ಶ್ರೀ ಕೃಷ್ಣ ಜನ್ಮಾಷ್ಟಮಿ 2018: ಪ್ರಧಾನಿ ಸೇರಿ ಗಣ್ಯರಿಂದ ಜನತೆಗೆ ಶುಭಾಶಯ

ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.  

Last Updated : Sep 3, 2018, 08:29 AM IST
ಶ್ರೀ ಕೃಷ್ಣ ಜನ್ಮಾಷ್ಟಮಿ 2018: ಪ್ರಧಾನಿ ಸೇರಿ ಗಣ್ಯರಿಂದ ಜನತೆಗೆ ಶುಭಾಶಯ title=
ಬೆಂಗಳೂರಿನ ಇಸ್ಕಾನ್ ದೇವಾಲಯದ ಶ್ರೀಕೃಷ್ಣನ ಮೂರ್ತಿ

ನವದೆಹಲಿ: ಇಂದು ದೇಶಾದ್ಯಂತ ಶ್ರೀ ಕೃಷ್ಣಾ ಜನ್ಮಾಷ್ಟಮಿ ಸಂಭ್ರಮ. ಗೋಪಿ ಲೋಲಾ, ನಂದ ಕಿಶೋರ ಎಂದೆಲ್ಲಾ ಕರೆಯಲ್ಪಡುವ ಶ್ರೀ ಕೃಷ್ಣನ ಜನ್ಮವನು ಸಂಭ್ರಮಿಸುವ ದಿನ. ಈ ಸಂಭ್ರಮದ ದಿನದಂದು ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "श्रीकृष्ण जन्माष्टमी के पावन अवसर पर सभी को हार्दिक शुभकामनाएं। जय श्रीकृष्ण!” ಎಂದಿದ್ದಾರೆ.

ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಅವರೂ ಸಹ "ದೇಶದ ಜನತೆಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣನ ಬೋಧನೆಗಳು ಸಾರ್ವತ್ರಿಕ ಸಂದೇಶವನ್ನು ಹೊಂದಿವೆ. ಶ್ರೀಕೃಷ್ಣನ ಬೋಧನೆಗಳನ್ನು ಪದ ಮತ್ತು ಕಾರ್ಯಗಳಲ್ಲಿ ಅಳವಡಿಸಿಕೊಂಡು, ಸದ್ಗುಣ ಮತ್ತು ನೀತಿಯ ಪಥವನ್ನು ಪಾಲಿಸಲು ಈ ಹಬ್ಬವು ನಮಗೆ ಸ್ಫೂರ್ತಿ ನೀಡಲಿ" ಎಂದಿದ್ದಾರೆ. 

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೂ ಸಹ ದೇಶದ ಜನತೆಗೆ ಈ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ. 

Trending News