ಆಂಧ್ರಪ್ರದೇಶ ವಿಧಾನಸಭೆ ಸಭಾಪತಿಯಾಗಿ ತಮ್ಮಿನೇನಿ ಸೀತಾರಾಂ ಆಯ್ಕೆ

ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ತಮ್ಮಿನೇನಿ ಸೀತಾರಾಂ ಅವರನ್ನು ಅಭಿನಂದಿಸಿದರಲ್ಲದೆ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮನವಿ ಮಾಡಿದರು.

Last Updated : Jun 13, 2019, 06:01 PM IST
ಆಂಧ್ರಪ್ರದೇಶ ವಿಧಾನಸಭೆ ಸಭಾಪತಿಯಾಗಿ ತಮ್ಮಿನೇನಿ ಸೀತಾರಾಂ ಆಯ್ಕೆ title=

ಅಮರಾವತಿ: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಶಾಸಕ ತಮ್ಮಿನೇನಿ ಸೀತಾರಾಂ ಅವರನ್ನು ಆಂಧ್ರ ಪ್ರದೇಶ ವಿಧಾನಸಭೆಯ ಸ್ಪೀಕರ್‌ ಆಗಿ ಗುರುವಾರ ಸರ್ವಾನುಮತದಿಂದ ಚುನಾಯಿಸಲಾಗಿದೆ.

ಮಧ್ಯಂತರ ಸ್ಪೀಕರ್‌ ಎಸ್‌.ವಿ.ಸಿ.ಅಪ್ಪಲ ನಾಯ್ಡು ಅವರು ಸೀತಾರಾಂ ಅವರ ಆಯ್ಕೆಯನ್ನು ಇಂದು ಸದನದಲ್ಲಿ ಪ್ರಕಟಿಸಿದರು.

ಎಲ್ಲ ಪ್ರಕ್ರಿಯೆಗಳ ಬಳಿಕ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ತಮ್ಮಿನೇನಿ ಸೀತಾರಾಂ ಅವರನ್ನು ಅಭಿನಂದಿಸಿದರಲ್ಲದೆ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮನವಿ ಮಾಡಿದರು.

ಸೀತಾರಾಂ ಅವರು ಆರನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದು, ಪ್ರಸ್ತುತ ಶ್ರೀಕಾಕುಳಂ ಜಿಲ್ಲೆಯ ಅಮುದಲವಲಸ ಕ್ಷೇತ್ರವನ್ನು ವೈಎಸ್‌ಆರ್‌ ಅಭ್ಯರ್ಥಿಯಾಗಿ ಪ್ರತಿನಿಧಿಸುತ್ತಿದ್ದಾರೆ.

2009ರಲ್ಲಿ ಸೀತಾರಾಂ ಟಿಡಿಪಿಯಿಂದ ಹೊರಬಂದ ಬಳಿಕ ಚಿತ್ರನಟರಾದ ಚಿರಂಜೀವಿ ನೇತೃತ್ವದ ಪ್ರಜಾ ರಾಜ್ಯಂ ಪಕ್ಷಕ್ಕೆ ಸೇರಿದರು. ಆದರೆ, ಮತ್ತೆ 2012 ರಲ್ಲಿ ಟಿಡಿಪಿ ಸೇರಿದ ಅವರು 2013ರಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಸೀತಾರಾಮ ಅವರು ಇತ್ತೀಚೆನ ವಿಧಾನಸಭೆ ಚುನಾವಣೆಯಲ್ಲಿಅಮುದಲವಲಸ ಕ್ಷೇತ್ರದಿಂದ ಶಾಸಕರಾಗಿ ಗೆದ್ದಿದ್ದಾರೆ.

Trending News