Viral Video: ವಾಕಿಂಗ್ ಹೊರಟಿದ್ದ ಸಿಎಂಗೆ ನಿಮ್ಮ ಚಿರಯೌವ್ವನದ ಗುಟ್ಟೇನು ಎಂದು ಪ್ರಶ್ನಿಸಿದ ಮಹಿಳೆ..!

ನಾನು ಹೆಚ್ಚಾಗಿ ಮೊಮ್ಮಕ್ಕೊಳೊಂದಿಗೆ ಸಮಯ ಕಳೆಯುತ್ತೇನೆ. ನಿತ್ಯ ಬೆಳಗ್ಗೆ ಬೇಗ ಎದ್ದು ವಾಕಿಂಗ್ ಮತ್ತು ಯೋಗ ಮಾಡುತ್ತೇನೆ. 10 ದಿನಗಳಿಗೊಮ್ಮೆ ಸೈಕ್ಲಿಂಗ್ ಮಾಡುತ್ತೇನೆ ಅಂತಾ ಸ್ಟಾಲಿನ್ ಹೇಳಿಕೊಂಡಿದ್ದಾರೆ.

Written by - Puttaraj K Alur | Last Updated : Sep 22, 2021, 05:03 PM IST
  • ‘ನಿಮ್ಮ ಚಿರಯೌವ್ವನದ ರಹಸ್ಯ’ವೇನು ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಗೆ ಪ್ರಶ್ನಿಸಿದ ಮಹಿಳೆ
  • ಮಹಿಳೆಯ ಪ್ರಶ್ನೆಗೆ ನಾಚಿ ನೀರಾದ ಸ್ಟಾಲಿನ್ ‘ನಾನು ಡಯೆಟ್ ಕಂಟ್ರೋಲ್’ ಮಾಡುತ್ತೇನೆಂದು ಉತ್ತರಿಸಿದ್ದಾರೆ
  • 68 ವಯಸ್ಸಾದರೂ ಸ್ಟಾಲಿನ್ ಯುವಕರು ನಾಚುವಂತೆ ನಿತ್ಯವೂ ದೈಹಿಕ ಕಸರತ್ತು ಮತ್ತು ಯೋಗ ಮಾಡುತ್ತಾರಂತೆ
Viral Video: ವಾಕಿಂಗ್ ಹೊರಟಿದ್ದ ಸಿಎಂಗೆ ನಿಮ್ಮ ಚಿರಯೌವ್ವನದ ಗುಟ್ಟೇನು ಎಂದು ಪ್ರಶ್ನಿಸಿದ ಮಹಿಳೆ..! title=
ಮಹಿಳೆಯ ಪ್ರಶ್ನೆಗೆ ನಾಚಿನೀರಾದ ಎಂ.ಕೆ.ಸ್ಟಾಲಿನ್ (Photo Courtesy: Twitter/@jsamdaniel)

ಚೆನ್ನೈ: ಬೆಳ್ಳಂಬೆಳಗ್ಗೆ ವಾಕಿಂಗ್ ಹೊರಟಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(Tamil Nadu Chief Minister MK Stalin) ಅವರಿಗೆ ಮಹಿಳೆಯೊಬ್ಬರು ನಿಮ್ಮ ಚಿರಯೌವ್ವನದ ಗುಟ್ಟೇನು ಎಂದು ಪ್ರಶ್ನಿಸಿದ್ದಾರೆ. ‘ನಿಮ್ಮ ಚಿರಯೌವ್ವನದ ರಹಸ್ಯ’ವೇನು ಎಂದು ತಮಿಳುನಾಡು ಸಿಎಂಗೆ ಮಹಿಳೆ ಕೇಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಆಡಳಿತಾರೂಢ ಡಿಎಂಕೆ ಪಕ್ಷ(DMK Party) ಸಚಿವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಸ್ಟಾಲಿನ್ ಅವರು ಟ್ರ್ಯಾಕ್ ಸೂಟ್ ಧರಿಸಿರುವುದು ಕಂಡುಬಂದಿದೆ. ಅವರು ತಮ್ಮ ಬೆಳಗಿನ ವಾಯುವಿಹಾರಕ್ಕೆಂದು ಹೋಗಿದ್ದಾಗ ಮಹಿಳೆಯೊಬ್ಬರು ಮಾತನಾಡಿಸುತ್ತಿರುವುದನ್ನು ಕಾಣಬಹುದು. ಮಹಿಳೆಯ ಪ್ರಶ್ನೆಗೆ ಸ್ಟಾಲಿನ್ ನಾಚಿ ನೀರಾಗಿದ್ದಾರೆ.

‘ನೀವು ಸದಾ ಯುವಕರಂತೆ ಕಾಣುತ್ತೀರಿ.. ಇದರ ರಹಸ್ಯವೇನು’ ಎಂದು ಮಹಿಳೆ ಸ್ಟಾಲಿನ್(MK Stalin) ಗೆ ಕೇಳಿದ್ದಾರೆ. ಇದಕ್ಕೆ ನಾಚುತ್ತಲೇ ಉತ್ತರಿಸಿದ ಅವರು, ‘ನಾನು ಡಯೆಟ್ ಕಂಟ್ರೋಲ್ ಮಾಡುತ್ತೇನೆ. ಹೀಗಾಗಿ ಫಿಟ್ ಅಂಡ್ ಫೈನ್ ಆಗಿದ್ದೇನೆ’ ಅಂತಾ ಹೇಳಿದ್ದಾರೆ.    19 ಸೆಕೆಂಡುಗಳಿರುವ ಈ ವಿಡಿಯೋ ತುಣುಕನ್ನು ತಮಿಳುನಾಡು ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ.ಸುಬ್ರಮಣಿಯನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮಹಿಳೆ ಪ್ರಶ್ನೆ ಕೇಳುತ್ತಿದ್ದಂತೆ ಸ್ಥಳದಲ್ಲಿದ್ದವರೆಲ್ಲಾ ನಗೆಗಡಲಲ್ಲಿ ತೇಲಿದ್ದಾರೆ.

ಇದನ್ನೂ ಓದಿ: Ration Card : ಪಡಿತರ ಚೀಟಿದಾರರಿಗೆ ಬಿಗ್ ನ್ಯೂಸ್ : ಈಗ ತಕ್ಷಣವೇ ಆಗಲಿದೆ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸಗಳು!

ಡಿಎಂಕೆ ನಾಯಕ ಸ್ಟಾಲಿನ್(MK Stalin) ಅವರಿಗೆ ಈಗ 68 ವಯಸ್ಸಾಗಿದೆ. ಆದರೂ ಅವರು ಪ್ರತಿದಿನವೂ ವಾಕಿಂಗ್ ಹೋಗುತ್ತಾರೆ. ಯುವಕರಂತೆ ಟ್ರ್ಯಾಕ್ ಪ್ಯಾಂಟ್ ಧರಿಸಿಕೊಂಡು ವಾಕಿಂಗ್ ಮಾಡುವ ಅವರು ಯುವಕರೇ ನಾಚುವಂತೆ ದೈಹಿಕ ಕಸರತ್ತು ಕೂಡ ಮಾಡುತ್ತಾರೆ. ತಮ್ಮ ಬಿಡುವಿಲ್ಲದ ದಿನಚರಿಯ ಮಧ್ಯೆಯೂ ಅವರು ತಮ್ಮ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸುತ್ತಿದ್ದಾರೆ.  

‘ನಾನು ಹೆಚ್ಚಾಗಿ ಮೊಮ್ಮಕ್ಕೊಳೊಂದಿಗೆ ಸಮಯ ಕಳೆಯುತ್ತೇನೆ. ನಿತ್ಯ ಬೆಳಗ್ಗೆ ಬೇಗ ಎದ್ದು ವಾಕಿಂಗ್(Morning Walk) ಮತ್ತು ಯೋಗ(Yoga) ಮಾಡುತ್ತೇನೆ. 10 ದಿನಗಳಿಗೊಮ್ಮೆ ಸೈಕ್ಲಿಂಗ್ ಮಾಡುತ್ತೇನೆ. ಇದರಿಂದ ದೇಹ ಫಿಟ್ ಆಗಿ ಇದೆ. ಇವು ನನ್ನ ಪ್ರತಿದಿನದ ದೈಹಿಕ ವ್ಯಾಯಾಮಗಳು. ಹೀಗಾಗಿ ಎಷ್ಟೇ ಬ್ಯುಸಿಯಾಗಿದ್ದರೂ ನನಗೆ ಆಯಾಸವಾಗುವುದಿಲ್ಲ. ಇದೇ ನನ್ನ ಫಿಟ್ನೆಸ್ ರಹಸ್ಯ’ ಅಂತಾ ಸ್ಟಾಲಿನ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Post Office Scheme: 10 ಸಾವಿರ ಹೂಡಿಕೆ ಮಾಡಿ 16 ಲಕ್ಷ ರೂ. ಗಳಿಸಿ; ಇಲ್ಲಿದೆ ವಿವರ

ತಮಿಳುನಾಡಿ(Tamil Nadu)ನಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತಾರೂಢ ಡಿಎಂಕೆ ಪಕ್ಷವು ಸ್ಟಾಲಿನ್ ಫಿಟ್ನೆಸ್ ಉತ್ಸಾಹಿ ಎಂದು ತೋರಿಸುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದೆ. ಕಳೆದ ತಿಂಗಳು ಸ್ಟಾಲಿನ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. 37 ಸೆಕೆಂಡ್ ಗಳ ಕ್ಲಿಪ್ ನಲ್ಲಿ ಸಿಎಂ ತಮ್ಮ ಜಿಮ್ ದಿನಚರಿಯನ್ನು ಹೇಗಿರುತ್ತದೆ ಅಂತಾ ತೋರಿಸಿದ್ದರು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News