ಆರ್ಥಿಕ ಸಮೀಕ್ಷೆ 2019: ಶೇ 7 ರಷ್ಟು ಜಿಡಿಪಿ ದರ ಬೆಳವಣಿಗೆ ನಿರೀಕ್ಷೆ

ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರದಂದು ಸಂಸತ್ತಿನಲ್ಲಿ ಮಂಡಿಸಿದರು.

Last Updated : Jul 4, 2019, 01:22 PM IST
ಆರ್ಥಿಕ ಸಮೀಕ್ಷೆ 2019: ಶೇ 7 ರಷ್ಟು ಜಿಡಿಪಿ ದರ ಬೆಳವಣಿಗೆ ನಿರೀಕ್ಷೆ   title=
file photo

ನವದೆಹಲಿ: ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರದಂದು ಸಂಸತ್ತಿನಲ್ಲಿ ಮಂಡಿಸಿದರು.

2020 ರ ಹಣಕಾಸಿನ ವರ್ಷದಲ್ಲಿ ಆರ್ಥಿಕ ಸಮಿಕ್ಷೆಯು ಸ್ಥಿರ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಶೇ 7 ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಿದೆ. ಇದು ಮಾರ್ಚ್ 31 ಕ್ಕೆ 6.8 ರಷ್ಟು ಬೆಳವಣಿಗೆಗಿಂತ ಅಧಿಕವೆನ್ನಲಾಗಿದೆ. 2025 ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಜಿಡಿಪಿ ಬೆಳವಣಿಗೆಯ ದರ ಶೇಕಡಾ 8 ರಷ್ಟು ಆಗಬೇಕಾಗಿದೆ.

ಸರ್ಕಾರ ಈಗ ಹಣಕಾಸಿನ ವಿಭಾಗದಲ್ಲಿ ಪ್ರಮುಖ ಸವಾಲನ್ನು ಎದುರಿಸಲಿದೆ ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣ ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ರಾಜ್ಯ ವೆಚ್ಚಗಳ ಮಧ್ಯೆ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಎನ್ನಲಾಗಿದೆ. 
 

Trending News