: ಸೋಲಾಪುರದ ದರ್ಗನಹಳ್ಳಿ ಗ್ರಾಮದಲ್ಲಿ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ಒಬ್ಬ ವ್ಯಕ್ತಿಯು ಕಳೆದ 6 ತಿಂಗಳಿಂದ ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ದರ್ಗನಹಳ್ಳಿ ಗ್ರಾಮದಲ್ಲಿ ಎತ್ತಿನ ಬಂಡಿಯಲ್ಲಿ ಚಲಿಸುವ ಗ್ರಂಥಾಲಯ ನಡೆಸುತ್ತಿರುವ ವ್ಯಕ್ತಿ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ಕರ್ತರಾಗಿದ್ದಾರೆ. 

ಹಳ್ಳಿಯ ಮಕ್ಕಳು ಈಗ ಮನೆಯಲ್ಲಿ ಕುಳಿತು ಪುಸ್ತಕಗಳನ್ನು ಉಚಿತವಾಗಿ ಓದುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಕಾಶಿನಾಥ್ ಕೋಲಿ ಎಂಬ ಯುವಕ ಸೋಲಾಪುರದ ದರ್ಗನಹಳ್ಳಿ ಗ್ರಾಮದಲ್ಲಿ ಎತ್ತಿನ ಗಾಡಿಯಲ್ಲಿ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ. ಅವರು ಸುಮಾರು ಒಂದೂವರೆ ಸಾವಿರ ಪುಸ್ತಕಗಳನ್ನು ಹೊಂದಿದ್ದು, ಇದು ಗ್ರಾಮೀಣ ಪ್ರದೇಶದ ಮಕ್ಕಳನ್ನು ಚಲಿಸುವ ಎತ್ತಿನ ಗಾಡಿ ಗ್ರಂಥಾಲಯದ ಮೂಲಕ ತಲುಪುತ್ತದೆ.

ಕಾಶಿನಾಥ್ ಕೋಲಿ ಸೋಲಾಪುರದ ನಗರ ಗ್ರಂಥಾಲಯದಲ್ಲಿ ಆಫೀಸ್ ಹುಡುಗನಾಗಿ ಕೆಲಸ ಮಾಡುತ್ತಾರೆ. ತಮ್ಮ ರಜಾ ದಿನಗಳಲ್ಲಿ ಅವರು ಎತ್ತಿನಗಾಡಿಯಲ್ಲಿ ಪುಸ್ತಕಗಳನ್ನು ಹೊತ್ತು ದರ್ಗನಹಳ್ಳಿ ಗ್ರಾಮಕ್ಕೆ ಹೋಗುತ್ತಾರೆ. ಅವರ ಎತ್ತಿನ ಬಂಡಿಯಲ್ಲಿ ಚಲಿಸುತ್ತಿರುವ ಮೊಬೈಲ್ ಲೈಬ್ರರಿ ದರ್ಗನಹಳ್ಳಿ ಗ್ರಾಮದ ಪ್ರದೇಶಗಳನ್ನು ತಲುಪುತ್ತದೆ. ಕಾಶಿನಾಥ್ ಅವರ ಎತ್ತಿನ ಬಂಡಿಯ ಮೊಬೈಲ್ ಗ್ರಂಥಾಲಯವು ಈಗ ದರ್ಗನಹಳ್ಳಿ ಗ್ರಾಮದ ಗುರುತಾಗಿದೆ.

ಮೊಬೈಲ್, ಟಿವಿಯಲ್ಲಿ ಮಕ್ಕಳು ಹೆಚ್ಚು ಗಮನ ಹರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಪುಸ್ತಕಗಳನ್ನು ಓದುವ ಮಕ್ಕಳ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬುಲಕ್ ಕಾರ್ಟ್(ಎತ್ತಿನ ಗಾಡಿ) ಲೈಬ್ರರಿಯನ್ನು ನಡೆಸುತ್ತಿರುವ ಕಾಶಿನಾಥ್ ಕೋಲಿ, ಮೊಬೈಲ್ ವ್ಯಾನ್ ಲೈಬ್ರರಿಯ ಬದಲು ನಾನು ಬುಲಕ್ ಕಾರ್ಟ್ ಲೈಬ್ರರಿಯನ್ನು ಆರಿಸಿದ್ದೇನೆ ಎಂದು ಹೇಳುತ್ತಾರೆ. ಗ್ರಾಮೀಣ ಪ್ರದೇಶವಾಗಿರುವುದರಿಂದ ಎತ್ತಿನ ಬಂಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಎತ್ತಿನ ಗಾಡಿ ಲೈಬ್ರರಿಯಿಂದ ಚಿಕ್ಕ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Trending News