"ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ" ; ಪಕ್ಷ ತೊರೆದ ತಮಿಳುನಾಡು ಬಿಜೆಪಿ ನಾಯಕಿ

Gayathri Raguramm : ಪಕ್ಷದಿಂದ ಅಮಾನತುಗೊಳಿಸಿದ ನಲವತ್ತು ದಿನಗಳ ನಂತರ, ನಟಿ ಗಾಯತ್ರಿ ರಘುರಾಮ್ ಅವರು ಮಂಗಳವಾರ ತಮಿಳುನಾಡು ಬಿಜೆಪಿಯನ್ನು ತೊರೆದಿದ್ದಾರೆ. ಅವರ ಈ ನಿರ್ಧಾರಕ್ಕೆ ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಅಣ್ಣಾಮಲೈ ಅವರನ್ನು ದೂಷಿಸಿದ್ದಾರೆ. ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ನಟಿ ಗಾಯತ್ರಿ ರಘುರಾಮ್ ಆರೋಪಿಸಿದರು.  

Written by - Chetana Devarmani | Last Updated : Jan 3, 2023, 03:25 PM IST
  • "ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ"
  • ಪಕ್ಷ ತೊರೆದ ತಮಿಳುನಾಡು ಬಿಜೆಪಿ ನಾಯಕಿ
  • ತಮಿಳುನಾಡು ಬಿಜೆಪಿ ಮಹಿಳಾ ಘಟಕದ ನಾಯಕಿ ಗಾಯತ್ರಿ ರಘುರಾಮ್
"ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ" ; ಪಕ್ಷ ತೊರೆದ ತಮಿಳುನಾಡು ಬಿಜೆಪಿ ನಾಯಕಿ  title=
ಗಾಯತ್ರಿ ರಘುರಾಮ್ 

Gayathri Raguramm : ಪಕ್ಷದಿಂದ ಅಮಾನತುಗೊಳಿಸಿದ ನಲವತ್ತು ದಿನಗಳ ನಂತರ, ನಟಿ ಗಾಯತ್ರಿ ರಘುರಾಮ್ ಅವರು ಮಂಗಳವಾರ ತಮಿಳುನಾಡು ಬಿಜೆಪಿಯನ್ನು ತೊರೆದಿದ್ದಾರೆ. ಅವರ ಈ ನಿರ್ಧಾರಕ್ಕೆ ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಅಣ್ಣಾಮಲೈ ಅವರನ್ನು ದೂಷಿಸಿದ್ದಾರೆ. ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ನಟಿ ಗಾಯತ್ರಿ ರಘುರಾಮ್ ಆರೋಪಿಸಿದರು. ಅವರ ಬೆಂಬಲಿಗರು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುತ್ತಿದ್ದಾರೆ ಎಂದು ಹೇಳಿದರು. ನಟಿ ಹಾಗೂ ತಮಿಳುನಾಡು ಬಿಜೆಪಿ ಮಹಿಳಾ ಘಟಕದ ನಾಯಕಿಯಾಗಿದ್ದ ಗಾಯತ್ರಿ ರಘುರಾಮ್ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ : 'ನೀನು ಫೈಟರ್' ಬೇಗ ಚೇತರಿಸಿಕೋ : ಪಂತ್ ಆರೋಗ್ಯಕ್ಕೆ ಹೆಡ್ ಕೋಚ್ ಪ್ರಾರ್ಥನೆ

ಅಣ್ಣಾಮಲೈ ವಿರುದ್ಧ ಗಂಭಿರ ಆರೋಪ ಮಾಡಿರುವ ನಟಿ ಗಾಯತ್ರಿ ರಘುರಾಮ್‌, "ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಮಹಿಳೆಯರಿಗೆ ಗೌರವ, ಸಮಾನ ಅವಕಾಶಗಳು ಸಿಗುತ್ತಿಲ್ಲ. ಭಾರವಾದ ಹೃದಯದಿಂದ ಪಕ್ಷಕ್ಕೆ ರಾಜೀನಾಮೆ ಕೊಡುತ್ತಿರುವೆ. ಅಣ್ಣಾಮಲೈ ಅವರ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಇದೇ ಕಾರಣಕ್ಕೆ ನಾನು ಪಕ್ಷ ತೊರೆಯಲು ನಿರ್ಧರಿಸಿದ್ದೇನೆ" ಎಂದು ಟ್ವೀಟ್‌ ಮಾಡಿದ್ದಾರೆ. 

 

 

ಅಣ್ಣಾಮಲೈ ಅವರ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಅನಾವಶ್ಯಕವಾಗಿ ಗುರಿಯಾಗಿಸುತ್ತಾರೆ ಮತ್ತು ಹೆಚ್ಚು ಟ್ರೋಲ್ ಮಾಡುತ್ತಾರೆ ಎಂಬುದು ರಘುರಾಮ್ ಅವರ ಪ್ರಮುಖ ಆರೋಪವಾಗಿದೆ. ಪಕ್ಷದ ಶಿಸ್ತು ಉಲ್ಲಂಘನೆ, ಪಕ್ಷಕ್ಕೆ ಮುಜುಗರ ಉಂಟುಮಾಡುವುದು, ಪಕ್ಷದ ನಿಯಮಗಳನ್ನು ಮೀರುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಗಾಯತ್ರಿ ರಘುರಾಮ್‌ ಅವರನ್ನು ಅಮಾನತು ಮಾಡಿ, ಪಕ್ಷದಿಂದ 6 ತಿಂಗಳವರೆಗೆ ದೂರವಿರಿಸಲಾಗಿತ್ತು. ನಟಿ ಗಾಯತ್ರಿ ರಘುರಾಮ್‌ ಅವರು ತಮಿಳು ನಾಡು ಬಿಜೆಪಿಯ ಮಹಿಳಾ ಘಟಕದ ಅಧ್ಯಕ್ಷೆ ಆಗಿದ್ದರು. ಅಲ್ಲದೇ ಸಾಗರೋತ್ತರ ತಮಿಳು ಅಭಿವೃದ್ಧಿ ವಿಭಾಗದ ಅಧ್ಯಕ್ಷೆಯಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ. 

ಇದನ್ನೂ ಓದಿ : ರಾಜ್ಯದಲ್ಲೂ ಹೆಚ್ಚಾಯ್ತು BF.7 ಆತಂಕ : ಮುಂದಿನ 40 ದಿನ ಕಠಿಣ ಎಂದ ತಜ್ಞರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News