Railway Station: ಭಾರತೀಯ ರೈಲ್ವೇಯು ರಾಷ್ಟ್ರದಾದ್ಯಂತ ರೈಲ್ವೇ ಜಾಲದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಈ ಅಭಿವೃದ್ಧಿಯ ಭಾಗವಾಗಿ, ಅಮೃತ್ ಭಾರತ್ ಯೋಜನೆಯಡಿಯಲ್ಲಿ ಆಧುನೀಕರಣಗೊಳಿಸಲು ಭಾರತದಾದ್ಯಂತ ಅನೇಕ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ.
ಉದಯಪುರದಲ್ಲಿ ನಡೆದ ಘಟನೆ ಹೇಯ ಕೃತ್ಯ ಎಂದು ಮಾಜಿ ಸಚಿವ ಯು.ಟಿ.ಖಾದರ್ ಖಂಡಿಸಿದ್ದಾರೆ.. ಹಿಂದೂ ಟೈಲರ್ ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಯು.ಟಿ.ಖಾದರ್, ಕಾನೂನು, ಸುವ್ಯವಸ್ಥೆ ಬಗ್ಗೆ ಹೆದರಿಕೆ ಇಲ್ಲದವರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಲ್ಲದೆ, ಇವರ ಹಿಂದಿರುವ ಜಾಲ ಮತ್ತು ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕನ್ಹಯ್ಯನ ಹತ್ಯೆಗೆಂದು ಮೊಹಮ್ಮದ್ ಗೌಸ್ ಹರಿತವಾದ ಆಯುಧವನ್ನು ತಯಾರಿಸಿದ್ದಾನೆ. ಈ ಆಯುಧವನ್ನು ಎಸ್ಕೆ ಇಂಜಿನಿಯರಿಂಗ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ. ಈ ಹತ್ಯೆಯ ಉದ್ದೇಶವೆಂದರೆ, ಜನರಲ್ಲಿ ಭಯವನ್ನು ಸೃಷ್ಟಿಸುವುದಾಗಿತ್ತು.
ಅಟ್ಟಾರಿಯ ಬೈಕ್ ನಂಬರ್ ಆರ್ ಜೆ 27 ಎಎಸ್ 2611 ಆಗಿದ್ದು, ಇದು ಮುಂಬೈ ದಾಳಿಗೆ ಸಂಬಂಧಿಸಿದ್ದು, ಇದನ್ನು ಆರೋಪಿಗಳು 5000 ರೂಪಾಯಿ ಕೊಟ್ಟು ಖರೀದಿಸಿದ್ದಾರೆ ಎಂಬ ಘಾಕಾರಿ ಮಾಹಿತಿ ಹೊರಬಿದ್ದಿದೆ.
ಈ ಇಡೀ ಘಟನೆಯಲ್ಲಿ ಪಾಕಿಸ್ತಾನ ಭಾಗಿಯಾಗಿರುವುದು ಬಯಲಾಗಿದೆ. ವಾಸ್ತವವಾಗಿ, ಈ ಇಬ್ಬರೂ ಆರೋಪಿಗಳು ಪಾಕಿಸ್ತಾನಲ್ಲಿರುವ ಕೆಲವು ಜನರೊಂದಿಗೆ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲ, ಮೂಲಗಳ ಪ್ರಕಾರ ಇಬ್ಬರೂ ಆರೋಪಿಗಳು ಕನ್ಹಯ್ಯಾ ಲಾಲ್ ಹತ್ಯೆಗೆ ಐಸಿಸ್ನ ವೀಡಿಯೋಗಳನ್ನು ನೋಡಿದ್ದರು ಎಂದು ಹೇಳಲಾಗುತ್ತಿದೆ.
ರಾಜಸ್ಥಾನದಲ್ಲಿ ಹಿಂದೂ ಟೈಲರ್ ಹತ್ಯೆ ನಾಚಿಕೆಗೇಡು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.. ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ. ರಾಜಸ್ಥಾನ ಘಟನೆ ಮತ್ತು ಗಲಭೆ ಹಿಂದೆ ವಿದೇಶಿ ಕೈವಾಡವಿದೆ. ಕಾಂಗ್ರೆಸ್ ಈಗ ಮೌನವಾಗಿರೋದ್ರ ಹಿನ್ನೆಲೆ ಏನು? ಎಂದು ಕಟೀಲ್ ಪ್ರಶ್ನಿಸಿದ್ದಾರೆ.
ರಾಜಸ್ಥಾನದಲ್ಲಿ ಹಿಂದೂ ಟೈಲರ್ ಕನ್ಹಯ್ಯ ಹತ್ಯೆಯನ್ನು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಖಂಡಿಸಿದ್ದಾರೆ. ಇದು ಇಡಿ ದೇಶ ತಲೆ ತಗ್ಗಿಸುವಂತಹ ವಿಚಾರ. ಆರೋಪಿಗಳಾದ ಮೊಹಮ್ಮದ್ ರಿಯಾಜ್ ಮತ್ತು ಅನ್ಸಾರಿಯನ್ನು ಗುಂಡಿಟ್ಟು ಹತ್ಯೆ ಮಾಡಬೇಕು. ಇಂಥಹ ಕೊಲೆಗಡುಕರು ಐಸಿಸ್ ಏಜೆಂಟರು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ರಾಜ್ಯಗಳ ಚುನಾವಣೆ ಸೋಲಿನ ನಂತರ ಬಿಕ್ಕಟ್ಟು ಎದುರಿಸುತ್ತಿರುವ ಕಾಂಗ್ರೆಸ್ನ ಉನ್ನತ ನಾಯಕರು ಸೇರಿದಂತೆ 400 ಕ್ಕೂ ಹೆಚ್ಚು ಪದಾಧಿಕಾರಿಗಳು ಇಂದಿನಿಂದ (ಶುಕ್ರವಾರ) ರಾಜಸ್ಥಾನದಲ್ಲಿ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸಲು ತಂತ್ರಗಳನ್ನು ಹೆಣೆಯಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.