Tax Free ಹೂಡಿಕೆ ಅಲ್ಲದಿದ್ದರೂ ಕೂಡ ನಿಮ್ಮ ಹಣ ದುಪ್ಪಟ್ಟು ಮಾಡಲು ಇದೊಂದು ಉತ್ತಮ ಆಯ್ಕೆ

'ಭಾರತ್ ಬಾಂಡ್ ETF' ಒಂದು ತೆರಿಗೆ ಮುಕ್ತ ಬಾಂಡ್ ಅಲ್ಲ. ಆದರೂ ಕೂಡ ಇದರ ಪೋಸ್ಟ್ ಟ್ಯಾಕ್ಸ್ ರಿಟರ್ನ್, ಟ್ಯಾಕ್ಸ್ ಫ್ರೀ ಬಾಂಡ್ ಗಿಂತಲೂ ಕೂಡ ಉತ್ತಮವಾಗಿದೆ.

Last Updated : Aug 3, 2020, 11:38 PM IST
Tax Free ಹೂಡಿಕೆ ಅಲ್ಲದಿದ್ದರೂ ಕೂಡ ನಿಮ್ಮ ಹಣ ದುಪ್ಪಟ್ಟು ಮಾಡಲು ಇದೊಂದು ಉತ್ತಮ ಆಯ್ಕೆ title=

ನವದೆಹಲಿ: ಭಾರತ್ ಬಾಂಡ್ ETFನ ಎರಡನೇ ಕಂತು ಜುಲೈ 14ರಂದು ಸಬ್ಸ್ಕ್ರಿಪ್ಶನ್ ಗಾಗಿ ಓಪನ್ ಆಗಿದೆ. ಹೂಡಿಕೆದಾರರಿಗೆ ಇದರಲ್ಲಿ ಹಣ ಹೂಡಿಕೆ ಮಾಡಲು ಇನ್ನೂ ಎರಡು ದಿನಗಳ ಕಾಲಾವಕಾಶ ಇದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇಕ್ವಿಟಿಗಳ ಬದಲಾಗಿ ಬಾಂಡ್ ಗಳಲ್ಲಿ ಹೂಡಿಕೆ ಮಾಡುವಲ್ಲಿ ಹೂಡಿಕೆದಾರರ ಪ್ರವೃತ್ತಿ ಬದಲಾಗುತ್ತಿದೆ. ಅಂದರೆ ಪ್ರಸ್ತುತ ಸಮಯದಲ್ಲಿ ಹೂಡಿಕೆಗಾಗಿ ಇದೊಂದು ಉತ್ತಮ ಆಯ್ಕೆಯಾಗಿದೆ. ಈ ಬಾಂಡ್ ತೆರಿಗೆ ಮುಕ್ತ ಬಾಂಡ್ ಅಲ್ಲದಿದ್ದರೂ ಕೂಡ ಈ ಬಾಂಡ್ ನ ಪೋಸ್ಟ್ ಟ್ಯಾಕ್ಸ್ ರಿಟರ್ನ್ ನಲ್ಲಿ ತೆರಿಗೆ ಮುಕ್ತ ಬಾಂಡ್ ಗಳಿಗಿಂತ ಉತ್ತಮ ರಿಟರ್ನ್ ನೀಡುತ್ತದೆ. ಅಂದರೆ, 5 ವರ್ಷ ಮತ್ತು 11 ವರ್ಷಗಳ ಮುಕ್ತಾಯದಲ್ಲಿ ತೆರಿಗೆ ಮುಕ್ತ ಬಾಂಡ್ ಗಿಂತ ಇದು 100 ರಿಂದ 150 ಬೇಸಿಸ್ ಪಾಯಿಂಟ್ ಹೆಚ್ಚು ರಿಟರ್ನ್ ನೀಡುತ್ತದೆ. ಅಷ್ಟೇ ಅಲ್ಲ ಸಣ್ಣ ಉಳಿತಾಯ ಯೋಜನೆಗಲಾಗಿರುವ ಎಫ್.ಡಿ ಅಥವಾ ಆರ್.ಡಿಗಳಿಗಿಂತಲೂ ಕೂಡ ಹೆಚ್ಚಿನ ಲಾಭ ಈ ಬಾಂಡ್ ನಿಮಗೆ ನೀಡುತ್ತದೆ.

ಭಾರತ್ ಬಾಂಡ್ ETF: 5 ವರ್ಷಗಳ ರಿಟರ್ನ್ ಕ್ಯಾಲ್ಕುಲೇಟರ್
ಒಟ್ಟು ಹೂಡಿಕೆ: 1 ಕೋಟಿ ರೂ
ಮುಕ್ತಾಯಕ್ಕೆ ಇಳುವರಿ: 5.49%
ಸೂಚ್ಯಂಕ ದರ: 4%
ಟೆನರ್: 4.74 ವರ್ಷಗಳು
ಮುಕ್ತಾಯದ ಮೌಲ್ಯ: 1,28,86,237 ರೂ
ಸೂಚ್ಯಂಕ ವೆಚ್ಚ: 1,21,66,529 ರೂ
ತೆರಿಗೆಯ ಮೊತ್ತ: 7,19,708 ರೂ
ತೆರಿಗೆ (20% + 4% ಸೆಸ್): 1,49,699 ರೂ
ತೆರಿಗೆ ನಂತರದ ಮೌಲ್ಯ: 1,27,36,537
ತೆರಿಗೆ ನಂತರದ ರಿಟರ್ನ್: 5.23%

ಭಾರತ್ ಬಾಂಡ್ ETF: 5 ವರ್ಷಗಳ ರಿಟರ್ನ್ ಕ್ಯಾಲ್ಕುಲೇಟರ್
ಒಟ್ಟು ಹೂಡಿಕೆ: 1 ಕೋಟಿ
ಮುಕ್ತಾಯಕ್ಕೆ ಇಳುವರಿ: 6.65%
ಸೂಚ್ಯಂಕ ದರ: 4%
ಟೆನರ್: 1.76 ವರ್ಷಗಳು
ಮುಕ್ತಾಯದ ಮೌಲ್ಯ: 1,99,96,930 ರೂ
ಸೂಚ್ಯಂಕ ವೆಚ್ಚ: 1,53,94,541 ರೂ
ತೆರಿಗೆ ವಿಧಿಸಬಹುದಾದ ಮೊತ್ತ: 46,02,389 ರೂ
ತೆರಿಗೆ (20% + 4% ಸೆಸ್): 9,57,297 ರೂ
ತೆರಿಗೆ ನಂತರದ ಮೌಲ್ಯ: 1,90,39,633 ರೂ
ತೆರಿಗೆ ನಂತರದ ರಿಟರ್ನ್: 6.17%

ಇದರಲ್ಲಿ ಹಣ ಹೂಡಿಕೆ ಮಾಡಬಹುದಾ?
ಎಕ್ಸ್ಚೆಂಜ್ ಟ್ರೇಡೆಡ್ ಫಂಡ್ ಕೇವಲ ಸಾರ್ವಜನಿಕ ವಲಯದ AAA ರೇಟಿಂಗ್ ಹೊಂದಿರುವ ಬಾಂಡ್ ಗಳಲ್ಲಿ ಮಾತ್ರ ನಿಮ್ಮ ಹಣವನ್ನು ಹೂಡಿಕೆ ಮಾಡುತ್ತದೆ. ಅಂದರೆ ಈ ಬಾಂಡ್ ನ ರೇಟಿಂಗ್ ಕೂಡ ಬಲವಾಗಿದೆ. ಸ್ಟೆಬಿಲಿಟಿ ಹಾಗೂ ರಿಟರ್ನ್ ಅಂದಾಜು ಇದರ ವಿಶೇಷತೆಯಾಗಿದೆ. ಸುರಕ್ಷತೆಯ ಜೊತೆಗೆ ಇದರಲ್ಲಿ ಉನ್ನತ ಮಟ್ಟದ ಪಾರದರ್ಶಕತೆ ಇದೆ. ಕಡಿಮೆ ತೆರಿಗೆ ಈ ಬಾಂಡ್ ಅನ್ನು ಇನ್ನಷ್ಟು ಆಕರ್ಷಕಗೊಳಿಸುತ್ತದೆ.

Trending News