'ದ್ರಾವಿಡ ನಾಡು' ಗೆ ಬೆಂಬಲ ವ್ಯಕ್ತಪಡಿಸಿದ ಸ್ಟಾಲಿನ್

ತಮಿಳುನಾಡಿನ ಈರೋಡ್ ನ ಪತ್ರಿಕಾಗೋಷ್ಠಿಯಲ್ಲಿ ಡಿಎಂಕೆ ನಾಯಕ ಸ್ಟಾಲಿನ್  ಮಾತನಾಡುತ್ತಾ ದಕ್ಷಿಣ ರಾಜ್ಯಗಳ ಒಕ್ಕೂಟದ ಬಗ್ಗೆ ಪ್ರಸ್ತಾಪಿಸಿದರು. 

Last Updated : Mar 17, 2018, 05:56 PM IST
'ದ್ರಾವಿಡ ನಾಡು' ಗೆ  ಬೆಂಬಲ ವ್ಯಕ್ತಪಡಿಸಿದ ಸ್ಟಾಲಿನ್  title=

ನವದೆಹಲಿ: ತಮಿಳುನಾಡಿನ ಈರೋಡ್ ನ ಪತ್ರಿಕಾಗೋಷ್ಠಿಯಲ್ಲಿ ಡಿಎಂಕೆ ನಾಯಕ ಸ್ಟಾಲಿನ್  ಮಾತನಾಡುತ್ತಾ ದಕ್ಷಿಣ ರಾಜ್ಯಗಳ ಒಕ್ಕೂಟದ ಬಗ್ಗೆ ಪ್ರಸ್ತಾಪಿಸಿದರು. 

ದಕ್ಷಿಣದ ಕರ್ನಾಟಕ, ತಮಿಳುನಾಡು, ಕೇರಳಾ, ಆಂದ್ರಪ್ರದೇಶ, ತೆಲಂಗಾಣ ಮತ್ತು ಪಾಂಡಿಚೇರಿ ರಾಜ್ಯಗಳು ಮುಂದೆ ಬಂದು  ದ್ರಾವಿಡ ನಾಡು' ನ್ನು ಪ್ರಸ್ತಾಪಿಸಿದರೆ ಅದಕ್ಕೆ ನಮ್ಮ ಬೆಂಬಲವಿದೆ, ಮುಂದೆ ಆ ಪರಿಸ್ಥಿತಿ ಬರುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

ಇತ್ತೀಚಿಗೆ ದಕ್ಷಿಣದ ರಾಜ್ಯಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಕಡೆಗಣಿಸುತ್ತಿರುವ ಹಿನ್ನಲೆಯಲ್ಲಿ ದಕ್ಷಿಣದ ಬಹುತೇಕ ರಾಜ್ಯಗಳು ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿವೆ.

ದ್ರಾವಿಡ್ ನಾಡು ಪರಿಕಲ್ಪನೆಯು ಮೊದಲ ಬಾರಿಗೆ ಪೆರಿಯಾರ್ ದ್ರಾವಿಡರ ಅಷ್ಮಿತೆಯ ಆಧಾರದ ಮೇಲೆ ಸ್ವತಂತ್ರವಾದ ದೇಶ ಬೇಕು ಎನ್ನುವ ಬೇಡಿಕೆಯನ್ನು  40 ರ ದಶಕದಲ್ಲಿ ಇಟ್ಟಿದ್ದರು.ಇದರ ಆಧಾರದ ಮೇಲೆ ಅವರು ದ್ರಾವಿಡಾರ್ ಕಜ್ಯಗಂ ಎನ್ನುವ ಪಕ್ಷವನ್ನು ಸಹಿತ ಸ್ಥಾಪಿಸಿದ್ದರು. 
 

 

Trending News