ನಮ್ಮ ನಿಲುವು ಸ್ಪಷ್ಟ ಲೋಕ ಜನ ಶಕ್ತಿ ಪಕ್ಷ ಎನ್ಡಿಎ ಮೈತ್ರಿಕೂಟದ ಭಾಗವಲ್ಲ-ಭೂಪೇಂದರ್ ಯಾದವ್

ಅಕ್ಟೋಬರ್ 28 ರಂದು ಬಿಹಾರ ವಿಧಾನಸಭೆಯ 71 ಸ್ಥಾನಗಳಿಗೆ ಮೊದಲ ಹಂತದ ಮತದಾನಕ್ಕೆ ಕೇವಲ 10 ದಿನಗಳು ಬಾಕಿ ಇರುವಾಗ, ಎಲ್ಜೆಪಿ ತಮ್ಮ ಮೈತ್ರಿಕೂಟದ ಭಾಗವಲ್ಲ ಎಂದು ಮತದಾರರಲ್ಲಿ ಅನುಮಾನಗಳನ್ನು ಹೋಗಲಾಡಿಸಲು ಬಿಜೆಪಿ ಮತ್ತೊಮ್ಮೆ ಸ್ಪಷ್ಟೀಕರಣವನ್ನು ನೀಡಿದೆ.

Last Updated : Oct 17, 2020, 08:12 PM IST
ನಮ್ಮ ನಿಲುವು ಸ್ಪಷ್ಟ ಲೋಕ ಜನ ಶಕ್ತಿ ಪಕ್ಷ  ಎನ್ಡಿಎ ಮೈತ್ರಿಕೂಟದ ಭಾಗವಲ್ಲ-ಭೂಪೇಂದರ್ ಯಾದವ್ title=
Photo Courtesy: ANI

ನವದೆಹಲಿ: ಅಕ್ಟೋಬರ್ 28 ರಂದು ಬಿಹಾರ ವಿಧಾನಸಭೆಯ 71 ಸ್ಥಾನಗಳಿಗೆ ಮೊದಲ ಹಂತದ ಮತದಾನಕ್ಕೆ ಕೇವಲ 10 ದಿನಗಳು ಬಾಕಿ ಇರುವಾಗ, ಎಲ್ಜೆಪಿ ತಮ್ಮ ಮೈತ್ರಿಕೂಟದ ಭಾಗವಲ್ಲ ಎಂದು ಮತದಾರರಲ್ಲಿ ಅನುಮಾನಗಳನ್ನು ಹೋಗಲಾಡಿಸಲು ಬಿಜೆಪಿ ಮತ್ತೊಮ್ಮೆ ಸ್ಪಷ್ಟೀಕರಣವನ್ನು ನೀಡಿದೆ.

Bihar Election: NDA ಇಬ್ಭಾಗ, ನಿತೀಶ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು LJP ನಕಾರ

'ಬಿಜೆಪಿ ತನ್ನ ನಿಲುವು ಬಹಳ ಸ್ಪಷ್ಟವಾಗಿದೆ, ಎಲ್ಜೆಪಿ ನಮ್ಮ ಮೈತ್ರಿಯ ಭಾಗವಲ್ಲ. ಚಿರಾಗ್ ಪಾಸ್ವಾನ್ ಅವರು ಯಾವುದೇ ಭ್ರಮೆಯನ್ನು ಇಟ್ಟುಕೊಳ್ಳಬಾರದು ಎಂದು ನಾವು ಹೇಳಲು ಬಯಸುತ್ತೇವೆ. ನಿತೀಶ್ ಕುಮಾರ್ ಜಿ ಮುಖ್ಯಮಂತ್ರಿಯಾಗಲಿದ್ದಾರೆ 'ಎಂದು ಬಿಹಾರ ಬಿಜೆಪಿ ಉಸ್ತುವಾರಿ ಭೂಪೇಂದರ್ ಯಾದವ್ ಶನಿವಾರ ಹೇಳಿದ್ದಾರೆ.

ಚಿರಾಗ್ ಪಾಸ್ವಾನ್ ಬಿಜೆಪಿ ನಾಯಕರ ಹೆಸರನ್ನು ತೆಗೆದುಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ -ಪ್ರಕಾಶ್ ಜಾವಡೇಕರ್

ಪ್ರಧಾನಿ ನರೇಂದ್ರ ಮೋದಿಯವರ ಹನುಮಾನ್ ಎಂದು ಚಿರಾಗ್ ಪಾಸ್ವಾನ್ ಹೇಳಿದ ಬೆನ್ನಲ್ಲೇ ಈಗ ಬಿಜೆಪಿ ಮತ್ತೊಮ್ಮೆ ಸ್ಪಷ್ಟಕರಣ ನೀಡಿದೆ. ಬಿಜೆಪಿಯ ಹಿರಿಯ ನಾಯಕನೊಂದಿಗಿನ ಅವರ ಸಂಬಂಧವು ಇತರ ನಾಯಕರ ಹೇಳಿಕೆಗಳಿಂದ ಪ್ರಭಾವಿತವಾಗುವುದಿಲ್ಲ ಎಂದು  ಯಾದವ್ ಹೇಳಿದ್ದಾರೆ.

'ಎಲ್ಜೆಪಿ ಆರ್ಎಲ್ಎಸ್ಪಿ ಮತ್ತು ಪಪ್ಪು ಯಾದವ್ ನ ಜೆಎಪಿ ಯಂತಿದೆ, ಇದು ಬಿಹಾರ ಚುನಾವಣೆಯಲ್ಲಿ ತನ್ನ ಉಳಿವಿಗಾಗಿ ಹೋರಾಡುತ್ತಿದೆ" ಎಂದು ಯಾದವ್ ಹೇಳಿದರು. ಎಲ್ಜೆಪಿ ಸ್ವತಂತ್ರವಾಗಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಈ ಹಿಂದೆ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲವಿಲ್ಲದೆ ಸ್ಪರ್ಧಿಸಿ ಕಳಪೆ ಪ್ರದರ್ಶನ ನೀಡಿತ್ತು.

Trending News