ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ರ್ರ್ಯಾಲಿಯೊಂದರಲ್ಲಿ ಭಾಗವಹಿಸಿ ಪ್ರತಿಪಕ್ಷಗಳ ಮೇಲೆ ಟೀಕಾ ಪ್ರಹಾರ ನಡೆಸಿದರು.ಆ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಪ್ರಚಾರದ ಪೀಠಿಕೆ ಹಾಕಿದ್ದಾರೆ.
ರ್ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಕೆಲವು ಪಕ್ಷಗಳಿಗೆ ಶಾಂತಿ ಮತ್ತು ಅಭಿವೃದ್ದಿ ಬೇಕಾಗಿಲ್ಲ ಬದಲಾಗಿ ಅವರಿಗೆ ಅರಾಜಕತೆ ಬೇಕಾಗಿದೆ ಆದ್ದರಿಂದಾಗಿ ಅವರು ಈ ಅರಾಜಕತೆಯನ್ನು ರಾಜಕೀಯವಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ಜನರು ತಮ್ಮ ಮೂಲ ತಳಹದಿಯನ್ನು ತೊರೆದು ಬಂದವರು ಇವರಿಗೆ ಈ ದೇಶದ ಸಂತ ಕಬೀರ್. ಮಹಾತ್ಮಾ ಗಾಂಧಿ. ಬಾಬಾಸಾಹೇಬ್ ಅಂಬೇಡ್ಕರ್, ಪರಂಪರೆ ಗೊತ್ತಿಲ್ಲ ಎಂದು ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.
14-15 वर्ष पहले जब पूर्व राष्ट्रपति अब्दुल कलाम जी यहां आए थे, तब उन्होंने इस जगह के लिए एक सपना देखा था।
उनके सपने को साकार करने के लिए,
मगहर को अंतरराष्ट्रीय मानचित्र में सद्भाव-समरसता के मुख्य केंद्र के तौर पर विकसित करने का काम अब किया जा रहा है: PM
— PMO India (@PMOIndia) June 28, 2018
ಇದೆ ವೇಳೆ ಭಾರತದಲ್ಲಿನ ತುರ್ತುಪರಿಸ್ಥಿತಿ ಬಗ್ಗೆ ಮಾತನಾಡುತ್ತಾ ಈ ಹಿಂದೆ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಿದವರು ಈಗ ಅಧಿಕಾರಕಾಗಿ ಒಂದಾಗಿದ್ದಾರೆ,ಅವರಿಗೆಂದು ಎಂದು ಸಮಾಜದ ಏಳಿಗೆ ಬೇಕಾಗಿಲ್ಲ ಬದಲಾಗಿ ಕೇವಲ ತಮ್ಮ ಕುಟುಂಬಗಳ ಹಿತರಕ್ಷಣೆಯೊಂದೆ ಪ್ರಮುಖವಾಗಿದೆ ಎಂದು ಅವರು ಕಿಡಿ ಕಾರಿದರು.