ಬುದ್ಧನ ಚಿಂತನೆಗಳ ಮೂಲಕ ದೇಶ ಮತ್ತು ದೇಶವಾಸಿಗಳನ್ನು ರಕ್ಷಿಸಬೇಕಾಗಿದೆ: ಮೋದಿ

ಕೊರೋನಾ ತಂದೊಡ್ಡಿರುವ ಸಮಸ್ಯೆಯಿಂದ ನೇರವಾಗಿ ಬೌದ್ಧ ಪೌರ್ಣಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದ ಸ್ಥಿತಿ ಎದುರಾಗಿದೆ. ತಂತ್ರಜ್ಞಾನದ ಮೂಲಕ ನಿಮ್ಮೆದುರು ಬಂದಿದ್ದೇನೆ ಎಂಬ ವಿಷಾಧ ವ್ಯಕ್ತಪಡಿಸಿದರು.

Last Updated : May 7, 2020, 10:10 AM IST
ಬುದ್ಧನ ಚಿಂತನೆಗಳ ಮೂಲಕ ದೇಶ ಮತ್ತು ದೇಶವಾಸಿಗಳನ್ನು ರಕ್ಷಿಸಬೇಕಾಗಿದೆ: ಮೋದಿ title=
Image courtesy: ANI

ನವದೆಹಲಿ:  ಲಾಕ್‍ಡೌನ್ ನಿಯಮಗಳು ಜಾರಿಯಲ್ಲಿದ್ದರೂ, ಹಸಿರು, ಕಿತ್ತಳೆ, ಕೆಂಪು ವಲಯಗಳನ್ನಾಗಿ ವಿಂಗಡಿಸಿ ವಿವಿಧ ರೀತಿಯ ನಿಯಮಗಳಿದ್ದರೂ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ‌. ಬದಲಿಗೆ ಏರುಮುಖವಾಗಿ ಸಾಗಿದೆ. ಈ ಬಗ್ಗೆ ಕಳವಳ‌ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಬುದ್ಧನ ಚಿಂತನೆಗಳ ಮೂಲಕ ದೇಶವನ್ನು ಮತ್ತು ದೇಶವಾಸಿಗಳನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದರು.

ಬುದ್ದ ಪೌರ್ಣಮಿ (Buddha Purnima) ಹಿನ್ನೆಲೆಯಲ್ಲಿ ದೇಶ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ದೇಶದ ಜನತೆಗೆ ಶುಭಾಶಯ ಕೋರಿ, ಸದ್ಯದ ಪರಿಸ್ಥಿತಿಯಲ್ಲಿ ಬುದ್ಧನ ಚಿಂತನೆಗಳ ಮೂಲಕವೇ ದೇಶವನ್ನು ಮತ್ತು ದೇಶವಾಸಿಗಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

ಮಾರಕ ರೋಗ  ಕರೋನಾವೈರಸ್ (Coronavirus)  ವಿರುದ್ಧ ಹೋರಾಡುತ್ತಿರುವ ನಮ್ಮ ಆರೋಗ್ಯ ಸಿಬ್ಬಂದಿಯ ಧೈರ್ಯ ಮತ್ತು ಸೇವಾಭಾವನೆ ಮೆಚ್ಚುಗೆ ಪಾತ್ರವಾಗುವಂಥದ್ದು. ಇದಕ್ಕೆ ಪೂರಕವಾಗಿ ಜನತೆ ಸ್ವಯಂ ಜಾಗೃತಿಯಿಂದ ಮುನ್ನಡೆಯಬೇಕು. ಲಾಕ್ಡೌನ್ ನಿಂದ ಅಸಹಾಯಕರಾಗಿರುವವರ ಬೆರವಿಗೆ ನಿಲ್ಲಬೇಕು ಎಂದು ಕರೆ ನೀಡಿದರು.

ಕೊರೋನಾ ತಂದೊಡ್ಡಿರುವ ಸಮಸ್ಯೆಯಿಂದ ನೇರವಾಗಿ ಬೌದ್ಧ ಪೌರ್ಣಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದ ಸ್ಥಿತಿ ಎದುರಾಗಿದೆ. ತಂತ್ರಜ್ಞಾನದ ಮೂಲಕ ನಿಮ್ಮೆದುರು ಬಂದಿದ್ದೇನೆ ಎಂಬ ವಿಷಾಧ ವ್ಯಕ್ತಪಡಿಸಿದರು.

ಬುದ್ಧ ಕೇವಲ ಹೆಸರಲ್ಲ. ಪಾವಿತ್ರ್ಯತೆಯ ಪ್ರತಿರೂಪ. ಬದಲಾವಣೆಗೆ ತನ್ನನ್ನೇ ಸಮರ್ಪಿಸಿಕೊಂಡವರು. ಬುದ್ದ ಸಾಮಾಜಿಕ ಪರಿವರ್ತನೆಯ ಹರಿಕಾರ. ಸಂಕಟ, ಸಂಕಷ್ಟದ ಪರಿಸ್ಥಿತಿಯಲ್ಲಿ ಬುದ್ದನ ನೆನೆಪಿಸಿಕೊಂಡರೆ ಎಂತಹದ್ದೇ ಕಠಿಣ ಪರಿಸ್ಥಿತಿಯಿಂದ ಹೊರಬರಬಹುದು. ಈ ಕೊರೊನಾ ಕಷ್ಟದ ಸಂದರ್ಭದಲ್ಲೂ ಬುದ್ದನ ನೆನೆದು ಒಗ್ಗಟ್ಟಿನ ಹೋರಾಟ ಮುಂದುವರಿಸೋಣ ಎಂದರು.

ಕೊರೋನಾ ಕಷ್ಟದಲ್ಲಿ ಇಡೀ ವಿಶ್ವಕ್ಕೆ ಭಾರತ ಸಹಾಯಹಸ್ತ ಚಾಚಿದೆ. ಇದೇ ರೀತಿಯ ನಿರಂತರ ಸೇವಾ ಮನೋಭಾವ ಸದಾ ನಮ್ಮೆಲ್ಲರಲ್ಲಿರಲಿ. ಭಾರತದ ಸಂಸ್ಕ್ರತಿ ಜಗತ್ತಿಗೆ ಮಾದರಿಯಾಗಿದೆ. ಭಾರತ ನಿಸ್ವಾರ್ಥ ಮನೋಭಾವನೆಯಿಂದ ಕೊರೊನಾ ವಿರುದ್ಧ ಶ್ರಮಿಸುತ್ತಿದೆ ಎಂದು ಮೋದಿ ಹೇಳಿದರು.

ನೀವು ಸುರಕ್ಷಿತವಾಗಿರಿ. ನೆರೆಹೊರೆಯವರನ್ನೂ ಸುರಕ್ಷಿತವಾಗಿ ಇರಿಸಿ. ಸಮಯದ ಜತೆ ನಾವೂ ಬದಲಾಗೋಣ. ಎಲ್ಲರಿಗೂ ಧನ್ಯವಾದ ಎಂದು ಮೋದಿ ಮಾತಿಗೆ ತೆರೆ ಎಳೆದರು.
 

Trending News