ಯೋಗಿ ಆದಿತ್ಯನಾಥ್ ಕ್ಯಾಬಿನೆಟ್‍ಗೆ ರಾಜೀನಾಮೆ ನೀಡಿದ ಸ್ವತಂತ್ರ ದೇವ್ ಸಿಂಗ್

ಜುಲೈನಲ್ಲಿ ಉತ್ತರ ಪ್ರದೇಶ ಬಿಜೆಪಿಯ ಘಟಕದ ಅಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ಅವರನ್ನು ನೇಮಿಸಲಾಯಿತು.  

Last Updated : Aug 19, 2019, 10:23 AM IST
ಯೋಗಿ ಆದಿತ್ಯನಾಥ್ ಕ್ಯಾಬಿನೆಟ್‍ಗೆ ರಾಜೀನಾಮೆ ನೀಡಿದ ಸ್ವತಂತ್ರ ದೇವ್ ಸಿಂಗ್  title=
File Image

ಲಕ್ನೋ: ಭಾರತೀಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಮುಖಂಡ ಸ್ವತಂತ್ರ ದೇವ್ ಸಿಂಗ್ ಅವರು ಭಾನುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ-ಆದಿತ್ಯನಾಥ್ ನೇತೃತ್ವದ ಕ್ಯಾಬಿನೆಟ್‍ಗೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಅವರ ರಾಜೀನಾಮೆಯನ್ನು ಭಾನುವಾರ ರಾತ್ರಿ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಸಿಂಗ್ ಅವರನ್ನು ಜುಲೈನಲ್ಲಿ ಉತ್ತರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಿಸಲಾಯಿತು. ಬಿಜೆಪಿಯ ‘ಒನ್ ಮ್ಯಾನ್ ಒನ್ ಪೋಸ್ಟ್’ ತತ್ವಕ್ಕೆ ಅನುಗುಣವಾಗಿ ಅವರ ರಾಜೀನಾಮೆಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸ್ವತಂತ್ರ ದೇವ್ ಸಿಂಗ್ ರಾಜೀನಾಮೆಯೊಂದಿಗೆ ಉತ್ತರ ಪ್ರದೇಶ ಕ್ಯಾಬಿನೆಟ್‌ನಲ್ಲಿ ಈಗ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ 42 ಸದಸ್ಯರಿದ್ದಾರೆ. ಸಿಂಗ್ ಯುಪಿ ಕ್ಯಾಬಿನೆಟ್ನಲ್ಲಿ ಸಾರಿಗೆ ಸಚಿವರಾಗಿದ್ದರು.

ಅವರು ಎರಡು ಬಾರಿ  ಉತ್ತರ ಪ್ರದೇಶದ ಎಂಎಲ್ ಸಿ ಆಗಿದ್ದಾರೆ. ಉತ್ತರಪ್ರದೇಶದಲ್ಲಿ ನಡೆದ 2017 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಗಳ ಉಸ್ತುವಾರಿ ವಹಿಸಿದ್ದರು.

ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು 'ಶಕ್ತಿ ಬೂತ್' ನ ಉಸ್ತುವಾರಿ ವಹಿಸಿದ್ದರು. 2019 ರ ಲೋಕಸಭಾ ಚುನಾವಣೆಗೆ ಮುನ್ನ ಸಿಂಗ್ ಅವರನ್ನು ಮಧ್ಯಪ್ರದೇಶದ ಉಸ್ತುವಾರಿಯಾಗಿ ನೇಮಿಸಲಾಯಿತು.

ಸಿಂಗ್ ನಾಯಕ ಕುರ್ಮಿ ​​ಸಮುದಾಯದಿಂದ ಬಂದಿದ್ದರಿಂದ ಅವರನ್ನು ಬಿಜೆಪಿಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ, ಕೇಸರಿ ಪಕ್ಷವು ಒಬಿಸಿ ಮತಬ್ಯಾಂಕ್ ಅನ್ನು ತನ್ನ ಪರವಾಗಿ ಕ್ರೋಡೀಕರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿತ್ತು.

ಸಿಂಗ್ ಉತ್ತರ ಪ್ರದೇಶದ ಮಿರ್ಜಾಪುರಕ್ಕೆ ಸೇರಿದವರಾಗಿದ್ದು, ರಾಜ್ಯದ ಬುಂದೇಲ್‌ಖಂಡ್ ಪ್ರದೇಶದಲ್ಲಿ ಕೆಲಸ ಮಾಡುವ ಮೂಲಕ ರಾಜಕೀಯ ನಾಯಕನಾಗಿ ಹೆಸರು ಗಳಿಸಿದ್ದಾರೆ. 2012 ರ ವಿಧಾನಸಭಾ ಚುನಾವಣೆಯಲ್ಲಿ, ಸಿಂಗ್ ಉತ್ತರ ಪ್ರದೇಶದ ಜಲಾನ್ ಜಿಲ್ಲೆಯ ಒರೈ ಅಸೆಂಬ್ಲಿ ಸ್ಥಾನದಿಂದ ಸ್ಪರ್ಧಿಸಿದ್ದರು ಆದರೆ ಅವರು ಚುನಾವಣೆಯಲ್ಲಿ ಗೆಲ್ಲಲು ವಿಫಲರಾಗಿದ್ದರು.
 

Trending News