ದೆಹಲಿಯಿಂದ ವಿಶಾಖಪಟ್ಟಣಂಗೆ ತೆರಳುತ್ತಿದ್ದ ಎಪಿ ಎಸಿ ಎಕ್ಸ್ಪ್ರೆಸ್ನ 4 ಕೋಚ್ ಗಳು ಬೆಂಕಿಗಾಹುತಿ

ಘಟನೆಯ ಸಮಯದಲ್ಲಿ ಆಂಧ್ರ ಎಸಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ ವೇಗ ತುಂಬಾ ಕಡಿಮೆಯಾಗಿತ್ತು, ಈ ಕಾರಣದಿಂದಾಗಿ ಬೆಂಕಿ ಹೆಚ್ಚು ಹರಡಲಿಲ್ಲ.   

Last Updated : May 21, 2018, 02:25 PM IST
ದೆಹಲಿಯಿಂದ ವಿಶಾಖಪಟ್ಟಣಂಗೆ ತೆರಳುತ್ತಿದ್ದ ಎಪಿ ಎಸಿ ಎಕ್ಸ್ಪ್ರೆಸ್ನ 4 ಕೋಚ್ ಗಳು ಬೆಂಕಿಗಾಹುತಿ title=

ಗ್ವಾಲಿಯರ್: ಹೊಸ ದೆಹಲಿಯಿಂದ ವಿಶಾಖಪಟ್ಟಣಂಗೆ ಹೋಗುವ ಎಪಿ-ಎಸಿ ಎಕ್ಸ್ಪ್ರೆಸ್ನ ನಾಲ್ಕು ಕೋಚ್ಗಳಲ್ಲಿ ಸೋಮವಾರ(ಮೇ 21) ಬೆಂಕಿ ಸಂಭವಿಸಿದೆ. ಆದರೆ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗ್ವಾಲಿಯರ್ ಬಳಿ ರೈಲಿನಲ್ಲಿ ಬೆಂಕಿ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ, ಗ್ವಾಲಿಯರ್ನ ಎಲ್ಲಾ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ನಾಲ್ಕು ಅಗ್ನಿಶಾಮಕ ವಾಹನ ಕೂಡ ತಕ್ಷಣ ಸ್ಥಳವನ್ನು ತಲುಪಿತು. ಅಲ್ಲದೆ, ಕೂಡಲೇ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಲಾಯಿತು.

ಎಪಿ ಎಸಿ ಎಕ್ಸ್ಪ್ರೆಸ್ ದೆಹಲಿಯಿಂದ ವಿಶಾಖಪಟ್ಟಣಂಗೆ ಹೋಗುತ್ತಿತ್ತು. ಗ್ವಾಲಿಯರ್ನ ಬಿರ್ಲಾ ನಗರ ಪ್ರದೇಶದ ಬಳಿ ಈ ಘಟನೆ ನಡೆಯಿತು. ಘಟನೆಯ ಸಮಯದಲ್ಲಿ ಆಂಧ್ರ ಎಸಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ ವೇಗ ಕಡಿಮೆಯಾಗಿತ್ತು, ಈ ಕಾರಣದಿಂದಾಗಿ ಬೆಂಕಿ ಹೆಚ್ಚು ಹರಡಲಿಲ್ಲ. ಮಾಹಿತಿಯ ಪ್ರಕಾರ, ಈ ಘಟನೆಯು ರೈಲು ಸಂಖ್ಯೆ 22416 ಬಿ 6 ಕೋಚ್ನಲ್ಲಿ ಬೆಳಿಗ್ಗೆ ಸುಮಾರು 11:47ರಲ್ಲಿ ಸಂಭವಿಸಿದೆ.

Trending News