ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ 11 ದಿನಗಳಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತೇ?

ಡಿಸೆಂಬರ್ ಕೊನೆ ವಾರದಿಂದ ಹೊಸ ವರ್ಷದ ಮೊದಲ ದಿನದವರೆಗೆ 9.5 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಸಾಯಿಬಾಬ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. 

Last Updated : Jan 3, 2019, 03:52 PM IST
ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ 11 ದಿನಗಳಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತೇ? title=

ಶಿರಡಿ: ಇಲ್ಲಿನ ಸುಪ್ರಸಿದ್ಧ ಸಾಯಿಬಾಬ ದೇವಸ್ಥಾನದಲ್ಲಿ ಕಳೆದ ವರ್ಷ ಡಿಸೆಂಬರ್ 22 ರಿಂದ ಜನವರಿ 1, 2019ರವರೆಗೆ ಬರೋಬ್ಬರಿ 14.54 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. 

ಡಿಸೆಂಬರ್ ಕೊನೆ ವಾರದಿಂದ ಹೊಸ ವರ್ಷದ ಮೊದಲ ದಿನದವರೆಗೆ 9.5 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಸಾಯಿಬಾಬ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯ ದಿನಗಳಿಗಿಂತ ಕ್ರಿಸ್ಮಸ್ ರಜಾ ದಿನಗಳಲ್ಲಿ ಭೇಟಿ ನೀಡಿದ ಭಕ್ತರ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಆದಾಗ್ಯೂ, 2017-18ನೇ ಸಾಲಿಗೆ ಹೋಲಿಸಿದರೆ, ಈ ಬಾರಿ ಸಂಗ್ರಹವಾಗಿರುವ ದೇಣಿಗೆ ಕಡಿಮೆ ಎಂದು ತಿಳಿದುಬಂದಿದೆ.

ಸಂಗ್ರಹವಾದ 14.54 ಕೋಟಿ ರೂ.ಗಳಲ್ಲಿ 30 ಲಕ್ಷ ರೂ.ಗಳು 18 ವಿವಿಧ ವಿದೇಶಿ ಕರೆನ್ಸಿಗಳಲ್ಲಿವೆ. ದೇವಾಲಯದ ಹುಂಡಿಗಳಲ್ಲಿ 8.5 ಕೋಟಿ ರೂ. ಸಂಗ್ರಹವಾಗಿದ್ದು, ದೇಣಿಗೆಯ ಕೌಂಟರ್ಗಳಲ್ಲಿ 3 ಕೋಟಿ ರೂ., ಡಿಡಿ ಮೂಲಕ 3 ಕೋಟಿ ರೂ. ಸಂಗ್ರಹವಾಗಿದೆ. ಅಲ್ಲದೆ, ಭಕ್ತರು ಡೆಬಿಟ್ ಕಾರ್ಡುಗಳು ಮತ್ತು ಚೆಕ್ಗಳನ್ನು ಬಳಸಿಯೂ ದೇಣಿಗೆ ನೀಡಿದ್ದಾರೆ. 

ಹಣದ ಹೊರತಾಗಿ 507 ಗ್ರಾಂ ಚಿನ್ನ ಮತ್ತು 16.5 ಕಿಲೋ ಬೆಳ್ಳಿಯನ್ನೂ ಸಹ ಭಕ್ತರು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದಾರೆ ಎನ್ನಲಾಗಿದೆ. 
 

Trending News