ಕೇಂದ್ರದ ಶೇ 10 ರಷ್ಟು ಮೀಸಲಾತಿ ತಡೆಯಾಜ್ಞೆಗೆ ಸುಪ್ರೀಂ ನಕಾರ, ಮಾರ್ಚ್ 28ಕ್ಕೆ ವಿಚಾರಣೆ ಮುಂದೂಡಿಕೆ

ಕೇಂದ್ರ ಸರ್ಕಾರವು ಮೇಲ್ಜಾತಿ ಬಡವರಿಗೆ ನೀಡಿರುವ ಶೇ 10ರಷ್ಟು ಮೀಸಲಾತಿ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ನಿರಾಕರಿಸಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 28 ಕ್ಕೆ ಮುಂದೂಡಿದೆ.

Last Updated : Mar 11, 2019, 01:35 PM IST
ಕೇಂದ್ರದ ಶೇ 10 ರಷ್ಟು ಮೀಸಲಾತಿ ತಡೆಯಾಜ್ಞೆಗೆ ಸುಪ್ರೀಂ ನಕಾರ, ಮಾರ್ಚ್ 28ಕ್ಕೆ ವಿಚಾರಣೆ ಮುಂದೂಡಿಕೆ  title=

ನವದೆಹಲಿ: ಕೇಂದ್ರ ಸರ್ಕಾರವು ಮೇಲ್ಜಾತಿ ಬಡವರಿಗೆ ನೀಡಿರುವ ಶೇ 10ರಷ್ಟು ಮೀಸಲಾತಿ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ನಿರಾಕರಿಸಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 28 ಕ್ಕೆ ಮುಂದೂಡಿದೆ.

ಕೇಂದ್ರ ಸರ್ಕಾರದ ಈ ಮೀಸಲಾತಿ ನಿರ್ಧಾರವು ಸಂವಿಧಾನದ ಮೂಲಭೂತ ರಚನೆಯ ಪ್ರಶ್ನೆಯಾಗಿದೆ ಆದ್ದರಿಂದ ಇದನ್ನು ಸಂವಿಧಾನದ ಪೀಠದಲ್ಲಿ ವಿಚಾರಣೆ ನಡೆಸಬೇಕೆಂದು ಹಿರಿಯ ವಕೀಲ ರಾಜೀವ್ ಧವನ್ ವಾದಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್ ಒಂದು ವೇಳೆ ಅದು ಸಂವಿಧಾನ ಪೀಠದಲ್ಲಿ ನಿರ್ಣಯವಾಗುವುದಾದರೆ ಆ ಕುರಿತು ಪರಿಗಣಿಸಲಾಗುವುದು ಎಂದು ಹೇಳಿದೆ.

ಮಾರ್ಚ್ 28 ರಂದು ಸಂವಿಧಾನ ಪೀಠಕ್ಕೆ ಮೇಲ್ಜಾತಿ ಬಡವರಿಗೆ ನೀಡಿರುವ ಮೀಸಲಾತಿ ವಿಚಾರವನ್ನು ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ತಿಳಿಸಿತು.ಆ ದಿನ ಎಲ್ಲ ಅರ್ಜಿದಾರ ಪಕ್ಷಗಳು ಲಿಖಿತ ಟಿಪ್ಪಣಿಯನ್ನು ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ.ಹಿರಿಯ ವಕೀಲ ರಾಜೀವ್ ಧವನ್ ಸುಪ್ರೀಂಕೋರ್ಟ್ ನ ಆದೇಶದಂತೆ ಮೀಸಲಾತಿ ಮೀತಿ ಶೇ 50ನ್ನು ಮೀರಬಾರದು ಎಂದು ವಾದಿಸಿದರು.

Trending News