ನವದೆಹಲಿ: ಡ್ಯಾನ್ಸ್ ಬಾರ್ ಗಳಿಗೆ ಲೈಸೆನ್ಸ್ ನಿಡುವ ವಿಚಾರವಾಗಿ ಹಲವು ಕಠಿಣ ನಿಯಮಗಳನ್ನು ಜಾರಿ ತಂದಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ.
ಈ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಡ್ಯಾನ್ಸ್ ಬಾರ್ ಗಳಿಗೆ ಕೆಲವು ನಿಯಮಗಳನ್ನು ಸಡಿಲಗೊಳಿಸಿದೆ. ಅದರಲ್ಲಿ ಪ್ರಮುಖವಾಗಿ ಐದುವರೇ ಘಂಟೆಗಳ ಕಾಲ ಡ್ಯಾನ್ಸ್ ನೃತ್ಯ ಪ್ರದರ್ಶನವನ್ನು ಬಾರ್ ಗಳು ಆಯೋಜಿಸಬಹುದು, ಟಿಪ್ಸ್ ಗಳನ್ನು ನೀಡಬಹುದು, ಆರ್ಕೆಸ್ಟ್ರಾಗಳನ್ನು ಹಮ್ಮಿಕೊಳ್ಳಬಹುದು,ಆದರೆ ಹಣವನ್ನು ನಾಣ್ಯಗಳನ್ನು ತೂರುವಂತಿಲ್ಲ ಎಂದು ಸುಪ್ರೀಂ ಹೇಳಿದೆ.
Mumbai Dance bar matter: Supreme Court allows orchestra, tips can be given but showering of cash and coins is not allowed inside bars. https://t.co/TRGjshwE5U
— ANI (@ANI) January 17, 2019
ರಾಜ್ಯ ಸರ್ಕಾರವು ಡ್ಯಾನ್ಸ್ ಬಾರ್ ಗಳ ನಿಯಂತ್ರಣಕ್ಕಾಗಿ ಕೆಲವು ನಿಯಮಗಳನ್ನು ಜಾರಿಗೆ ತರಬಹುದು ಆದರೆ ಅವುಗಳ ಮೇಲೆ ಸಂಪೂರ್ಣ ನಿಷೇಧ ಹೇರುವಂತಿಲ್ಲ ಎಂದು ಸುಪ್ರೀಂ ಹೇಳಿದೆ.ಮಹಾರಾಷ್ಟ್ರ ಸರ್ಕಾರವು 2005 ರಿಂದ ಬಾರ್ ಗಳಿಗೆ ಲೈಸನ್ಸ್ ನೀಡದಿರುವುದರ ಹಿನ್ನಲೆಯಲ್ಲಿ ಈ ಸುಪ್ರೀಂ ಹೇಳಿಕೆ ಬಂದಿದೆ.ಇದಲ್ಲದೆ ಡ್ಯಾನ್ಸ್ ಬಾರ್ ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆನ್ನುವ ಮಹಾರಾಷ್ಟ್ರ ಸರ್ಕಾರದ ನಿಯಮವನ್ನು ಸುಪ್ರೀಂ ಸಾರಾಸಗಟಾಗಿ ತಳ್ಳಿಹಾಕಿದೆ.