ಶ್ರೀಲಂಕಾ ನೌಕಾಪಡೆಯಿಂದ 8 ತಮಿಳುನಾಡು ಮೀನುಗಾರರ ಬಂಧನ

ಪಾಕ್ ಜಲಸಂಧಿ ಕಚತೀವು ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ತಮಿಳುನಾಡಿನ 8 ಮೀನುಗಾರರನ್ನು ಭಾನುವಾರ ಮುಂಜಾನೆ ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಬಂಧಿಸಿದ್ದಾರೆ.

Last Updated : Nov 19, 2017, 04:21 PM IST
ಶ್ರೀಲಂಕಾ ನೌಕಾಪಡೆಯಿಂದ 8 ತಮಿಳುನಾಡು ಮೀನುಗಾರರ ಬಂಧನ title=

 ರಾಮೇಶ್ವರ : ಪಾಕ್ ಜಲಸಂಧಿ ಕಚತೀವು ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ತಮಿಳುನಾಡಿನ 8 ಮೀನುಗಾರರನ್ನು ಭಾನುವಾರ ಮುಂಜಾನೆ ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮೀನುಗಾರಿಕೆ ದ್ವೀಪದ ಪಟ್ಟಣ ಮತ್ತು ಮಂಟಪಂನ ಮೀನುಗಾರಿಕಾ ಸಹಾಯಕ ನಿರ್ದೇಶಕ ಗೋಪಿನಾಥ್ ಅವರು, ಕಚತೀವಿ ಬಳಿ ಮೀನುಗಾರಿಕೆಗೆ ಬಲೆ ಬೀಸಿದ್ದ ತಮಿಳುನಾಡಿನ 8 ಮೀನುಗಾರರನ್ನು ಲಂಕಾ ನೌಕಾಪಡೆ ಪೊಲೀಸರು ಬಂಧಿಸಿದ್ದು, ಅವರನ್ನು ದ್ವೀಪ ರಾಷ್ಟ್ರದಲ್ಲಿನ ಕಾರೈನಗರ್ಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ. 

ಇದೇ ಸಂದರ್ಭದಲ್ಲಿ ಎರಡು ದೋಣಿಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದ್ದು, ತಮಿಳುನಾಡಿನಿಂದ ಬಂದಿರುವ 50 ದೋಣಿಗಳ ಮೀನುಗಾರಿಕೆ ಬಲೆಗಳನ್ನೂ ದ್ವೀಪ ರಾಷ್ಟ್ರದ ಅಧಿಕಾರಿಗಳು ಬೀಳಿಸಿರುವುದಾಗಿ ಗೋಪಿನಾಥ್ ತಿಳಿಸಿದ್ದಾರೆ. 

ಈ ಹಿಂದೆ ನ.೧೭ರಂದು ದ್ವೀಪ ದೇಶದ ನೆಡುಂತೇವು ಬಳಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ನಾಗಾಪಟ್ಟನಂ ಜಿಲ್ಲೆಯ ತಿಡಿರ್ ಕುಪ್ಪಂ ಗ್ರಾಮದ ಹತ್ತು ಮೀನುಗಾರನ್ನು ಲಂಕಾದ ನೌಕಾಪಡೆ ಅಧಿಕಾರಿಗಳು ಬಂಧಿಸಿದ್ದರು.

ಒಟ್ಟಾರೆ ಕಳೆದ ಮೂರು ತಿಂಗಳುಗಳಲ್ಲಿ 117 ಮೀನುಗಾರರನ್ನು ಬಂಧಿಸಲಾಗಿದೆ.

Trending News