ಬಿಹಾರದಲ್ಲಿ ಹಳಿ ತಪ್ಪಿದ ತಪತಿ-ಗಂಗಾ ಎಕ್ಸ್ ಪ್ರೆಸ್, ನಾಲ್ವರಿಗೆ ಗಾಯ

ಭಾನುವಾರದಂದು ಬಿಹಾರದ ಛಪ್ರಾದಲ್ಲಿ ತಪತಿ-ಗಂಗಾ ಎಕ್ಸ್ಪ್ರೆಸ್ ರೈಲಿನ 13 ಬೋಗಿಗಳು ಹಳಿತಪ್ಪಿದ ಬಳಿಕ ನಾಲ್ವರು ಗಾಯಗೊಂಡಿದ್ದಾರೆ. ಗೌತಮ್ ಸ್ಥಾನದಲ್ಲಿ ಬೆಳಗ್ಗೆ 9:45 ಗಂಟೆಗೆ ರೈಲ್ವೆ ಹಳಿ ತಪ್ಪಿದೆ ಎಂದು ತಿಳಿದು ಬಂದಿದೆ.

Last Updated : Mar 31, 2019, 01:23 PM IST
ಬಿಹಾರದಲ್ಲಿ ಹಳಿ ತಪ್ಪಿದ ತಪತಿ-ಗಂಗಾ ಎಕ್ಸ್ ಪ್ರೆಸ್, ನಾಲ್ವರಿಗೆ ಗಾಯ  title=

ಪಾಟ್ನಾ: ಭಾನುವಾರದಂದು ಬಿಹಾರದ ಛಪ್ರಾದಲ್ಲಿ ತಪತಿ-ಗಂಗಾ ಎಕ್ಸ್ಪ್ರೆಸ್ ರೈಲಿನ 13 ಬೋಗಿಗಳು ಹಳಿತಪ್ಪಿದ ಬಳಿಕ ನಾಲ್ವರು ಗಾಯಗೊಂಡಿದ್ದಾರೆ. ಗೌತಮ್ ಸ್ಥಾನದಲ್ಲಿ ಬೆಳಗ್ಗೆ 9:45 ಗಂಟೆಗೆ ರೈಲ್ವೆ ಹಳಿ ತಪ್ಪಿದೆ ಎಂದು ತಿಳಿದು ಬಂದಿದೆ.

ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಲಿಲ್ಲ. ರೈಲ್ವೆ ಹಳಿ ತಪ್ಪಿರುವ ಹಿಂದಿನ ಕಾರಣಗಳನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ.

ಕಳೆದ ತಿಂಗಳು ಭಾನುವಾರದಂದು ಬೆಳಿಗ್ಗೆ ಬಿಹಾರದ ಸಹಾಡೈ ಬುಝುರ್ಗ್ನಲ್ಲಿ  ಜೋಗ್ಬನಿ-ಆನಂದ್ ವಿಹಾರ್ ಟರ್ಮಿನಲ್ ಸೀಮಾಂಚಲ್ ಎಕ್ಸ್ ಪ್ರೆಸ್ ನ ಒಂಬತ್ತು ಬೋಗಿಗಳು ಹಳಿ ತಪ್ಪಿದ ಕಾರಣ ಕನಿಷ್ಠ ಆರು ಮಂದಿ ಮೃತಪಟ್ಟು ಹಲವರು  ಗಾಯಗೊಂಡಿದ್ದರು.ಈ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ 3:58 ಗಂಟೆಗೆ ಅಪಘಾತ ಸಂಭವಿಸಿತ್ತು.

Trending News