ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ(RSS)ದ ನಾಯಕ ಚಂದ್ರಕಾಂತ್ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಈ ಭಯೋತ್ಪಾದಕ ದಾಳಿಯಲ್ಲಿ, ಚಂದ್ರಕಾಂತ್ ಅವರ ಪಿಎಸ್ಒ ಸಾವನ್ನಪ್ಪಿದ್ದಾರೆ. ದಾಳಿ ಬಳಿಕ ಇಡೀ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಈ ಸಮಯದಲ್ಲಿ ಚಂದ್ರಕಾಂತ್ ಕಿಶ್ತ್ವಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದ್ದು, ಭಯೋತ್ಪಾದಕರು ಚಂದ್ರಕಾಂತ್ ಮೇಲೆ ಗುಂಡು ಹಾರಿಸಲು ಯತ್ನಿಸಿದರು. ಪ್ರತಿಯಾಗಿ ಚಂದ್ರಕಾಂತ್ ಅವರ ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು. ಈ ಸಂದರ್ಭದಲ್ಲಿ, ಚಂದ್ರಕಾಂತ್ ಅವರ ಪಿಎಸ್ಒಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಗುಂಡಿನ ಶಬ್ದ ಕೇಳುತ್ತಿದ್ದಂತೆ ಆಸ್ಪತ್ರೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ರೋಗಿಗಳು ಭಯಬೀತರಾಗಿದ್ದುದು ಕಂಡುಬಂದಿದೆ. ಇನ್ನು ಈ ವೇಳೆ ಭಯೋತ್ಪಾದಕರು ಅಲ್ಲಿಂದ ಪರಾರಿಯಾಗಿದ್ದಾರೆ ಎನುದ್ ಮೂಲಗಳು ತಿಳಿಸಿವೆ.
ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಭದ್ರತಾ ಪಡೆಗಳು ಇಡೀ ಆಸ್ಪತ್ರೆಯನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರ್ಎಸ್ಎಸ್ ನಾಯಕ ಚಂದ್ರಕಾಂತ್ ಅವರ ಪಿಎಸ್ಒಯಿಂದ ಉಗ್ರರು ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡಿರುವುದಾಗಿ ಎಂದು ಅಧಿಕಾರಿಗಳು ತನಿಖೆ ವೇಳೆ ತಿಳಿಸಿದ್ದಾರೆ. ಈ ಘಟನೆಯಲ್ಲಿ, ಚಂದ್ರಕಾಂತ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, PSO ನಿಧನರಾದರು.